ಬೆಂಗಳೂರು: ರಾಜ್ಯ ಸರ್ಕಾರದಿಂದ ನೇಮಕ ಮಾಡಲಾಗಿದ್ದಂತ 12 ನಗರಾಭಿವೃದ್ಧಿ ಪ್ರಾಧಇಕಾರದ ಅಧ್ಯಕ್ಷರನ್ನು ಮುಂದಿನ ಆದೇಶದವರೆಗೆ ಹಾಲಿ ಸ್ಥಳದಲ್ಲೇ ಮುಂದುವರೆಸಿ ಮಹತ್ವದ ಆದೇಶ ಮಾಡಲಾಗಿದೆ.
ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 3(3)ರ ಅನ್ವಯ ಹಾಗೂ 3(4) ಅಡಿಯಲ್ಲಿ ಪ್ರದತ್ತವಾದಂತ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರುಗಳನ್ನು ಈ ತಕ್ಷಣದಿಂದ ಜಾರಿ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ಹಾಲಿ ಸ್ಥಳಗಳಲ್ಲಿ ಮುಂದುವರೆಸಿದೆ ಎಂದಿದ್ದಾರೆ.
ಹೀಗಿದೆ 12 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಮುಂದುವರೆಸಿದಂತ ಪಟ್ಟಿ
- ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಶಾಕಿರ ಸನದಿ ಮುಂದುವರೆಸಲಾಗಿದೆ.
- ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಂಜನೇಯಲು ಜೆ.ಎಸ್ ಮುಂದುವರೆಸಲಾಗಿದೆ.
- ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ತಾಜ್ ಪೀರ್
- ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸದಾಶಿವ ಉಲ್ಲಾಳ್
- ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹೆಚ್.ಎಸ್ ಸುಂದರೇಶ್
- ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೇಶವ ರೆಡ್ಡಿ
- ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಬಸವರಾಜ್ ಜಾಬ ಶೆಟ್ಟಿ
- ಕಲಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾರಿ ಮಜರ್ ಖಾನ್
- ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಲಕ್ಷಣರಾವ್ ಚಿಂಗಳೆ ಬಿನ್ ಅಜ್ಜಪ್ಪ
- ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸಣ್ಣ ಫಕೀರ್ ಗೌಡ ನಿಂಗನಗೌಡ
- ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಕಬರಸಾಬ್ ಬಬರ್ಜಿ
- ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮೊಹಮ್ಮದ್ ಇಮಾಂ ನಿಯಾಜಿ ಮುಂದುವರೆಸಿ ಸರ್ಕಾರ ಆದೇಶಿಸಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ಪತ್ರಕರ್ತರ ವೃತ್ತಿಯೇ ಸವಾಲಿನದ್ದು, ಧೈರ್ಯ, ನಿಷ್ಠೆಯಿಂದ ಕೆಲಸ ಮಾಡಿ: KUWJ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು
BIG NEWS: ರಾಜ್ಯಾಧ್ಯಂತ ಇ-ಸ್ವತ್ತು ತಂತ್ರಾಂಶದಡಿ 1,14,907 ಅರ್ಜಿಗಳನ್ನು ಅನುಮೋದನೆ








