ಬೆಂಗಳೂರು: ನಾನು ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಮುಗಿಸಿದ್ದೇನೆ. ನಾನೀಗ ಹಿರಿಯನಾಗಿದ್ದು. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಾಕು. ಹೊಸ ಬ್ಲಡ್ ಬರಬೇಕು. ಹೊಸ ಆಲೋಚನೆಗಳು ಬರಬೇಕು ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದಂತ ಅವರು, ಇಲ್ಲ ಇಲ್ಲ ನನಗೆ ಬೇಡ. ಹೊಸ ರಕ್ತ ಬರಬೇಕು. ಹೊಸ ಬ್ಲಡ್ ಬರಬೇಕು. ಹೊಸ ಆಲೋಚನೆಗಳು ಬರಬೇಕು ಎಂದರು.
ನಾವು ಮೊದಲ ಬಾರಿಯಲ್ಲೇ ಮಂತ್ರಿ ಆದವರು. ನಾನು ಪರಮೇಶ್ವರ್, ರಾಮಲಿಂಗಾರೆಡ್ಡಿ, ಹೆಚ್.ಕೆ ಪಾಟೀಲ್, ನಮ್ಮದೆಲ್ಲ ಆಯ್ತು. ಮುಗೀತು. ನಾವೆಲ್ಲಾ ಹಿರಿಯರಾಗಿದ್ದೇವೆ ಎಂದರು.
ಸಾಕು ನನಗೆ, ಕೆಪಿಸಿಸಿ ಅಧ್ಯಕ್ಷನಾಗಿ 6 ವರ್ಷ ಮುಗಿಸಿದ್ದೇನೆ ಎಂಬುದಾಗಿ ಬೆಂಗಳೂರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
‘ಮಗುವಿನ ದೇಹದ ಮೇಲೆ ನಡೆಯುವ ಯಾವುದೇ ರೀತಿಯ ಲೈಂಗಿಕ ಅತಿಕ್ರಮಣ ಅತ್ಯಾಚಾರ’: ಕೇರಳ ಹೈಕೋರ್ಟ್ ಮಹತ್ವದ ತೀರ್ಪು








