ಆಸ್ಟಿನ್, ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ ರಾಜ್ಯದ ರಾಜಧಾನಿ ಆಸ್ಟಿನ್ನಲ್ಲಿ ಭಾನುವಾರ ಮುಂಜಾನೆ ಭೀಕರ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಪ್ರಸಿದ್ಧ ಮನೋರಂಜನಾ ವಲಯವಾದ ಸಿಕ್ಸ್ತ್ ಸ್ಟ್ರೀಟ್ನಲ್ಲಿರುವ ‘ಬಫೋರ್ಡ್ಸ್ ಬ್ಯಾಕ್ಯಾರ್ಡ್ ಬೀರ್ ಗಾರ್ಡನ್’ ಬಾರ್ ಹೊರಗೆ ನಡೆದ ಈ ದಾಳಿಯಲ್ಲಿ ಇಬ್ಬರು ನಾಗರಿಕರು ಮತ್ತು ದಾಳಿಕೋರ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಹಾಗೂ 14 ಜನರು ಗಾಯಗೊಂಡಿದ್ದಾರೆ.
ಏನಿದು ಘಟನೆ?
ವರದಿಗಳ ಪ್ರಕಾರ, 53 ವರ್ಷದ ದಗಾ ದಿಯಾಗ್ನೆ (Ndiaga Diagne) ಎಂಬ ವ್ಯಕ್ತಿ ತನ್ನ ಎಸ್ಯುವಿ (SUV) ವಾಹನದಲ್ಲಿ ಬಾರ್ ಬಳಿ ಬಂದು ಮೊದಲು ಕಿಟಕಿಯಿಂದಲೇ ಪಿಸ್ತೂಲ್ ಮೂಲಕ ಗುಂಡು ಹಾರಿಸಿದ್ದಾನೆ. ನಂತರ ವಾಹನ ನಿಲ್ಲಿಸಿ ರೈಫಲ್ನೊಂದಿಗೆ ಕೆಳಗಿಳಿದು ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಮನಬಂದಂತೆ ಗುಂಡಿನ ಮಳೆಗರೆದಿದ್ದಾನೆ. ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಪ್ರತಿಕ್ರಿಯಿಸಿ ದಾಳಿಕೋರನನ್ನು ಹೊಡೆದುರುಳಿಸಿದ್ದಾರೆ.
ಉಗ್ರಕೃತ್ಯದ ಶಂಕೆ ಮತ್ತು ಎಫ್ಬಿಐ ತನಿಖೆ:
ಈ ದಾಳಿಯನ್ನು ಅಮೆರಿಕದ ಗುಪ್ತಚರ ಸಂಸ್ಥೆ ಎಫ್ಬಿಐ (FBI) ‘ಸಂಭಾವ್ಯ ಭಯೋತ್ಪಾದನಾ ಕೃತ್ಯ’ ಎಂದು ಪರಿಗಣಿಸಿ ತನಿಖೆ ಆರಂಭಿಸಿದೆ.








