ನವದೆಹಲಿ : ಇಂದು ಮಾರ್ಚ್ 1, 2026. ಇಂದಿನಿಂದ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳುವಂತಹ ಹಲವು ಬದಲಾವಣೆಗಳು ದೇಶಾದ್ಯಂತ ಜಾರಿಗೆ ಬಂದಿವೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಹಿಡಿದು ರೈಲ್ವೆ ಟಿಕೆಟ್ ಬುಕಿಂಗ್ ಮತ್ತು ಬ್ಯಾಂಕಿಂಗ್ ನಿಯಮಗಳವರೆಗೆ ಹಲವು ಬದಲಾವಣೆಗಳಾಗಿವೆ. ಅವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
1. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ
ಮಾರ್ಚ್ ತಿಂಗಳ ಮೊದಲ ದಿನವೇ ವಾಣಿಜ್ಯ ಬಳಕೆಯ ಎಲ್‌ಪಿಜಿ (19 ಕೆಜಿ) ಸಿಲಿಂಡರ್ ಬೆಲೆಯಲ್ಲಿ ಸುಮಾರು 28 ರಿಂದ 31 ರೂಪಾಯಿಗಳವರೆಗೆ ಏರಿಕೆ ಮಾಡಲಾಗಿದೆ. ಇದರಿಂದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಖರ್ಚು ಹೆಚ್ಚಾಗಲಿದೆ.
ದೆಹಲಿ: 1,740.50 ರೂ. ನಿಂದ 1,768.50 ರೂ. ಗೆ ಏರಿಕೆ (28 ರೂ. ಹೆಚ್ಚಳ).
ಮುಂಬೈ: 1,720.50 ರೂ. ಗೆ ಏರಿಕೆ.
ಕೋಲ್ಕತ್ತಾ: 1,875.50 ರೂ. ಗೆ ಏರಿಕೆ (31 ರೂ. ಹೆಚ್ಚಳ).
ಚೆನ್ನೈ: 1,929 ರೂ. ಗೆ ಏರಿಕೆ.
2. ರೈಲ್ವೆ ಟಿಕೆಟ್ ಬುಕಿಂಗ್‌ನಲ್ಲಿ ‘ರೈಲ್‌ಒನ್’ ಕ್ರಾಂತಿ
ಇಂದಿನಿಂದ ಹಳೆಯ ‘UTS’ ಆ್ಯಪ್ ಬದಲಿಗೆ ಹೊಸ RailOne (ರೈಲ್‌ಒನ್) ಆ್ಯಪ್ ಮೂಲಕ ಜನರಲ್ ಟಿಕೆಟ್ ಬುಕ್ ಮಾಡಬೇಕಾಗುತ್ತದೆ.
ಜನರಲ್ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್ ಬುಕಿಂಗ್‌ಗೆ ಆಧಾರ್ ಆಧಾರಿತ ದೃಢೀಕರಣ (Authentication) ಕಡ್ಡಾಯಗೊಳಿಸುವ ಸಾಧ್ಯತೆಯಿದೆ.
ಹಿರಿಯ ನಾಗರಿಕರಿಗೆ ಲೋವರ್ ಬರ್ತ್ ಆದ್ಯತೆ ನೀಡುವ ಕುರಿತು ಹೊಸ ಮಾರ್ಗಸೂಚಿಗಳು ಜಾರಿಗೆ ಬರಲಿವೆ.
3. ಯುಪಿಐ (UPI) ಪಾವತಿ ಇನ್ಮುಂದೆ ಇನ್ನಷ್ಟು ಸುರಕ್ಷಿತ
ಡಿಜಿಟಲ್ ವಂಚನೆ ತಡೆಯಲು ಯುಪಿಐ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ.
ದೊಡ್ಡ ಮೊತ್ತದ ಹಣ ವರ್ಗಾವಣೆಗೆ ಕೇವಲ ಯುಪಿಐ ಪಿನ್ ಸಾಕಾಗುವುದಿಲ್ಲ.
ಹೆಚ್ಚಿನ ಮೌಲ್ಯದ ವಹಿವಾಟುಗಳಿಗೆ ಬಯೋಮೆಟ್ರಿಕ್ ಅಥವಾ ಮಲ್ಟಿ-ಫ್ಯಾಕ್ಟರ್ ಅಥೆಂಟಿಕೇಶನ್ ಕಡ್ಡಾಯಗೊಳಿಸಲಾಗಿದೆ.
4. ಸಿಎನ್‌ಜಿ ಮತ್ತು ಪಿಎನ್‌ಜಿ ದರ
ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾದರೂ, ಸಮಾಧಾನಕರ ವಿಷಯವೆಂದರೆ ಸಿಎನ್‌ಜಿ (CNG) ಮತ್ತು ಪಿಎನ್‌ಜಿ (PNG) ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸದ್ಯಕ್ಕೆ ಹಳೆಯ ದರಗಳೇ ಮುಂದುವರಿಯಲಿವೆ.
5. ಬ್ಯಾಂಕಿಂಗ್ ಮತ್ತು ಕ್ರೆಡಿಟ್ ಕಾರ್ಡ್ ನಿಯಮಗಳು
ಹಲವು ಪ್ರಮುಖ ಬ್ಯಾಂಕುಗಳು ತಮ್ಮ ಸೇವಾ ಶುಲ್ಕ ಮತ್ತು ಕನಿಷ್ಠ ಬ್ಯಾಲೆನ್ಸ್ (Minimum Balance) ನಿಯಮಗಳನ್ನು ಇಂದಿನಿಂದ ಬದಲಾಯಿಸಿವೆ.
ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳು ಮತ್ತು ಲೇಟ್ ಪೇಮೆಂಟ್ ಶುಲ್ಕಗಳಲ್ಲಿ ಬದಲಾವಣೆಯಾಗಿದೆ.
ಬ್ಯಾಂಕ್‌ಗಳಿಂದ ಬರುವ ಎಸ್‌ಎಂಎಸ್ ಅಥವಾ ಇಮೇಲ್‌ಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
6. ವಾಟ್ಸಾಪ್ ಮತ್ತು ಟೆಲಿಗ್ರಾಮ್‌ಗೆ ‘ಸಿಮ್ ಬೈಂಡಿಂಗ್’ ನಿಯಮ
ಡಿಜಿಟಲ್ ವಂಚನೆ ತಡೆಯಲು ಟ್ರಾಯ್ (TRAI) ಇಂದಿನಿಂದ ‘ಸಿಮ್ ಬೈಂಡಿಂಗ್’ (SIM Binding) ನಿಯಮವನ್ನು ಕಡ್ಡಾಯಗೊಳಿಸಿದೆ.
ಯಾವ ಸಿಮ್ ನಿಮ್ಮ ಫೋನ್‌ನಲ್ಲಿದೆಯೋ ಅದೇ ನಂಬರ್‌ನ ವಾಟ್ಸಾಪ್ ಅಥವಾ ಟೆಲಿಗ್ರಾಮ್ ಮಾತ್ರ ಕೆಲಸ ಮಾಡುತ್ತದೆ.
ಬೇರೆ ಸಿಮ್ ಹಾಕಿ ಇನ್ನೊಂದು ನಂಬರ್‌ನ ವಾಟ್ಸಾಪ್ ಬಳಸುತ್ತಿದ್ದವರಿಗೆ ಇನ್ಮುಂದೆ ತೊಂದರೆಯಾಗಬಹುದು.








