ಶಿವಮೊಗ್ಗ: ಸರಕಾರಿ ಸೇವೆಯಿಂದ ನಿವೃತ್ತಿ ಹೊಂದುವಾಗ ನಮ್ಮ ಮನಸ್ಸಿನಲ್ಲಿ ಉಳಿಯಬೇಕಾಗಿರುವುದು ಎರಡು ಸಂಗತಿ. ಒಂದು ಶ್ರದ್ದೆಯಿಂದ ಜನ ಸೇವೆ ಮಾಡಿದ ಆತ್ಮತೃಪ್ತಿ ಮತ್ತು ಸಮಾಜದ ನಡುವೆ ಉತ್ತಮ ಹೆಸರು, ಮನುಷ್ಯನಿಗೆ ಆತ್ಮ ತೃಪ್ತಿ ಬಹಳ ಮುಖ್ಯ ಎಂದು ಸಾಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸ್ತಿರೋಗ ತಜ್ಞ ಡಾ ನಾಗೇಂದ್ರಪ್ಪ ಹೇಳಿದರು.
ಶನಿವಾರದಂದು ಶಿವಮೊಗ್ಗದ ಸಾಗರದ ಆಸ್ಪತ್ರೆ ಸಭಾಂಗಣದಲ್ಲಿ ಏರ್ಪಡಿಸಿದ್ದಂತ ಹಿರಿಯ ಸ್ತಿರೋಗ ವೈದ್ಯ ಎಲ್ಡೋಸ್ ವರ್ಗಿಸ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು, ಆಸ್ಪತ್ರೆಯ ಪರವಾಗಿ ಸನ್ಮಾನಿಸಿ ಮಾತನಾಡಿದಂತ ಅವರು, ಎಲ್ಡೋಸ್‌ರವರು ಒಬ್ಬ ಹಿರಿಯ ವೈದ್ಯರಾಗಿ ಕಿರಿಯರನ್ನೂ ಅತ್ಯಂತ ಗೌರವದಿಂದ ನೋಡುವ, ನಡೆದುಕೊಳ್ಳುವ ಸರಳತೆ ಮಾದರಿಯಾಗಿದೆ ಹಾಗೂ ಕನ್ನಡ ಸಾಹಿತ್ಯ ಕುರಿತು ಅವರಲ್ಲಿರುವ ಆಗಾದವಾದ ಜ್ಞಾನ ಮುಂದೆ ನಮ್ಮ ಭಾಷೆಗೆ ಕೊಡುಗೆಯಾಗಿ ದೊರೆಯಲಿ ಎಂದರು.
ಬೀಳ್ಕೋಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ವೈದ್ಯ ಎಲ್ಡೋಸ್, ಸರಕಾರಿ ಹುದ್ದೆಯನ್ನು ಎಂದೂ ಕೂಡ ಅಗೌರವದಿಂದ ಕಾಣಬಾರದು ಏಕೆಂದರೆ ನಮಗೆ ಉತ್ತಮ ಬದುಕನ್ನು ಕಟ್ಟಿಕೊಟ್ಟಿರುವುದು ಸರಕಾರಿ ಹುದ್ದೆ ಎಂದ ಅವರು ವೃತ್ತಿಗೆ ನಿವೃತ್ತಿ ಇದ್ದರೂ ಪ್ರವೃತ್ತಿಗೆ ನಿವೃತ್ತಿ ಇಲ್ಲ, ಹೋಗುವಾಗ ಯಾರು ಎನ್ನನ್ನೂ ಹೊತ್ತು ಹೋಗುವುದಿಲ್ಲ ಆದರೆ ನಾವು ಸಮಾಜಕ್ಕೆ ಕೊಟ್ಟ ಕೊಡುಗೆ ಮಾತ್ರ ಶಾಶ್ವತವಾಗಿರಲಿದೆ ಎಂದು ಹೇಳಿದರು.
ಈ ವೇಳೆ ಆರೋಗ್ಯ ಇಲಾಖೆಯ ಹಿರಿಯ ಸಲಹೆಗಾರ ಮಾ.ಸ. ನಂಜುoಡಸ್ವಾಮಿ, ಡಾ.ರಾಜೇಶ್, ಡಾ.ಸಂಗಮ್, ಶ್ರುಶ್ರೂಷಕರಾದ ಆಲಿಯಾ ಮಾತನಾಡಿದರು. ಸಾಗರ ಉಪ ವಿಭಾಗೀಯ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ಅಧ್ಯಕ್ಷತೆವಹಿಸಿದ್ದರು. ತಾಲೂಕು ವೈದ್ಯಾಧಿಕಾರಿ ಡಾ.ಶ್ರೀನಿವಾಸ, ಡಾ. ವಿದ್ಯಾಶ್ರೀ, ಶಿಲ್ಪಾ, ರುಬೀನಾ ಅನಿತಾಕುಮಾರಿ ಪೂಜಾಶ್ರೀ ಇತರರು ಹಾಜರಿದ್ದರು.
ರಾಜ್ಯದಲ್ಲಿ ಕಾಡಾನೆ ದಾಳಿ ಮತ್ತೊಂದು ಬಲಿ: ಮಡಿಕೇರಿಯಲ್ಲಿ PU ವಿದ್ಯಾರ್ಥಿನಿ ಸಾವು
ರಾಜ್ಯದ ಜನತೆಗೆ ಸಿಹಿ ಸುದ್ದಿ: ಸದ್ಯಕ್ಕಿಲ್ಲ ವಿದ್ಯುತ್ ದರ ಏರಿಕೆ; ಸಿಎಂ ಸ್ಪಷ್ಟನೆ








