ಪಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ 3-3-2026 ರ ಮಂಗಳವಾರ
ಕೇತುಗ್ರಸ್ತ ಗ್ರಸ್ತೋದಯ “ಚಂದ್ರ ಗ್ರಹಣ” ಬಂದಿದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಗ್ರಹಣ ಸ್ಪರ್ಶಕಾಲ ಮಧ್ಯಾನ 3:13 ನಿಮಿಷ,
ಗ್ರಹಣದ ಮಧ್ಯಕಾಲ ಸಂಜೆ ೦5: 4
ಮೋಕ್ಷಕಾಲ ಸಂಜೆ 6:47.
ಚಂದ್ರ ಗ್ರಹಣದ ಕಾಲಾವಧಿ:-
ಮಧ್ಯಾಹ್ನ 3:23ಕ್ಕೆ ಆರಂಭವಾಗಿ
ಸಂಜೆ 06: 47 ಕ್ಕೆ ಮೋಕ್ಷ
ಗ್ರಹಣ ಕಾಲದಲ್ಲಿ ಜಪ- ತಪ ಮತ್ತು ಅನುಷ್ಠಾನ ಮಾಡುವುದು ಒಳ್ಳೆಯದು.
ಗ್ರಹಣದ ಪರಿಣಾಮಗಳಿಂದ ಮುಕ್ತಿ ಪಡೆಯಲು ಲಲಿತಾ ಸಹಸ್ರನಾಮ, ಶಿವ ಸಹಸ್ರನಾಮ, ವಿಷ್ಣು ಸಹಸ್ರನಾಮ ಅಥವಾ ಸ್ತೋತ್ರಗಳನ್ನು ಪಠಿಸಬಹುದು.
ಗ್ರಹಣದ ನಂತರ ದಾನ ಮಾಡುವುದು ಶುಭಕರ.
ಗ್ರಹಣ ಕಾಲದಲ್ಲಿ ಹೇಳಬೇಕಾದ ಚಂದ್ರಬೀಜ ಮಂತ್ರ :-
ಓಂ ಶ್ರಾಂ ಶ್ರೀಂ ಶ್ರೌಂ ಸ: ಚಂದ್ರಾಯ ನಮಃ .
ಚಂದ್ರಗಾಯಿತ್ರಿ ಮಂತ್ರ:-
ಓಂ ಕ್ಷೀರ ಪುತ್ರಾಯ ವಿದ್ಮಹೇ
ಅಮೃತತತ್ವಾಯ ಧೀಮಹೀ
ತನ್ನೋ ಸೋಮ: ಪ್ರಚೋದಯಾತ್!
ನವಗ್ರಹ ಚಂದ್ರಶಾಂತಿ ಮಂತ್ರ:
ಓಂ ದಧಿಶಂಖ ತುಷಾರಾಭಂ ಕ್ಷೀರೋದಾರ್ಣವ ಸಂಭವಂ!
ನಮಾಮಿ ಶಶಿನಂ ಸೋಮಂ ಶಂಭೋರ್ಮುಕುಟ ಭೂಷಣಂ!!
ಗ್ರಹಣ ಕಾಲದಲ್ಲಿ ಈ ಮಂತ್ರಗಳನ್ನು ಪಠಿಸುವುದರಿಂದ ದೋಷ ನಿವಾರಣೆಯಾಗುತ್ತದೆ ಮತ್ತು ಚಂದ್ರನ ಆಶೀರ್ವಾದ ಪಡೆಯಲು ಮನಸ್ಸಿಗೆ ಶಾಂತಿ ತರಲು ಈ ಮಂತ್ರಗಳು ಸಹಾಯಕವಾಗಿದೆ.
ಸೂರ್ಯ ಚಂದ್ರರಿಗೆ “ಗ್ರಹಣ” ಹಿಡಿಯುವುದು ಏಕೆ? ( ಕಥೆ)
—————–——————–————————
ದೇವಲೋಕದ “ಇಂದ್ರನ” ಪದವಿಗಾಗಿ ದೇವತೆಗಳಿಗೂ- ರಾಕ್ಷಸರಿಗೂ ಆಗಾಗ್ಗೆ ಯುದ್ಧವಾಗುತ್ತಿತ್ತು. ಒಮ್ಮೆ ದಾನವರ ಕೈ ಮೇಲಾದರೆ ಮತ್ತೊಮ್ಮೆ ದೇವತೆಗಳ ಕೈ ಮೇಲಾಗುತ್ತಿತ್ತು. ಹೀಗೆ ದೇವ ದಾನವರಿಗೆ ಯುದ್ಧ ಆದಾಗ ಇಂದ್ರ ತನ್ನ ವಜ್ರಾ ಯುಧದಿಂದ ಅಸುರ ರಾಜ “ಬಲಿ”ಯನ್ನು ಸಂಹಾರ ಮಾಡಿದನು. ತಕ್ಷಣ ರಾಕ್ಷಸರ ಗುರು ಶುಕ್ರಾಚಾರ್ಯರು, ಮೃತ ಸಂಜೀವಿನಿವಿದ್ಯಾ ಬಲದಿಂದ ಬಲಿಯನ್ನು ಬದುಕಿಸಿದರು. ಮತ್ತೆ ಬದುಕಿದ ಬಲಿ ಚಕ್ರವರ್ತಿ ‘ವಿಶ್ವಜಿತ್’ ಎಂಬ ಮಹಾ ಯಾಗ ಮಾಡಿ ಅಗ್ನಿ ದೇವನಿಂದ ಮಹಾ ರಥವನ್ನು, ತಾತ ಪ್ರಹ್ಲಾದನಿಂದ ಮಹಾ ಧನುಸ್ಸನ್ನು, ಶಕ್ತಿಶಾಲಿಯಾದ ಅಕ್ಷಯ ಬತ್ತಳಿಕೆಯನ್ನು ಪಡೆದು, ಪುನಃ ಇಂದ್ರ ನೊಡನೆ ಯುದ್ಧ ಮಾಡಿ ಇಂದ್ರನನ್ನು ಸೋಲಿಸಿ ‘ಬಲಿ’ ದೇವಲೋಕದ ಅಧಿಪತಿ ಯಾದನು. ಈಗ ರಾಕ್ಷಸರ ಕೈ ಮೇಲಾಗಿ, ದೇವತೆಗಳು ಕೈಕಟ್ಟಿ ಕುಳಿತರು. ಬಲಿಯ ಆಡಳಿತದಲ್ಲಿ ರಾಜ್ಯ ಸುಭೀಕ್ಷವಾಗಿತ್ತು. ಭೂಮಿತಾಯಿ ತನ್ನಲ್ಲಿರುವ ಬೀಜದ ಫಲ- ಧಾನ್ಯಗಳನ್ನು ಜೋಪಾನವಾಗಿಟ್ಟು ಮನುಷ್ಯರಿಗೆ ಕೊಡುತ್ತಿದ್ದಳು. ಮನುಷ್ಯರು ಸುಖವಾಗಿಯೇ ಇದ್ದರು. ಆದರೆ ದೇವಲೋಕದಲ್ಲಿ “ಇಂದ್ರ” ನ ಪದವಿ ಇಲ್ಲದೆ ದೇವೇಂದ್ರ ಹಾಗೂ ದೇವತೆಗಳು ಕಷ್ಟ ಪಡುತ್ತಿದ್ದರು. ಇಂದ್ರನಿಗೆ ಮತ್ತೆ ರಾಜ್ಯವನ್ನು ಕೊಡಿಸುವುದು ವಿಷ್ಣುವಿನ ಕರ್ತವ್ಯವಾಗಿತ್ತು.
ವಿಷ್ಣುವಿನ ಜೊತೆ ದೇವತೆಗಳು ಚರ್ಚಿಸಿದರು. ದೇವತೆಗಳು ಸಮುದ್ರಮಥನದಿಂದ ಬರುವ ಅಮೃತ ಸೇವಿಸಿ ಚಿರಂಜೀವಿಗಳಾಗಬೇಕೆಂದು ತೀರ್ಮಾನಿಸಿ ಸಮುದ್ರ ಮಥನ ಮಾಡಲು ಮುಂದಾದರು. ದೇವತೆಗಳಿಂದ ಇದು ಸಾಧ್ಯವಿಲ್ಲವೆಂದು ಉಪಾಯದಿಂದ ರಾಕ್ಷಸರನ್ನು ಕರೆದುಕೊಂಡರು. ಮಂದರ ಪರ್ವತವನ್ನೇ ಕಡಗೋಲಾಗಿದೆ ವಾಸುಕಿಯನ್ನು ಹಗ್ಗವಾಗಿಯೂ ಮಾಡಿಕೊಂಡು ಸಮುದ್ರ ಮಥನ ಮಾಡಿದರು. ಭಾರಕ್ಕೆ ಕುಸಿದ ಮಂದಾರ ಪರ್ವತವನ್ನು ವಿಷ್ಣು ಕೂರ್ಮಾ ವತಾರದಲ್ಲಿ ಬೆನ್ನ ಮೇಲೆ ಹೊತ್ತನು. ಮಥನದಿಂದ ಮೊದಲು ಬಂದ ವಿಷವನ್ನು ಲೋಕ ಕಲ್ಯಾಣಕ್ಕಾಗಿ ಶಿವನು ಸೇವಿಸಿದನು. ಅದು ಗಂಟಲಿನಿಂದ ಕೆಳಗೆ ಇಳಿಯ ದಂತೆ ಪಾರ್ವತಿ ಕೈ ಅಡ್ಡ ಹಿಡಿದಳು. ಶಿವನ ಗಂಟಲಿನಿಂದ ಕೆಳಗೆ ಬ್ರಹ್ಮಾಂಡವೇ ಅಡಗಿದೆ. ಬ್ರಹ್ಮಾಂಡ ನಾಶವಾಗದಂತೆ ಪಾರ್ವತಿ ತಡೆದಳು. ನಿಂತ ವಿಷದಿಂದ ಶಿವನ ಕುತ್ತಿಗೆ ಬಣ್ಣ ನೀಲಿಯಾಯಿತು. ಆದ್ದರಿಂದ ಶಿವನನ್ನು ನೀಲಕಂಠ, ವಿಷಕಂಠ ಎಂದು ಕರೆದರು.
ನಂತರ ಮಥನದಿಂದ ಉಚ್ಚೈಶ್ರವ, ಐರಾವತ, ಅಪ್ಸರೆಯರು ಗಂಧರ್ವರು, ಕಾಮಧೇನುವಿನಂಥ ಅಮೂಲ್ಯ ವಸ್ತುಗಳು ಬಂದವು ಅದರಲ್ಲಿ ಕೌಸ್ತುಭ ಮಣಿಯನ್ನು ವಿಷ್ಣು ಹೃದಯದಲ್ಲಿ ಇಟ್ಟುಕೊಂಡನು. ನಂತರ ಲಕ್ಷ್ಮಿ ಬಂದು ವಿಷ್ಣುವಿನ ಹೃದಯದಲ್ಲಿ ನೆಲೆಸಿದಳು. ಮುಂದೆ ಎಲ್ಲರೂ ಕಾಯುತ್ತಿದ್ದ ಅಮೃತ
ಕಲಶವನ್ನು ಹೊತ್ತು ಋಷಿ ಧನ್ವಂತರಿ ಬಂದನು. ರಾಕ್ಷಸರು ಅಮೃತ ಕಲಶವನ್ನು ಧನ್ವಂತರಿ ಕೈಯಿಂದ ಕಿತ್ತುಕೊಂಡರು. ದೇವತೆಗಳು ಹೆದರಿದರು. ವಿಷ್ಣು ಎಲ್ಲವನ್ನು ಸರಿ ಮಾಡುವೆ ಎಂದು ಸಮಾಧಾನ ಮಾಡಿದನು.
ಹಾಗೆ ಬಂದ ಅಮೃತವನ್ನು ರಾಕ್ಷಸರು ನನಗೆ, ತನಗೆ ಎಂದು ಜಗಳ ಹೊಡೆಯು ತ್ತಿರುವಾಗ , ಮೋಹಿನಿ ಬಂದಳು ಅವಳ ಸೌಂದರ್ಯಕ್ಕೆ ಮರುಳಾದ ರಾಕ್ಷಸರು ಸುಂದರಿ ನೀನೇ ನಮಗೆ ಅಮೃತ ಹಂಚಿ ಜಗಳ ಬಗ್ಗೆ ಹರಿಸು ಎಂದರು. ಮೋಹಿನಿ ನಾಚುತ್ತಾ ಬಳುಕುತ್ತಾ ನಾನು ಅಷ್ಟು ಒಳ್ಳೆಯವಳಲ್ಲ. ನಾನೊಬ್ಬ ಜಾರಿಣಿ ಇಂದು ಒಂದು ಕಡೆಯಾದರೆ, ನಾಳೆ ಮತ್ತೊಂದು ಕಡೆ ಹೋಗುವೆ. ಇವತ್ತು ಒಬ್ಬನಿಗಾದರೆ, ನಾಳೆ ಮತ್ತೊಬ್ಬನಲ್ಲಿ ಹೋಗುವೆ, ಎಂದು ವಯ್ಯಾರದಿಂದ ನುಲಿದಳು, ಮತ್ತೆ ನೋಡಿ ನೀವು ಒಳ್ಳೆಯವರು. ನಿಷ್ಠಾವಂತರು ಯಾರು ನನ್ನ ಜೊತೆ ಬರುವುದಿಲ್ಲ ಎಂದಳು. ರಾಕ್ಷಸರು ಅವಳು ಹೇಳುವ ಒಂದಕ್ಷರವನ್ನು ಕೇಳಿಸಿಕೊಳ್ಳಲಿಲ್ಲ. ಏಕೆಂದರೆ ಅವಳ ಸೌಂದರ್ಯದಲ್ಲಿ ಮೈಮರೆತಿದ್ದವು. ಸುಂದರಿ ನೀನು ಹೇಗಿದ್ದರೂ ಸರಿ ನೀನೇ ನಿನ್ನ ಕೈಯಾರೆ ಅಮೃತ ಹಂಚು ಎಂದರು. ಮೋಹಿನಿ ನಗುತ್ತಾ, ನನ್ನ ದೊಂದು ಶರತ್ತು ಇದೆ. ನೀವೆಲ್ಲ ಸ್ನಾನಾದಿ ನಿತ್ಯ ಕರ್ಮಗಳನ್ನು ಮಾಡಿ ಬನ್ನಿ ದೇವತೆಗಳಿಗೂ ನಿಮಗೂ ಅಮೃತ ಸಮಭಾಗವಾಗಿ ಹಂಚುತ್ತೇನೆ ಎಂದಳು. ಅಸುರರು ಆಯಿತಾಯಿತು ನಿನ್ನಿಷ್ಟ ಎಂದರು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ದೇವತೆಗಳಿಗೆ ಮೋಹಿನಿ ಯಾರೆಂದು ತಿಳಿದಿತ್ತು. ವಯ್ಯಾರದಿ ಮೋಹಿನಿ ಅಸುರರನ್ನು ಒಂದು ಸಾಲಿನಲ್ಲಿ , ಎದುರು ಸಾಲಿನಲ್ಲಿ ಸುರರನ್ನು ಕೂರಿಸಿದಳು. ಅಮೃತ ಕಲಶ ಹಿಡಿದು ರಾಕ್ಷಸರ ಕಡೆಗೆ ಮೋಹಕ ನೋಟ, ವ್ಯಯಾರದ ಬಿಂಕ ನಡಿಗೆ ತೋರಿಸಿ, ಸುರರ ಕಡೆ ತಿರುಗಿ ಅಮೃತವನ್ನು ಕೊಡುತ್ತಿದ್ದಳು. ರಾಕ್ಷಸರಿಗೆ ಅರಿವಿರಲಿಲ್ಲ ಖಾಲಿ ಕೈಯನ್ನು ಎತ್ತಿ ಆಹಾ ಓಹೋ ಎಂದು ಕುಡಿಯುತ್ತಿದ್ದವು. ರಾಕ್ಷಸರ ಸಾಲಿನಲ್ಲಿ ಕುಳಿತಿದ್ದ ರಾಕ್ಷಸಿ ಸಿಂಹಿಕೆಯ ಮಗ ಸ್ವರಭಾನು ಎಂಬುವನು
ಮೋಹಿನಿ ಮಾಡುವ ನಾಟಕ ಗಮನಿಸಿ ತಾನು ವೇಷ ಮರೆಸಿಕೊಂಡು ದೇವತೆಗಳ ಸಾಲಿನಲ್ಲಿ ಕುಳಿತನು. ಮೋಹಿನಿ ಅವನ ಕೈಗೂ ಅಮೃತ ಹಾಕಿದಳು, ಇನ್ನೇನು ಕುಡಿಯಲು ಕೈ ಎತ್ತಿ ಬಾಯಿಗೆ ಒಯ್ದಿದ್ದನು. ಇದನ್ನು ಮೇಲೆ ಆಕಾಶದಲ್ಲಿ ಕುಳಿತ ಸೂರ್ಯ- ಚಂದ್ರರು ನೋಡಿದರು. ವಿಷ್ಣುವಿಗೆ ವಿಷಯ ತಿಳಿಸಿದರು. ಮೋಹಿನಿ ವೇಷದಲ್ಲಿದ್ದ ವಿಷ್ಣು ತನ್ನ ಸುದರ್ಶನ ಚಕ್ರದಿಂದ ಸ್ವರಬಾನು ರಾಕ್ಷಸನ ಕುತ್ತಿಗೆಯ ನ್ನು ಕತ್ತರಿಸಿದಾಗ ರಾಕ್ಷಸನ ರುಂಡ- ಮುಂಡ ಬೇರೆ ಯಾಯಿತು ಆದರೆ, ಅವನು ಅಮೃತವನ್ನು ಕುಡಿಯಲು ಹೊರಟಾಗ ಒಂದು ಹನಿ ಗಂಟಲಲ್ಲಿ ಇಳಿದ ಕಾರಣ
ಅವನ ರುಂಡ- ಮುಂಡಗಳು ಬೇರೆಯಾದವು ಸಾಯಲಿಲ್ಲ. ಮುಂದೆ ರುಂಡ ಮುಂಡಗಳೆ ರಾಹು ಕೇತುಗಳಾಯಿತು. ಕೃಷ್ಣನು ತನ್ನ ಮೋಹಿನಿ ಅವತಾರ ಮುಗಿಸಿ ಮಾಯವಾದಳು. ಮೋಹಿನಿ ಗುಂಗಿನಲ್ಲೇ ಮೈ ಮರೆತಿದ್ದ ರಾಕ್ಷಸರು ಎಚ್ಚರಗೊಂಡ ರು. ಮೋಸವಾಗಿದೆ ಎಂದು ತಿಳಿಯಿತು. ಅಸುರರಿಗೆ ಅಮೃತ ಸಿಗದೇ ದುರ್ಬಲ ರಾದರು. ಅಮೃತ ಸೇವಿಸಿದ ದೇವತೆಗಳು ಪ್ರಬಲರಾಗಿ ದೇವಲೋಕದ ಅಧಿಕಾರ
ಪಡೆದರು.
ರಾಹು ಕೇತುಗಳಿಗೆ, ಸೂರ್ಯ ಚಂದ್ರರು ಚಾಡಿ ಹೇಳಿದರೆಂದು ಅವರ ಮೇಲೆ ಕೋಪ ಬಂದಿತು. ಆ ಸಿಟ್ಟಿ ನಿಂದ ರಾಹು- ಕೇತು ಸೂರ್ಯ ಚಂದ್ರರನ್ನು ನುಂಗಲು ಬರುತ್ತಾರೆ ಇದನ್ನು ಗ್ರಹಣ ಕಾಲ ಎನ್ನುತ್ತಾರೆ. ಇದೇ ಕಾರಣದಿಂದ ಸೂರ್ಯ ಚಂದ್ರರಿಗೆ ಗ್ರಹಣವಾಗಿ ರಾಹು- ಕೇತು ಕಾಡುತ್ತಾರೆ. ಸೂರ್ಯ- ಚಂದ್ರರ ರಕ್ಷಣೆಗಾಗಿ ನಾವು ಪ್ರಾರ್ಥನೆ ಮಾಡಬೇಕು. ಸೂರ್ಯ ಚಂದ್ರರೇ ಒದ್ದಾಡುವ ಗ್ರಹಣ ಕಾಲದಲ್ಲಿ ಆಹಾರ ತಿಂದರೆ ಪಚನಕ್ರಿಯೆ ಆಗುವುದಿಲ್ಲ. ಸಕಲ ಜೀವರಾಶಿ ಗಳ ಬದುಕಾದ ಸೂರ್ಯ ಚಂದ್ರರು ಕಷ್ಟದಲ್ಲಿರುವಾಗ ಉಪವಾಸವಿದ್ದು ಭಗವಂತನ ಧ್ಯಾನ ಮಾಡಬೇಕು.
ಧ್ಯಾನಂ|
ಸಮಂ ಚತುರ್ಭುಜಂ
ವಂದೇ ಕೇಯೂರ
ಮಕಟೋಜ್ವಲಂ|
ವಾಸುದೇವಸ್ಯ ನಯನಂ
ಶಂಕರಸ್ಯ ಚ ಭೂಷಣಂ||
ಏವಂ ಧ್ಯಾತ್ವಾ ಜಪೇನಿತ್ಯಂ
ಶಶಿನಃ ಕವಚಂ ಶುಭಂ ||
ಏಕಚಕ್ರೋ ರಥೋ ಯಸ್ಯ
ದಿವ್ಯ ಕನಕ ಭೋಷಿತ:
ಸ ಮೇ ಭವತು ಸುಪ್ರೀತ:
ಪಂಚ ಹಸ್ತೋ ದಿವಾಕರ:








