ವಿಜಯಪುರ : ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ನಿರ್ಧರಿಸುತ್ತಾರೆ. 2028 ರಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಭವಿಷ್ಯ ನುಡಿದಿದ್ದಾರೆ.
ವಿಜಯಪುರದಲ್ಲಿ ಜೆಡಿಎಸ್ ಬೆಳ್ಳಿ ಹಬ್ಬ ಸಮಾರಂಭದಲ್ಲಿ ಮಾತನಾಡಿದ ಅವರು, ಸದ್ಯ ನಾವು ಎನ್.ಡಿ.ಎ ಮೈತ್ರಿಕೂಟದಲ್ಲಿ ಇದ್ದೇವೆ. ಕೊಟ್ಟು ಪಡೆಯುವ ಶಕ್ತಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಲ್ಲಿ ಇದೆ ನಾನು ಸಾಯುವ ಮುನ್ನ ಯೋಗ್ಯ ಆಡಳಿತ ನೀಡುವ ಪಕ್ಷ ಬರಬೇಕು. ಉತ್ತಮ ಆಡಳಿತ ನೀಡುವ ಪಕ್ಷ ಅಧಿಕಾರಕ್ಕೆ ಬರುವುದನ್ನು ನೋಡುವೆ.
ಅದರ ಬಗ್ಗೆ ಪ್ರಧಾನ ನರೇಂದ್ರ ಮೋದಿಯವರು ಮಾತನಾಡುತ್ತಾರೆ.ಈ ಮೂಲಕ ಮುಂದಿನ ಬಾರಿ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಅತ್ಯಂತ ಕೆಟ್ಟ ಹಾಗು ಭ್ರಷ್ಟ ಸರ್ಕಾರವಾಗಿದೆ. ನಾನು ಹಿಂದೆಂದೂ ಇಂತಹ ಸರ್ಕಾರ ನೋಡಿಲ್ಲವೆಂದು HD ದೇವೇಗೌಡ ಅಸಮಾಧಾನ ಹೊರಹಾಕಿದರು.








