Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬಾಲಕಿ ಜೊತೆ ಅನುಚಿತ ವರ್ತನೆ : ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ

27/02/2026 2:20 PM

ಭಾರತದಲ್ಲಿ ಯಾರಿಗೆ ಯಾವ ಬಣ್ಣದ `ಪಾಸ್ ಪೋರ್ಟ್’ ನೀಡಲಾಗುತ್ತೆ? ಇಲ್ಲಿದೆ ಮಾಹಿತಿ

27/02/2026 1:58 PM

BREAKING: ಕೋಲ್ಕತ್ತಾದಲ್ಲಿ 5.4 ತೀವ್ರತೆಯ ಭೂಕಂಪ, ಮನೆಗಳಿಂದ ಹೊರ ಓಡಿ ಬಂದ ಜನ : ವಿಡಿಯೋ ವೈರಲ್ | WATCH VIDEO

27/02/2026 1:56 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಾರತದಲ್ಲಿ ಯಾರಿಗೆ ಯಾವ ಬಣ್ಣದ `ಪಾಸ್ ಪೋರ್ಟ್’ ನೀಡಲಾಗುತ್ತೆ? ಇಲ್ಲಿದೆ ಮಾಹಿತಿ
INDIA

ಭಾರತದಲ್ಲಿ ಯಾರಿಗೆ ಯಾವ ಬಣ್ಣದ `ಪಾಸ್ ಪೋರ್ಟ್’ ನೀಡಲಾಗುತ್ತೆ? ಇಲ್ಲಿದೆ ಮಾಹಿತಿ

By kannadanewsnow5727/02/2026 1:58 PM

ವಿದೇಶ ಪ್ರಯಾಣದ ಬಗ್ಗೆ ಮಾತನಾಡುವಾಗ ಮೊದಲು ನೆನಪಿಗೆ ಬರುವುದು ಪಾಸ್‌ಪೋರ್ಟ್. ಆದರೆ, ನೀವು ಗಮನಿಸಿದ್ದೀರಾ? ಪ್ರತಿಯೊಬ್ಬರ ಪಾಸ್‌ಪೋರ್ಟ್ ಬಣ್ಣ ಒಂದೇ ತರ ಇರುವುದಿಲ್ಲ. ಪಾಸ್‌ಪೋರ್ಟ್‌ನ ಈ ಬಣ್ಣಗಳು ಕೇವಲ ವಿನ್ಯಾಸಕ್ಕಾಗಿ ಅಲ್ಲ; ಅವುಗಳ ಹಿಂದೆ ಒಂದು ನಿರ್ದಿಷ್ಟ ಕೋಡಿಂಗ್ ಇರುತ್ತದೆ. ಇಮಿಗ್ರೇಷನ್ ಅಧಿಕಾರಿಗಳು ನಿಮ್ಮ ಪಾಸ್‌ಪೋರ್ಟ್ ಬಣ್ಣ ನೋಡಿಯೇ ನಿಮ್ಮ ಗುರುತು, ಸ್ಥಾನಮಾನ ಮತ್ತು ಪ್ರಯಾಣದ ಉದ್ದೇಶವನ್ನು ಕ್ಷಣಾರ್ಧದಲ್ಲಿ ಪತ್ತೆಹಚ್ಚುತ್ತಾರೆ.

ಭಾರತದಲ್ಲಿ ಮುಖ್ಯವಾಗಿ ನಾಲ್ಕು ಬಣ್ಣಗಳ ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತದೆ. ಅವುಗಳ ಮಹತ್ವ ಹೀಗಿದೆ:

ಭಾರತದ 4 ಬಣ್ಣದ ಪಾಸ್‌ಪೋರ್ಟ್‌ಗಳು: ಯಾರಿಗೆ ಯಾವುದು?

ನೀಲಿ ಪಾಸ್‌ಪೋರ್ಟ್ (Type-P): ಇದು ಸಾಮಾನ್ಯ ನಾಗರಿಕರಿಗೆ ನೀಡುವ ಪಾಸ್‌ಪೋರ್ಟ್. ಇಲ್ಲಿ ‘P’ ಎಂದರೆ ಪರ್ಸನಲ್ (Personal). ಶಿಕ್ಷಣ, ಪ್ರವಾಸ ಅಥವಾ ವ್ಯಾಪಾರ ಉದ್ದೇಶಕ್ಕಾಗಿ ವಿದೇಶಕ್ಕೆ ಹೋಗುವವರಿಗೆ ಇದನ್ನು ನೀಡಲಾಗುತ್ತದೆ.

ಬಿಳಿ ಪಾಸ್‌ಪೋರ್ಟ್ (Type-S): ಇದು ಅತ್ಯಂತ ವಿಶೇಷವಾದದ್ದು. ಇಲ್ಲಿ ‘S’ ಎಂದರೆ ಸರ್ವಿಸ್ (Service). ಸರ್ಕಾರಿ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳುವ ಅಧಿಕಾರಿಗಳಿಗೆ ಇದನ್ನು ನೀಡಲಾಗುತ್ತದೆ. ಇಮಿಗ್ರೇಷನ್ ಸಮಯದಲ್ಲಿ ಇವರಿಗೆ ವಿಶೇಷ ಆದ್ಯತೆ ಸಿಗುತ್ತದೆ.

ಮರೂನ್ ಪಾಸ್‌ಪೋರ್ಟ್ (Type-D): ಇದು ಭಾರತದ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್. ‘D’ ಎಂದರೆ ಡಿಪ್ಲೊಮ್ಯಾಟಿಕ್ (Diplomatic). ಸಂಸದರು, ರಾಯಭಾರಿಗಳು ಮತ್ತು ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾತ್ರ ಇದನ್ನು ನೀಡಲಾಗುತ್ತದೆ. ಇವರಿಗೆ ವಿದೇಶಗಳಲ್ಲಿ ಬಂಧನದಿಂದ ವಿನಾಯಿತಿ ಮತ್ತು ಅತಿ ವೇಗದ ಇಮಿಗ್ರೇಷನ್ ಸೌಲಭ್ಯವಿರುತ್ತದೆ.

ಕಿತ್ತಳೆ (Orange) ಪಾಸ್‌ಪೋರ್ಟ್: 10ನೇ ತರಗತಿಗಿಂತ ಕಡಿಮೆ ಓದಿದವರಿಗೆ ಈ ಪಾಸ್‌ಪೋರ್ಟ್ ನೀಡಲಾಗುತ್ತದೆ. ಇದನ್ನು ‘ECR’ (ಇಮಿಗ್ರೇಷನ್ ಚೆಕ್ ರಿಕ್ವೈರ್ಡ್) ಎಂದು ಕರೆಯಲಾಗುತ್ತದೆ. ವಿದೇಶದಲ್ಲಿ ಕೆಲಸ ಮಾಡುವ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶ.

ಜಗತ್ತಿನಾದ್ಯಂತ ಪಾಸ್ ಪೋರ್ಟ್ ಬಣ್ಣಗಳ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ
ವಿಶ್ವದಾದ್ಯಂತ ಪಾಸ್‌ಪೋರ್ಟ್ ಬಣ್ಣಗಳ ಆಯ್ಕೆಯು ಆಯಾ ದೇಶದ ರಾಜಕೀಯ ಮತ್ತು ಧಾರ್ಮಿಕ ನಂಬಿಕೆಗಳ ಮೇಲೆ ಅವಲಂಬಿತವಾಗಿರುತ್ತದೆ:
ಕೆಂಪು/ಮರೂನ್: ಯುರೋಪಿಯನ್ ಯೂನಿಯನ್ (EU) ದೇಶಗಳಲ್ಲಿ ಏಕತೆ ಮತ್ತು ಐತಿಹಾಸಿಕ ಪರಂಪರೆಯನ್ನು ಬಿಂಬಿಸಲು ಈ ಬಣ್ಣವನ್ನು ಬಳಸಲಾಗುತ್ತದೆ.

ನೀಲಿ: ಅಮೆರಿಕ, ಕೆನಡಾ ಮತ್ತು ದಕ್ಷಿಣ ಅಮೆರಿಕಾದ ದೇಶಗಳು ಇದನ್ನು ‘ಹೊಸ ಪ್ರಪಂಚದ’ ಸಂಕೇತವಾಗಿ ಬಳಸುತ್ತವೆ.

ಹಸಿರು: ಬಹುತೇಕ ಮುಸ್ಲಿಂ ರಾಷ್ಟ್ರಗಳು (ಉದಾ: ಸೌದಿ ಅರೇಬಿಯಾ, ಪಾಕಿಸ್ತಾನ) ಹಸಿರು ಬಣ್ಣವನ್ನು ಬಳಸುತ್ತವೆ. ಇಸ್ಲಾಂ ಧರ್ಮದಲ್ಲಿ ಈ ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದು ಇದಕ್ಕೆ ಕಾರಣ.

ಕಪ್ಪು: ಇದು ಅತ್ಯಂತ ಅಪರೂಪದ ಬಣ್ಣ. ನ್ಯೂಜಿಲೆಂಡ್ ತನ್ನ ರಾಷ್ಟ್ರೀಯ ಗುರುತಿಗಾಗಿ ಮತ್ತು ಅಂಗೋಲಾದಂತಹ ಕೆಲವು ಆಫ್ರಿಕನ್ ದೇಶಗಳು ಕಪ್ಪು ಬಣ್ಣದ ಪಾಸ್‌ಪೋರ್ಟ್ ಬಳಸುತ್ತವೆ.

ಬಣ್ಣಗಳಿಂದ ಭದ್ರತೆ ಸುಲಭ
ಪಾಸ್‌ಪೋರ್ಟ್‌ ನ ಮೇಲ್ಪದರವನ್ನು ನೋಡಿದ ತಕ್ಷಣ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಪ್ರಯಾಣಿಕರು ಸಾಮಾನ್ಯ ನಾಗರಿಕರೇ ಅಥವಾ ವಿವಿಐಪಿಗಳೇ (VVIP) ಎಂಬುದು ತಿಳಿಯುತ್ತದೆ. ಇದರಿಂದ ಭದ್ರತಾ ತಪಾಸಣೆ ಮತ್ತು ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ವೇಗವಾಗಿ ನಡೆಯಲು ಸಹಕಾರಿಯಾಗುತ್ತದೆ.

Who is given what color passport in India? Here is the information
Share. Facebook Twitter LinkedIn WhatsApp Email

Related Posts

BREAKING: ಕೋಲ್ಕತ್ತಾದಲ್ಲಿ 5.4 ತೀವ್ರತೆಯ ಭೂಕಂಪ, ಮನೆಗಳಿಂದ ಹೊರ ಓಡಿ ಬಂದ ಜನ : ವಿಡಿಯೋ ವೈರಲ್ | WATCH VIDEO

27/02/2026 1:56 PM1 Min Read

BREAKING: ಕೋಲ್ಕತ್ತಾದಲ್ಲಿ ದಿಢೀರ್ ಭೂಕಂಪ: ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ | ಮನೆಗಳಿಂದ ಹೊರ ಓಡಿ ಬಂದ ಜನ| Earthquake

27/02/2026 1:48 PM1 Min Read

ಕಂಟೆಂಟ್ ಕ್ರಿಯೇಟರ್‌ಗಳಿಗೆ ಗುಡ್ ನ್ಯೂಸ್:’ಸೋಶಿಯಲ್ ಮೀಡಿಯಾ ಸಂಸ್ಥೆಗಳು ಆದಾಯವನ್ನು ಸರಿಯಾಗಿ ಹಂಚಬೇಕು’ : ಸಚಿವ ಅಶ್ವಿನ್ ವೈಷ್ಣವ್

27/02/2026 1:37 PM2 Mins Read
Recent News

BREAKING : ಬಾಲಕಿ ಜೊತೆ ಅನುಚಿತ ವರ್ತನೆ : ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ

27/02/2026 2:20 PM

ಭಾರತದಲ್ಲಿ ಯಾರಿಗೆ ಯಾವ ಬಣ್ಣದ `ಪಾಸ್ ಪೋರ್ಟ್’ ನೀಡಲಾಗುತ್ತೆ? ಇಲ್ಲಿದೆ ಮಾಹಿತಿ

27/02/2026 1:58 PM

BREAKING: ಕೋಲ್ಕತ್ತಾದಲ್ಲಿ 5.4 ತೀವ್ರತೆಯ ಭೂಕಂಪ, ಮನೆಗಳಿಂದ ಹೊರ ಓಡಿ ಬಂದ ಜನ : ವಿಡಿಯೋ ವೈರಲ್ | WATCH VIDEO

27/02/2026 1:56 PM

BREAKING: ಕೋಲ್ಕತ್ತಾದಲ್ಲಿ ದಿಢೀರ್ ಭೂಕಂಪ: ರಿಕ್ಟರ್ ಮಾಪಕದಲ್ಲಿ 5.0 ತೀವ್ರತೆ | ಮನೆಗಳಿಂದ ಹೊರ ಓಡಿ ಬಂದ ಜನ| Earthquake

27/02/2026 1:48 PM
State News
KARNATAKA

BREAKING : ಬಾಲಕಿ ಜೊತೆ ಅನುಚಿತ ವರ್ತನೆ : ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮಲ್ಲಿಕಾರ್ಜುನ ಮುತ್ಯಾ

By kannadanewsnow0527/02/2026 2:20 PM KARNATAKA 1 Min Read

ಕಲಬುರಗಿ: ಬಾಲಕಿ ಜೊತೆ ಅನುಚಿತ ವರ್ತನೆ ಕೇಸ್‌ಗೆ ಸಂಬಂಧಿಸಿದಂತೆ ಇದೀಗ ಮಲ್ಲಿಕಾರ್ಜುನ ಮುತ್ಯಾ ಪ್ರಕರಣ ರದ್ದು ಕೋರಿ ಕರ್ನಾಟಕ ಹೈಕೋರ್ಟ್…

BIG NEWS : ಪೊಲೀಸರನ್ನು ಬಿಡದ ಕಳ್ಳರು : ಬೆಂಗಳೂರಲ್ಲಿ ಕಾನ್ಸ್ಟೇಬಲ್ ಮನೆಗೆ ನುಗ್ಗಿ, ಚಿನ್ನಾಭರಣ ದರೋಡೆ!

27/02/2026 1:40 PM

ಹೋಳಿ ಹಬ್ಬಕ್ಕೆ ಗ್ರಹಣದ ಎಫೆಕ್ಟ್ : ಗರ್ಭಿಣಿ ಮಹಿಳೆಯರು ಪಾಲಿಸಬೇಕಾದ ಅಗತ್ಯ ಮುನ್ನೆಚ್ಚರಿಕೆಗಳಿವು !

27/02/2026 1:38 PM

BREAKING : ರಾಜ್ಯ ಸರ್ಕಾರದಿಂದ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ನೇಮಕಾತಿ ನಿಯಮಕ್ಕೆ ತಿದ್ದುಪಡಿ : ಶಿಕ್ಷಕರಿಗೆ ಸಿಗಲಿದೆ ಬಡ್ತಿ ಭಾಗ್ಯ!

27/02/2026 1:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.