ಬೆಂಗಳೂರು: ಕಾಂತಾರ ಚಾಪ್ಟರ್-1ರ ಪಾತ್ರದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರ ಸಂಬಂಧ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣ ರದ್ದು ಕೋರಿ ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಇಂದು ಈ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದಂತ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಲಾಯಿತು. ಯುದ್ಧದಿಂದಾಗಿ ಇಂಗ್ಲೇಂಡ್ ನಲ್ಲೇ ರಣವೀರ್ ಸಿಂಗ್ ಪರ ವಕೀಲರು ಉಳಿದಿದ್ದರು. ವಿಮಾನವಿಲ್ಲದೇ ಭಾರತಕ್ಕೆ ವಾಪಾಸಾಗುತ್ತಿಲ್ಲವೆಂದು ಸಜನ್ ಪೂವಯ್ಯ ಹೇಳಿಕೆ ನೀಡಿದರು.
ನಟ ರಣವೀರ್ ಸಿಂಗ್ ಗೆ ನೋಟಿಸ್ ನೀಡಿದ್ದೇವೆ. ಸಮಯ ಕೇಳಿದ್ದಾರೆ ಎಂಬುದಾಗಿ ಸರ್ಕಾರದ ಪರ ಹೆಚ್ಚುವರಿ ಎಸ್ ಪಿ ಪಿ ಬಿಎನ್ ಜಗದೀಶ್ ನ್ಯಾಯಾಲಯದ ಗಮನಕ್ಕೆ ತಂದರು. ಹೀಗಾಗಿ ಬಲವಂತದ ಕ್ರಮ ಕೈಗೊಳ್ಳದಂತೆ ನೀಡಿದ್ದ ಆದೇಶವನ್ನು ಮಾರ್ಚ್.9ರವರೆಗೆ ಹೈಕೋರ್ಟ್ ವಿಸ್ತರಿಸಿ ಆದೇಶಿಸಿದೆ.
ರಾಜ್ಯದಲ್ಲಿ ಖಾಲಿ ಇರುವ 56,000 ಹುದ್ದೆಯನ್ನು ಭರ್ತಿ ಮಾಡಲು ಐತಿಹಾಸಿಕ ನಿರ್ಧಾರ: ಸಚಿವ ಮಧು ಬಂಗಾರಪ್ಪ
BIG NEWS: ರಾಜ್ಯಾಧ್ಯಂತ ಇ-ಸ್ವತ್ತು ತಂತ್ರಾಂಶದಡಿ 1,14,907 ಅರ್ಜಿಗಳನ್ನು ಅನುಮೋದನೆ








