Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪ್ರೀತಿಸಿ ಮದುವೆಯಾಗಿದ್ದರೂ ಇನ್ನೊಂದು ಮದುವೆಗೆ ತಯಾರಿ : ಮೊದಲ ಪತ್ನಿ ಎಂಟ್ರಿ ಕೊಟ್ಟ ಬಳಿಕ ಮುರಿದು ಬಿದ್ದ ಮದುವೆ!

03/05/2026 10:28 AM

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಬೆತ್ತಲೆಯಾಗಿ ಪೂಜೆಗೆ ಕುಳಿತರೆ, ಯುವತಿಗೆ 30 ಲಕ್ಷ ಆಫರ್ ನೀಡಿದ ಕಾಮುಕ!

03/05/2026 10:22 AM

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯ `AC’ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು ಎಚ್ಚರ.!

03/05/2026 10:20 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ?: ಪ್ರಕರಣ ದಾಖಲಿಸದೇ NCR ಮಾಡಿ ಕೈತೊಳೆದುಕೊಂಡ್ರ ಪೊಲೀಸರು?
KARNATAKA

ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ?: ಪ್ರಕರಣ ದಾಖಲಿಸದೇ NCR ಮಾಡಿ ಕೈತೊಳೆದುಕೊಂಡ್ರ ಪೊಲೀಸರು?

By kannadanewsnow0927/02/2026 2:57 PM

ತುಮಕೂರು: ಕಾಲೇಜಿಗೆ ಹೋಗಿ ಸಂಜೆ ಮನೆಗೆ ವಾಪಾಸ್‌ ಬರುವ ವೇಳೆ ವಿದ್ಯಾರ್ಥಿನಿಯನ್ನು ಎಳೆದಾಡಿ ಬಲವಂತಾಗಿ ಮುತ್ತಿಟ್ಟು ಅಸಭ್ಯವಾಗಿ ವರ್ತಿಸಿದ ಯುವಕನ ಬಗ್ಗೆ ದೂರು ನೀಡಿದರೆ,ಆ ಠಾಣೆ ಪೊಲೀಸರು ಮಾತ್ರ ವಿದ್ಯಾರ್ಥಿನಿ ತಂದೆ ಯಿಂದ ಪ್ರಕರಣಕ್ಕೆ ಸಂಪೂರ್ಣ ವಿರುದ್ಧವಾದ ಹೇಳಿಕೆ ಪಡೆದು ಎನ್‌ಆರ್ ದಾಖಲಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಗಡಿ ಠಾಣೆಗಳಲ್ಲಿ ಹುಳಿಯಾರು ಪೊಲೀಸ್ ಠಾಣೆಯಲ್ಲಿರುವ ಪೊಲೀಸರು ವಿದ್ಯಾರ್ಥಿನಿಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಯುವಕನ ಪ್ರಭಾವಕ್ಕೆ ಒಳಗಾಗಿ ಯುವಕನು ಏನು ಮಾಡಿಲ್ಲವೆಂಬದಂತೆ ಸಣ್ಣಪುಟ್ಟಸಬೂಬುಗಳನ್ನು ಉಲ್ಲೇಖಿಸಿ ಎನ್ ಸಿಆರ್ ಮಾಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ. ಪ್ರಕರಣವೇನು..? ಬುಕ್ಕಾಪಟ್ಟಣ ಅರಣ್ಯದಂಚಿನ ಅಂಬಾರಪುರದಿಂದ ಗ್ರಾಮದಿಂದ ಬೆಳ್ಳಾರ ಗ್ರಾಮಕ್ಕೆ ಕಾಡಲ್ಲಿ ನಡೆದುಕೊಂಡು ಹೋಗಿ ಅಲ್ಲಿಂದಬುಕ್ಕಾಪಟ್ಟಣದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಇದೇ ಫೆ.25ರಂದು ಬೆಳಿಗ್ಗೆ 9ರ ಸರಿಸುಮಾರಿಗೆ ಊರಿಂದ ಕಾಡಿನಲ್ಲಿ ನಡೆದುಕೊಂಡು ಬೆಳ್ಳಾರ ಗ್ರಾಮಕ್ಕೆ ಬರುವವೇಳೆಗೆ ಬುಕ್ಕಾಪಟ್ಟಣಕ್ಕೆ ಹೋಗುವ ಬಸ್ ಮಿಸ್ ಆಗಿದೆ.

ಲೈಂಗಿಕ ದೌರ್ಜನ್ಯ ಎಸಗಿದ ಗಿರೀಶ್ ವಿದ್ಯಾರ್ಥಿನಿಗೆ ಬಂದೂಕಿನಿಂದ ಸುಡುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ್ದಾನೆ. ಕಾಡಂಚಿನ ಗ್ರಾಮವಾಗಿರುವುದರಿಂದ ಬೆಳೆರಕ್ಷಣೆಗಾಗಿ ರೈತರು ಬಂದೂಕು ಇಟ್ಟುಕೊಳ್ಳುವುದು ಸಾಮಾನ್ಯ ವಾದರೂ, ಅಂಬಾರಪುರದಲ್ಲಿ ಪರವಾನಿಗೆ ಇಲ್ಲದ ಬಂದೂಕುಗಳ ಸಂಖ್ಯೆ ಹೆಚ್ಚಿದೆ ಎನ್ನುವ ಮಾತುಗಳು ಕೇಳಿಬಂದಿದೆ. ಬಸ್ ಸಿಗದ ವಿದ್ಯಾರ್ಥಿನಿ ವಾಪಾಸ್ ಮನೆಗೆ ಹೋಗುವ ಮುಂಚೆ ಸ್ವಲ್ಪ ಸುಧಾರಿಸಿಕೊಳ್ಳಲು ಅಲ್ಲಿಯೇ ಇದ್ದ ಅಂಗಡಿ ಬಳಿ ಕುಳಿತಿರಬೇಕಾದವೇಳೆ ಬೈಕ್‌ನಲ್ಲಿ ಬಂದ ಅಂಬಾರಪುರದ ಯುವಕ ಗಿರೀಶ್ ವಿದ್ಯಾರ್ಥಿನಿಯನ್ನು ಊರಿಗೆ ಬಿಡುತ್ತೇನೆಬಾಎಂದು ಬೆಳ್ಳಾರದಿಂದ ಬೈಕ್‌ನಲ್ಲಿ ಕೂರಿಸಿಕೊಂಡುಮಾರ್ಗ ಮಧ್ಯೆ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.

ಬಲವಂತವಾಗಿ ತುಟಿಗೆ ಮುತ್ತಿಟ್ಟು, ಮೈ ಮೇಲೆ ಕೈ ಹಾಕಿದ್ದಲೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ವಿದ್ಯಾರ್ಥಿನಿ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸಿದರೆ ಕೂದಲು ಹಿಡಿದು ಎಳೆದಾಡಿ ಯಾರಿಗಾದರೂ ಹೇಳಿದರೆ ಕೊಲೆಮಾಡುವುದಾಗಿ ಬೆದರಿಕೆ ಹಾಕಿದ್ದಾನೆ, ಆಕೆಗೆ ಬೈಯುತ್ತಲೇಊರಿಗೆ ಕರೆದುಕೊಂಡು ಬಿಟ್ಟು ಆತ ಮನೆಗೆ ಹೋದರೆ ಇತ್ತ ವಿದ್ಯಾರ್ಥಿನಿ ಮನೆಗೆ ಬಂದು ಅಳುತ್ತ ಕುಳಿತಿದ್ದಾಳೆ. ಸಂಜೆ ಮನೆಗೆ ಬಂದ ಪೋಷಕರಿಗೆ ಮಗಳೊಂದಿಗೆ ಗಿರೀಶ್ ಎಂಬಾತ ಅನುಚಿತವಾಗಿವರ್ತಿಸಿರುವುದು

ಗೊತ್ತಾದ ಬಳಿಕ ಹುಳಿಯಾರು ಪೊಲೀಸ್ ಠಾಣೆಗೆ ಹೋಗಿಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸರು ಮಾತ್ರ ಯಾವುದೇಕ್ರಮಕೈಗೊಳ್ಳದೇ ಯುವಕನ ಪರವಾಗಿ ಎನ್ ಸಿಆರ್ ಮಾಡಿಸಿ ಕೈ ತೊಳೆದುಕೊಂಡಿದ್ದಾರೆ. ಎನ್‌ಸಿಆರ್ ನಲ್ಲಿಯೂ ನಡೆದಿರುವ ಘಟನೆಯನ್ನು ಸಂಪೂರ್ಣವಾಗಿ ಮರೆಮಾಚಲಾಗಿದೆ ಎಂದು ವಿದ್ಯಾರ್ಥಿನಿಯ ಮಾವ ರಂಗಸ್ವಾಮಿ (ಹೆಸರು ಬದಲಿಸಲಾಗಿದೆ) ಆರೋಪಿಸಿದ್ದಾರೆ.

ಠಾಣೆಯಲ್ಲಿ ನಡೆದಿದ್ದೇನು?

ಪ್ರಕರಣದ ಬಗ್ಗೆ ಅದೇ ದಿನ ಮಧ್ಯರಾತ್ರಿ ಸ್ಟೇಷನ್‌ಗೆ ಹೋಗಿ ಕಂಪ್ಲೇಂಟ್ ನೀಡಲು ಹೋದಾಗ ಎಸ್‌ಐ ಸಾಹೇಬರು ಇಲ್ಲ ಬೆಳಿಗ್ಗೆ ಬನ್ನಿ ಎಂದು ಹಿಂದೆ ಕಳಿಸಿದ್ದಾರೆ ಮತ್ತೆ ಮರುದಿನ ಬೆಳಿಗ್ಗೆ ಸ್ಟೇಷನ್‌ ಗೆ ಹೋಗಿ ಕಂಪ್ಲೇಂಟ್ ಕೊಡಲು ಅದೇ ಊರಿನ ಗಿರೀಶ್ ಎಂಬಾತ ಹಾಗೂ ಅವರ ಮನೆಯವರು ಕಂಪ್ಲೇಂಟ್ ಕೊಡಲು ಬಿಡದೇ ಇಲ್ಲೇ ಬಗೆಹರಿಸಿಕೊಳ್ಳೋಣ ಎಂದು ಧಮ್ಮಿ ಹಾಕಿದ್ದಾರೆ.

ಅದೇ ರೀತಿ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣವನ್ನು ದಾಖಲಿಸದೇ ಯುವಕನ ಪರವಾಗಿ ಪೊಲೀಸ್ ಸಿಬ್ಬಂದಿ ಬ್ಯಾಟಿಂಗ್ ಮಾಡಿದ್ದು, ವಿದ್ಯಾರ್ಥಿನಿಯ ತಂದೆಯ ಹೇಳಿಕೆ ಹಾಗೂ ಸಹಿಯೊಂದಿಗೆ ಎನ್‌ಸಿಆರ್ ಮಾಡಿ ಕೈತೊಳೆದುಕೊಂಡಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯ ಹೇಳಿಕೆಯನ್ನು ಪಡೆಯದೇ ಇಡೀ ಪ್ರಕರಣವನ್ನು ಲಘುವಾಗಿ ಪರಿಗಣಿಸಿಪೊಲೀಸ್‌ ಸಿಬ್ಬಂದಿ ನಿರ್ಲಕ್ಷ್ಯವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಒಂದೇ ದಿನದಲ್ಲಿ ಎನ್ ಸಿಆರ್‌ನಿಂದ ಎಫ್‌ಐಆರ್..?

ಬುಧವಾರ ಇದೇ ಪ್ರಕರಣದಲ್ಲಿಎನ್‌ಸಿಆರ್ ಮಾಡಿ ಕೈ ತೊಳೆದುಕೊಂಡಪೊಲೀಸರು ಗುರುವಾರ ಮಹಿಳಾ ಆಯೋಗದ ಮಧ್ಯಪ್ರವೇಶದ ನಂತರ ಎಫ್‌ಐಆರ್ ದಾಖಲಿಸಿದ್ದಾರೆ.ಬುಧವಾರ ವಿದ್ಯಾರ್ಥಿನಿಯತಂದೆ ಹೇಳಿಕೆಯನ್ನೇ ಮುಂದಿಟ್ಟು ಯುವಕನ ಪರವಾಗಿ ಎನ್‌ಸಿಆರ ಮಾಡಿದ್ದರು. ಆದರೆ ವಿದ್ಯಾರ್ಥಿನಿಯದಿಟ್ಟ ಹೋರಾಟದಿಂದಾಗಿ ಹುಳಿಯಾರು ಪೊಲೀಸರು ಅನಿವಾರ್ಯವಾಗಿ ಎಫ್‌ಐಆರ್ ದಾಖಲಿಸುವಂತಾಗಿದ್ದು, ಮಹಿಳಾ ಆಯೋಗಕ್ಕೆ ಕರೆ ಮಾಡಿದ್ದ ವಿದ್ಯಾರ್ಥಿನಿಎಫ್‌ಐಆರ ದಾಖಲಿಸದ ಬಗ್ಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಹಿಳಾ ಆಯೋಗದ ಸೂಚನೆ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯವು ನಕಲಿ: UGC ಘೋಷಣೆ

ಆರೋಗ್ಯಕರ ರಾಷ್ಟ್ರಕ್ಕೆ ಶಕ್ತಿಶಾಲಿಯಾದ ಭವಿಷ್ಯ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿಮತ

Share. Facebook Twitter LinkedIn WhatsApp Email

Related Posts

ಪ್ರೀತಿಸಿ ಮದುವೆಯಾಗಿದ್ದರೂ ಇನ್ನೊಂದು ಮದುವೆಗೆ ತಯಾರಿ : ಮೊದಲ ಪತ್ನಿ ಎಂಟ್ರಿ ಕೊಟ್ಟ ಬಳಿಕ ಮುರಿದು ಬಿದ್ದ ಮದುವೆ!

03/05/2026 10:28 AM1 Min Read

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಬೆತ್ತಲೆಯಾಗಿ ಪೂಜೆಗೆ ಕುಳಿತರೆ, ಯುವತಿಗೆ 30 ಲಕ್ಷ ಆಫರ್ ನೀಡಿದ ಕಾಮುಕ!

03/05/2026 10:22 AM1 Min Read

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯ `AC’ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು ಎಚ್ಚರ.!

03/05/2026 10:20 AM2 Mins Read
Recent News

ಪ್ರೀತಿಸಿ ಮದುವೆಯಾಗಿದ್ದರೂ ಇನ್ನೊಂದು ಮದುವೆಗೆ ತಯಾರಿ : ಮೊದಲ ಪತ್ನಿ ಎಂಟ್ರಿ ಕೊಟ್ಟ ಬಳಿಕ ಮುರಿದು ಬಿದ್ದ ಮದುವೆ!

03/05/2026 10:28 AM

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಬೆತ್ತಲೆಯಾಗಿ ಪೂಜೆಗೆ ಕುಳಿತರೆ, ಯುವತಿಗೆ 30 ಲಕ್ಷ ಆಫರ್ ನೀಡಿದ ಕಾಮುಕ!

03/05/2026 10:22 AM

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯ `AC’ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು ಎಚ್ಚರ.!

03/05/2026 10:20 AM

BREAKING : ಬೆಂಗಳೂರಲ್ಲಿ ಮಾಟ, ಮಂತ್ರ ಹೆಸರಲ್ಲಿ ಬ್ಯೂಟಿಷಿಯನ್ ಮೇಲೆ ನಿರಂತರ ಅತ್ಯಾಚಾರ : ಜ್ಯೋತಿಷಿ ವಿರುದ್ಧ ‘FIR’

03/05/2026 10:14 AM
State News
KARNATAKA

ಪ್ರೀತಿಸಿ ಮದುವೆಯಾಗಿದ್ದರೂ ಇನ್ನೊಂದು ಮದುವೆಗೆ ತಯಾರಿ : ಮೊದಲ ಪತ್ನಿ ಎಂಟ್ರಿ ಕೊಟ್ಟ ಬಳಿಕ ಮುರಿದು ಬಿದ್ದ ಮದುವೆ!

By kannadanewsnow0503/05/2026 10:28 AM KARNATAKA 1 Min Read

ಬೆಂಗಳೂರು : ಪ್ರೀತಿಸಿ ಮದುವೆಯಾದರು ಕೂಡ ಇನ್ನೊಂದು ವಿವಾಹಕ್ಕೆ ತಯಾರಿ ಮಾಡಿಕೊಂಡಿರುವ ಭೂಪ, ಮನೆಯವರ ಒತ್ತಡಕ್ಕೆ ಮಣಿದು ಇನ್ನೊಬ್ಬರ ಜೊತೆಗೆ…

SHOCKING : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಬೆತ್ತಲೆಯಾಗಿ ಪೂಜೆಗೆ ಕುಳಿತರೆ, ಯುವತಿಗೆ 30 ಲಕ್ಷ ಆಫರ್ ನೀಡಿದ ಕಾಮುಕ!

03/05/2026 10:22 AM

ALERT : ಈ ತಪ್ಪು ಮಾಡಿದ್ರೆ ನಿಮ್ಮ ಮನೆಯ `AC’ ಬಾಂಬ್ ನಂತೆ ಬ್ಲಾಸ್ಟ್ ಆಗಬಹುದು ಎಚ್ಚರ.!

03/05/2026 10:20 AM

BREAKING : ಬೆಂಗಳೂರಲ್ಲಿ ಮಾಟ, ಮಂತ್ರ ಹೆಸರಲ್ಲಿ ಬ್ಯೂಟಿಷಿಯನ್ ಮೇಲೆ ನಿರಂತರ ಅತ್ಯಾಚಾರ : ಜ್ಯೋತಿಷಿ ವಿರುದ್ಧ ‘FIR’

03/05/2026 10:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.