Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot
BREAKING NEWS

BREAKING : ಬೆಂಗಳೂರಿನಲ್ಲಿ ಭೀಕರ ಅಗ್ನಿ ಅವಘಡ : ಓರ್ವ ಮಹಿಳೆ ಸಾವು, ಮೂವರ ರಕ್ಷಣೆ !

03/03/2026 6:03 AM

ಇಂದು ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ !

03/03/2026 5:59 AM

ರಾಜ್ಯದಲ್ಲಿ `ಆಸ್ತಿ’ ಖರೀದಿದಾರರಿಗೆ ಬಿಗ್ ಶಾಕ್ : ಏ.1ರಿಂದ ಮಾರ್ಗಸೂಚಿ ದರ ಭಾರಿ ಹೆಚ್ಚಳ ಸಾಧ್ಯತೆ !

03/03/2026 5:56 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಇಂದು ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ !
KARNATAKA

ಇಂದು ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ !

By kannadanewsnow5703/03/2026 5:59 AM

ಬೆಂಗಳೂರು: ಇಂದು ‘ಕೇತುಗ್ರಸ್ತ ರಕ್ತ ಚಂದ್ರಗ್ರಹಣ’ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳ ಪೂಜೆ ಮತ್ತು ದರ್ಶನದ ಸಮಯದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದೆ. ಬಹುತೇಕ ದೇವಾಲಯಗಳಲ್ಲಿ ಗ್ರಹಣ ಕಾಲದಲ್ಲಿ ದರ್ಶನ ಸ್ಥಗಿತಗೊಳಿಸಿ, ಶುದ್ಧೀಕರಣದ ನಂತರವಷ್ಟೇ ಭಕ್ತರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಬೆಂಗಳೂರಿನ ಪ್ರಮುಖ ದೇವಾಲಯಗಳ ವಿವರ:

ಬನಶಂಕರಿ ದೇವಾಲಯ: ಗ್ರಹಣದ ಹಿನ್ನೆಲೆಯಲ್ಲಿ ಯಾವುದೇ ವಿಶೇಷ ಪೂಜೆಗಳಿರುವುದಿಲ್ಲ. ಸಂಜೆ 7 ಗಂಟೆಯ ನಂತರವಷ್ಟೇ ನಿತ್ಯ ಪೂಜೆಗಳು ಪುನಾರಂಭಗೊಳ್ಳಲಿವೆ.

ಗವಿಗಂಗಾಧರೇಶ್ವರ ದೇವಾಲಯ: ಬೆಳಿಗ್ಗೆ 9 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಾಗುವುದು. ಸಂಜೆ 7.45ರ ನಂತರ ದರ್ಶನಕ್ಕೆ ಅವಕಾಶವಿದ್ದು, ಮಾರ್ಚ್ 4ರಂದು ‘ಗ್ರಹಣ ಶಾಂತಿ ಹೋಮ’ ನಡೆಯಲಿದೆ.

ಕಾಡುಮಲ್ಲೇಶ್ವರ ದೇವಾಲಯ: ಬೆಳಿಗ್ಗೆ 11 ಗಂಟೆಗೆ ಬಾಗಿಲು ಮುಚ್ಚಲಿದ್ದು, ರಾತ್ರಿ 7.30ಕ್ಕೆ ಪುನಃ ತೆರೆಯಲಾಗುವುದು. ಮರುದಿನ ನವಗ್ರಹ ಶಾಂತಿ ಹೋಮ ಆಯೋಜಿಸಲಾಗಿದೆ.

ದೊಡ್ಡ ಗಣಪತಿ ದೇವಾಲಯ: ಗ್ರಹಣ ಮೋಕ್ಷವಾದ ನಂತರ ಅಂದರೆ ರಾತ್ರಿ 7.45ಕ್ಕೆ ಭಕ್ತರಿಗಾಗಿ ಬಾಗಿಲು ತೆರೆಯಲಿದೆ.

ಬಂಡೆ ಮಹಾಕಾಳಿ ದೇವಾಲಯ (ವಿಶೇಷ): ಇಲ್ಲಿ ಗ್ರಹಣದ ಅವಧಿಯಲ್ಲೂ ದೇವಾಲಯ ತೆರೆದಿರುತ್ತದೆ. ಈ ಸಮಯದಲ್ಲಿ ದೇವಿಗೆ ತುಪ್ಪದ ಲೇಪನ ಮಾಡಿ ವಿಶೇಷ ಹೋಮ ನಡೆಸಲಾಗುವುದು. ಭಕ್ತರಿಗೆ ದರ್ಶನಕ್ಕೆ ಮುಕ್ತ ಅವಕಾಶವಿದೆ.

ರಾಜ್ಯದ ಇತರ ಪ್ರಮುಖ ಕ್ಷೇತ್ರಗಳ ಮಾಹಿತಿ:

ಶ್ರೀ ಕ್ಷೇತ್ರ ಧರ್ಮಸ್ಥಳ:

ದಕ್ಷಿಣ ಕನ್ನಡದ ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳದಲ್ಲಿ ಮಾರ್ಚ್ 3ರ ಮಂಗಳವಾರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಬೆಳಿಗ್ಗೆ: 6.30 ರಿಂದ ಮಧ್ಯಾಹ್ನ 1.30 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶ.

ಮಧ್ಯಾಹ್ನ: 1.30 ರಿಂದ ಸಂಜೆಯವರೆಗೆ ದರ್ಶನ ಸ್ಥಗಿತ.

ರಾತ್ರಿ: 7.30 ಗಂಟೆಯ ನಂತರ ಎಂದಿನಂತೆ ದರ್ಶನ ಲಭ್ಯವಿರುತ್ತದೆ.

ಚಾಮುಂಡೇಶ್ವರಿ ದೇವಾಲಯ, ಮೈಸೂರು:

ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8.30ರವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿರುವುದಿಲ್ಲ. ಗ್ರಹಣದ ನಂತರ ಗರ್ಭಗುಡಿ ಶುದ್ಧೀಕರಣ ಕಾರ್ಯಗಳು ನೆರವೇರಲಿವೆ.

ಗಮನಿಸಿ: ಗ್ರಹಣವು ಮಧ್ಯಾಹ್ನ 3.10 ಕ್ಕೆ ಆರಂಭವಾಗಿ ಸಂಜೆ 6.47 ಕ್ಕೆ ಮುಕ್ತಾಯವಾಗಲಿದೆ. ದೂರದ ಊರುಗಳಿಂದ ಬರುವ ಭಕ್ತಾದಿಗಳು ಈ ಬದಲಾದ ಸಮಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರವಾಸವನ್ನು ಯೋಜಿಸಲು ದೇವಸ್ಥಾನದ ಆಡಳಿತ ಮಂಡಳಿಗಳು ವಿನಂತಿಸಿವೆ.

Ketugrasta lunar eclipse today: Change in darshan timings of important temples in the state!
Share. Facebook Twitter LinkedIn WhatsApp Email

Related Posts

BREAKING NEWS

BREAKING : ಬೆಂಗಳೂರಿನಲ್ಲಿ ಭೀಕರ ಅಗ್ನಿ ಅವಘಡ : ಓರ್ವ ಮಹಿಳೆ ಸಾವು, ಮೂವರ ರಕ್ಷಣೆ !

03/03/2026 6:03 AM1 Min Read

ರಾಜ್ಯದಲ್ಲಿ `ಆಸ್ತಿ’ ಖರೀದಿದಾರರಿಗೆ ಬಿಗ್ ಶಾಕ್ : ಏ.1ರಿಂದ ಮಾರ್ಗಸೂಚಿ ದರ ಭಾರಿ ಹೆಚ್ಚಳ ಸಾಧ್ಯತೆ !

03/03/2026 5:56 AM1 Min Read

ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!

03/03/2026 5:54 AM1 Min Read
Recent News
BREAKING NEWS

BREAKING : ಬೆಂಗಳೂರಿನಲ್ಲಿ ಭೀಕರ ಅಗ್ನಿ ಅವಘಡ : ಓರ್ವ ಮಹಿಳೆ ಸಾವು, ಮೂವರ ರಕ್ಷಣೆ !

03/03/2026 6:03 AM

ಇಂದು ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ !

03/03/2026 5:59 AM

ರಾಜ್ಯದಲ್ಲಿ `ಆಸ್ತಿ’ ಖರೀದಿದಾರರಿಗೆ ಬಿಗ್ ಶಾಕ್ : ಏ.1ರಿಂದ ಮಾರ್ಗಸೂಚಿ ದರ ಭಾರಿ ಹೆಚ್ಚಳ ಸಾಧ್ಯತೆ !

03/03/2026 5:56 AM

ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!

03/03/2026 5:54 AM
State News
BREAKING NEWS KARNATAKA

BREAKING : ಬೆಂಗಳೂರಿನಲ್ಲಿ ಭೀಕರ ಅಗ್ನಿ ಅವಘಡ : ಓರ್ವ ಮಹಿಳೆ ಸಾವು, ಮೂವರ ರಕ್ಷಣೆ !

By kannadanewsnow5703/03/2026 6:03 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, ಓರ್ವ ಮಹಿಳೆ ಸಾವನ್ನಪ್ಪಿದ್ದು, ಮೂವರನ್ನು ರಕ್ಷಣೆ ಮಾಡಲಾಗಿದೆ. ಬೆಂಗಳೂರಿನ ಗಾಯಿತ್ರಿ…

ಇಂದು ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ !

03/03/2026 5:59 AM

ರಾಜ್ಯದಲ್ಲಿ `ಆಸ್ತಿ’ ಖರೀದಿದಾರರಿಗೆ ಬಿಗ್ ಶಾಕ್ : ಏ.1ರಿಂದ ಮಾರ್ಗಸೂಚಿ ದರ ಭಾರಿ ಹೆಚ್ಚಳ ಸಾಧ್ಯತೆ !

03/03/2026 5:56 AM

ರಾಜ್ಯದ ಮಹಿಳಯರಿಗೆ ಗುಡ್ ನ್ಯೂಸ್ : `ಗೃಹಲಕ್ಷ್ಮಿ ಬ್ಯಾಂಕ್‌’ ಗೆ ಸರ್ಕಾರ ಅಸ್ತು, ಸಿಗಲಿದೆ 3 ಲಕ್ಷ ರೂ.ವರೆಗೆ ಸಾಲ!

03/03/2026 5:54 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.