ಮಹಾರಾಷ್ಟ್ರ: ಮಲ್ಲಿಕಾರ್ಜುನ ಮುತ್ಯಾ ವಿರುದ್ಧದ ಪೋಕ್ಸೋ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಪ್ರಾಪ್ತ ಬಾಲಕಿಯ ಪೋಷಕರು ಉಲ್ಟಾ ಹೊಡೆದಿದ್ದು, ಸ್ಪೋಟಕ ಹೇಳಿಕೆಯನ್ನು ನೀಡಿದ್ದಾರೆ.
ಅಪ್ರಾಪ್ತ ಬಾಲಕಿ ಪೋಷಕರಿಂದ ವೀಡಿಯೋ ಹೇಳಿಕೆ ರಿಲೀಸ್ ಮಾಡಲಾಗಿದ್ದು, ನಮ್ಮ ಮಗಳ ಜನ್ಮದಿನ ಹಿನ್ನಲೆ ನಾವು ಮಠಕ್ಕೆ ಹೋಗಿದ್ವಿ. ಮಲ್ಲಿಕಾರ್ಜುನ ಮುತ್ಯಾ ಅಶೀರ್ವಾದ ಪಡೆಯಲು ಹೋಗಿದ್ವಿ. ನಾವು ಮಲ್ಲಿಕಾರ್ಜುನ ಮುತ್ಯಾ ಅವರ ಭಕ್ತರು ಇದ್ದೇವೆ ಎಂದಿದ್ದಾರೆ.
ಕಳೆದ 3-4 ವರ್ಷಗಳಿಂದ ನಾವು ಮಠಕ್ಕೆ ಹೋಗುತ್ತಿದ್ದೆವು. ಮಲ್ಲಿಕಾರ್ಜುನ ಮುತ್ಯಾ ನಮಗೆ ಆಶೀರ್ವಾದ ಮಾಡಿದರು. ನಮ್ಮ ಮಗಳಿಗೂ ಕೂಡ ಮುತ್ಯಾ ಅಶೀರ್ವಾದ ಮಾಡಿದರು. ಅದನ್ನು ನಾವು ವೀಡಿಯೋ ಮಾಡಿ ಸ್ಟೇಟಸ್ ಗೆ ಹಾಕಿದ್ದೆವು ಎಂದು ಹೇಳಿದ್ದಾರ.
ನಾವು ಸ್ಟೇಟಸ್ ಗೆ ಹಾಕಿದಂತ ವೀಡಿಯೋವನ್ನು ಕೆಲ ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ. ಇದರಲ್ಲಿ ಮಲ್ಲಿಕಾರ್ಜುನ ಮುತ್ಯಾ ಅವರದ್ದು ಏನೂ ತಪ್ಪಿಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ.
ಬುಕಿಂಗ್ ಮಾಡಿದ 48 ಗಂಟೆಗಳ ಒಳಗೆ ಬದಲಾವಣೆಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸುವ ಅಗತ್ಯವಿಲ್ಲ: ಡಿಜಿಸಿಎ
ದೆಹಲಿಯಲ್ಲಿ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ಮಂಜುನಾಥ್ ಗೌಡ ನೇತೃತ್ವದಲ್ಲಿ ರಾಜ್ಯದ ಕಾರ್ಯಕರ್ತರು ಭಾಗಿ








