ಶಿವಮೊಗ್ಗ: ಸಾಗರ ನಗರದಲ್ಲಿ ನಿರ್ಮಿಸಿರುವಂತ ನೂತನ ಅರಣ್ಯ ಇಲಾಖೆ ನೌಕರರ ಸಮುದಾಯ ಭವನವಾಗಿರುವಂತ ವನಸಿರಿಯನ್ನು ಶಿವಮೊಗ್ಗ ಸಿಸಿಎಫ್ ಡಾ.ಹನುಮಂತಪ್ಪ.ಕೆ.ಟಿ ಅವರು ಉದ್ಘಾಟಿಸಿದರು.

ಶಿವಮೊಗ್ಗ ಜಿಲ್ಲೆಯ ಸಾಗರದ ಹೊಸನಗರ ರಸ್ತೆಯ ರಾಮನಗರದಲ್ಲಿ ಸಾಮಾಜಿಕ ಅರಣ್ಯ ವಲಯ ಕಚೇರಿಯ ಹಿಂಭಾಗದಲ್ಲಿ ಅರಣ್ಯ ಇಲಾಖೆ ನೌಕರರ ಒಕ್ಕೂಟ ಸಂಘದಿಂದ ವನಸಿರಿ ಎನ್ನುವಂತ ಸಮುದಾಯ ಭವನ ನಿರ್ಮಿಸಲಾಗಿತ್ತು. ಈ ನೂತನ ಸಮುದಾಯ ಭವನವನ್ನು ಶಿವಮೊಗ್ಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಹನುಮಂತಪ್ಪ.ಕೆಟಿ ಅವರು ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗದಗ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಕೆಂಚಪ್ಪನವರ್ ಭಾಗಿಯಾಗಿದ್ದರೇ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹಮ್ಮದ್ ಫಯಾಜುದ್ದೀನ್ ವಹಿಸಿದ್ದರು.
ಅಂದಹಾಗೇ ಅರಣ್ಯ ಇಲಾಖೆ ನೌಕರರಿಂದ ನಿರ್ಮಾಣವಾದಂತ ಸಮುದಾಯ ಭವನ ಇದಾಗಿದೆ. ಇಂತಹ ಸಾಗರದ ರಾಮನಗರದಲ್ಲಿ ನಿರ್ಮಿಸಿರುವಂತ ವನಸಿರಿ ಎನ್ನುವಂತ ಅರಣ್ಯ ಇಲಾಖೆಯ ನೌಕರರ ಸಮುದಾಯ ಭವನವನ್ನು ಇಂದು ಶಿವಮೊಗ್ಗ ಎಸಿಎಫ್ ಡಾ.ಕೆ.ಟಿ ಹನುಮಂತಪ್ಪ ಉದ್ಘಾಟಿಸುವ ಮೂಲಕ, ನೌಕರರ ಬಳಕೆಗಾಗಿ ಲೋಕಾರ್ಪಣೆಗೊಳಿಸಿದರು.

ಡಿಸಿಎಫ್ ಪ್ರಸನ್ನ ಪಟಗಾರ್, ಸುಬ್ರಹ್ಮಣ್ಯ, ಅಜ್ಜಯ್ಯ, ಸೊರಬ ಎಸಿಎಫ್ ಸುರೇಶ್ ಕುಳ್ಳಳ್ಳಿ, ಆರ್ ಎಫ್ ಓ ಶ್ರೀಪಾದ್, ಹೊಸನಗರ ಎಸಿಎಫ್ ಮೋಹನ್ ಕುಮಾರ್, ಶಿಕಾರಿಪುರ ಎಸಿಎಫ್ ರವೀಂದ್ರ, ಸಾಗರ ಎಸಿಎಫ್ ರವಿ, ಕಾರ್ಗಲ್ ವೈಲ್ಡ್ ಲೈಫ್ ಎಸಿಎಫ್ ಗುರುರಾಜ್, ಸಾಗರ ಆರ್ ಎಫ್ ಓ ಅಣ್ಣಪ್ಪ ಸೇರಿದಂತೆ ಅರಣ್ಯ ಇಲಾಖೆಯ ವಿವಿಧ ವೃಂದದ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇತರರು ಭಾಗಿಯಾಗಿದ್ದರು.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು..








