431 ನೇ ವರ್ಷದ ರಾಯರ ವರ್ಧಂತಿ ಉತ್ಸವ ಪ್ರಯುಕ್ತ:
ರಾಘವೇಂದ್ರ ತಮಿಳುನಾಡಿನ ಭುವನಿಗಿರಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಅದ್ವೈತಿ ಗಳಾದ ತಿಮ್ಮಣ್ಣ ಭಟ್ಟರು ಮತ್ತು ಗೋಪಿಕಾಂಬೆ. ಶ್ರೀ ವೆಂಕಟೇಶ್ವರನ ಅನುಗ್ರಹದಿಂದ ಎರಡನೇ ಮಗುವಾದ ಕಾರಣ ‘ವೆಂಕಟನಾಥ’ ಎಂದು ಹೆಸರಿಟ್ಟರು. ಮಗು ಹುಟ್ಟಿದಾಗಲೇ ಮನೆಯಲ್ಲಿ ದೈವಾನುಗ್ರಹದ ಅನುಭವವಾಯಿತು. ಬಾಲ್ಯದಲ್ಲಿ ಅಪಾರ ಬುದ್ಧಿವಂತನಾಗಿದ್ದು, ತಂದೆಯಿಂದ ಆರಂಭವಾದ ಪ್ರಾಥಮಿಕ ಶಿಕ್ಷಣದಲ್ಲಿ ವೇದಪಾಠಗಳನ್ನು ಮರೆಯದಂತೆ ಅಭ್ಯಾಸ ಒಮ್ಮೆ ಕೇಳಿದ ಪಾಠವನ್ನು ತಪ್ಪದೇ ಹೇಳುತ್ತಿದ್ದ. ಆದರೆ ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡರು. ತಾಯಿ ಮತ್ತು ಅಣ್ಣನ ವಾತ್ಸಲ್ಯದಲ್ಲಿ ಬೆಳೆದರು. ಕುಟುಂಬದ ಹೊಣೆಗಾರಿಕೆ ಹೆಚ್ಚಾಯಿತು.
ನಂತರ ತಮಿಳುನಾಡಿನ ಮಧುರೈ ನಲ್ಲಿದ್ದು ಅಕ್ಕ ಗೋಪಿಕಾಂಬ ಮನೆಗೆ ಬಂದರು. ಭಾವ ಲಕ್ಷ್ಮೀನರಸಿಂಹಾಚಾರ್ಯರ ಆಶ್ರಯದಲ್ಲಿ ಮುಂದಿನ ವಿದ್ಯಾಭ್ಯಾಸ ಮಾಡಿ ದರು. ಸಂಗೀತ- ವ್ಯಾಕರಣ- ನ್ಯಾಯ- ಮೀಮಾಂಸ- ತರ್ಕಶಾಸ್ತ್ರ, ಸುಲಭವಾಗಿ ಕರಗತವಾಗಿತ್ತು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕುಂಭಕೋಣಂಗೆ ಬಂದರು. ಇಲ್ಲಿ ಯತಿವರ್ಯರಾದ “ಸುಧೀಂದ್ರ ತೀರ್ಥ”ರ ಆಶ್ರಯದಲ್ಲಿ ಶಾಸ್ತ್ರಾಭ್ಯಾಸ ಮಾಡಿದರು. ಇವರ ಪ್ರತಿಭೆಯನ್ನು ನೋಡಿ ಎಲ್ಲರೂ ಬೆರಗಾದರು. ಗುರು ಸುಧೀಂದ್ರ ತೀರ್ಥರಿಗೆ ಗೋಚರಿಸಿತು. ಭವಿಷ್ಯದಲ್ಲಿ ವೆಂಕಟನಾಥನೇ ಧರ್ಮ ಪ್ರಚಾರ ಮಾಡುವ ಮಹಾತ್ಮ ವ್ಯಕ್ತಿಯಾಗುವನು.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ವೆಂಕಟನಾಥರಲ್ಲಿ ಅಹಂಕಾರವಿಲ್ಲದ ಪಾಂಡಿತ್ಯ. ಬಡತನದಲ್ಲೂ ಧರ್ಮವನ್ನು ಬಿಡಲಿಲ್ಲ ದೇವರ ಮೇಲಿನ ಭಕ್ತಿ ಮತ್ತು ಗುರು ಭಕ್ತಿ ಇವರ ಜೀವನದ ಆಧಾರವಾ ಗಿತ್ತು. ಮುಂದೆ ಇವರಿಗೆ ಸರಸ್ವತಿ ಎಂಬ ಕನ್ಯೆಯೊಡನೆ ವಿವಾಹವಾಯಿತು. ಸುಖಿ ಸಂಸಾರ ಚೆನ್ನಾಗಿತ್ತು. ಕೆಲವು ವರ್ಷಗಳಲ್ಲಿ ಒಬ್ಬ ಮಗ ಜನಿಸಿದ. ಮಗುವಿಗೆ “ಲಕ್ಷ್ಮೀನಾರಾಯಣ” ಎಂದು ಹೆಸರಿಟ್ಟರು. ವಿಧಿ ನಿಯಮದಂತೆ ಬಡತನದ ಸಣ್ಣ ಅಲೆ ಬಂದಿತ್ತು. ಈ ಬಡತನವೇ ಇವರ ಸವಾಲಾಗಿದ್ದು ಮುಂದೆ ಇವರ ಜೀವನದಲ್ಲಿ ಇದು ಮುಖ್ಯ ತಿರುವು ಪಡೆಯುತ್ತದೆ.
ಒಮ್ಮೆ ಶಿಷ್ಯರೊಡನೆ ಮಠಕ್ಕೆ ಹೊರಟಿದ್ದರು. ದಾರಿ ಮದ್ಯದಲ್ಲಿ, ವಿಲಕ್ಷಣ, ವಿಕಾರ ಮಹಿಳೆ ಎದರಾದಳು. ಅವಳ ಅಕರಾಳ ರೂಪ ನೋಡಿ ಹೆದರಿದ ಉಳಿದ ಶಿಷ್ಯರು ಹಿಂದೆ ಸರಿದರು. ಇದರಿಂದ ವೆಂಕಟನಾಥರ ಜೀವನದ ಗತಿಯೇ ಬದಲಾಯಿತು. ಆ ದರಿದ್ರ ದೇವತೆ ವೆಂಕಟನಾಥರ ಎದುರಿಗೆ ಬಂದಳು. ಪರಿಚಯ ವಿದ್ದವರಂತೆ ಪರಸ್ಪರರು ನೋಡಿ ನಕ್ಕರು. ಆಕೆ ಹೇಳಿದಳು! ವೆಂಕಟನಾಥ ನಿನ್ನ ಪೂರ್ವ ಕರ್ಮಕ್ಕನುಸಾರ ನಾನು ನಿನ್ನನ್ನು ಆಶ್ರಯಿಸಲು ಬಂದಿರುವೆ. ಇದು ಅನಿವಾರ್ಯವಾಗಿದೆ, ಏಕಾಏಕಿ ಸೇರಬಹುದಿತ್ತು. ಆದರೆ ನೀನು ಸಾಮಾನ್ಯ ಮಾನವನಲ್ಲ ಅದಕ್ಕಾಗಿ ನಿನ್ನ ಅನುಮತಿ ಕೇಳುತ್ತಿರುವೆ ಎಂದಳು. ವೆಂಕಟನಾಥರು ನಿನ್ನ ಮಾತು ಸರಿ ಪ್ರಾರಬ್ಧ ಕರ್ಮಗಳಿಗೆ ಯಾರು ಹೊರತಾಗಿಲ್ಲ. ನನ್ನ ಆಶ್ರಯಿಸಬಹುದು. ಆದರೆ ನನ್ನ ಎರಡು ಪ್ರಶ್ನೆಗಳಿಗೆ ಉತ್ತರ ಬೇಕು.ನೀನು ಎಷ್ಟು ಕಾಲ ನನ್ನನ್ನು ಆಶ್ರಯಿಸುವೆ, ದಾರಿದ್ರ್ಯವನ್ನು ಎಷ್ಟು ದಿನ ಅನುಭವಿಸಬೇಕು ತಿಳಿಸು ಎಂದರು. ದರಿದ್ರ ದೇವತೆ ಆ ದಿನ ಬರುತ್ತದೆ ವೆಂಕಟನಾಥ. ನಿನ್ನ ಪತ್ನಿ ಗುರುಗಳ ಬಳಿ ಹೋಗೋಣ ಎನ್ನುತ್ತಾಳೆ. ಅದೇ ದಿನ ನಿನ್ನನ್ನು ಬಿಟ್ಟು ಹೋಗುತ್ತೇನೆ. ಅಲ್ಲೀವರೆಗೂ ನಿನ್ನನ್ನು ಆಶ್ರಯಿಸುವೆ ಒಂದು ಮಾತು ನೆನಪಿರಲಿ, ನಿನ್ನ ಪತ್ನಿಗೆ, ಯಾವುದೇ ಸಂದರ್ಭದಲ್ಲೂ, ಎಂತಹ ಕಠಿಣ ಪರಿಸ್ಥಿತಿಯಲ್ಲೂ ಈ ವಿಷಯ ಹೇಳಬಾರದು. ಇದನ್ನು ವೆಂಕಟನಾಥರು ಒಪ್ಪಿ ದರಿದ್ರ ದೇವತೆಯನ್ನು ಸಂತೋಷದಿಂದಲೇ ಆಹ್ವಾನಿಸುತ್ತಾರೆ.
ಯಾವಾಗ ದರಿದ್ರ ದೇವತೆ ಅವರನ್ನು ವಕ್ಕರಿಸಿದಳೋ, ಆ ಕ್ಷಣದಿಂದಲೇ ಕಷ್ಟ ಶುರುವಾಯಿತು. ಸಾಮಾನ್ಯ ಮನುಷ್ಯರಾರೂ ಸಹಿಸಿಕೊಳ್ಳಲಾಗದ ದಟ್ಟ ದಾರಿದ್ರ ಅವರನ್ನು ಆವರಿಸಿತು. ಎರಡೇ ದಿನದೊಳಗೆ ಮನೆಯನ್ನು ಗುಡಿಸಿ ಗುಂಡಾಂತರ ಮಾಡಿದಂತೆ ಎಲ್ಲಾ ಕಳ್ಳತನವಾಯಿತು. ಮಳೆಗಾಳಿಗೆ ಮನೆಯ ಹೆಂಚು ಹಾರಿತು. ಒಳಗೆ ನೀರು ಸೋರಿತು. ಬಟ್ಟೆಗಳಿಗೂ ದರಿದ್ರ ಬಂದಂತೆ ತನ್ನಿಂದ ತಾನೇ ಅಲ್ಲಲ್ಲೇ ಹರಿದು ಮಾಸಿತು. ಮಗುವಿಗೆ ಲೋಟ ಕೊಡಲು ಹಾಲು ಕೂಡ ಇಲ್ಲವಾಗಿ, ಗಂಜಿಗೂ ಪರದಾಡುವಂತಾಯಿತು. ಇದ್ದ ಆಹಾರ ಪದಾರ್ಥಗಳೆಲ್ಲ ಮುಗಿದು ಹಿಟ್ಟಿಗೂ ತತ್ವಾರ ಬಂದಿತು. ಕೊಟ್ಟಿಗೆಯಲ್ಲಿದ್ದ ಹಸುಗಳು ಮಾಯವಾದವು. ನಿತ್ಯ ‘ಏಕಾದಶಿ’ ಎಂಬಂತಾಯಿತು.
ಸಂಭ್ರಮ ಕಾಲದಲ್ಲಿ ಇದ್ದ ಬಂಧು-ಬಳಗದವರು ಬಡತನದ ಸೂಚನೆ ಬರುತ್ತಿದ್ದಂತೆ ವೆಂಕಟನಾಥರ ಮನೆಯಿಂದ ಒಬ್ಬೊಬ್ಬರೇ ಕಾಲ್ಕಿತ್ತರು. ದರಿದ್ರ ದೇವತೆ ಯಂತೂ ಅವರ ಮನೆಯಲ್ಲಿ ಬಹಳ ಸಂತೋಷದಿಂದ ವಾಸ್ತವ್ಯ ಹೂಡಿದ್ದಳು. ಒಂದಷ್ಟು ಕಾಸು ಸಂಪಾದಿಸಬೇಕೆಂದು ಕೆಲವು ಮಕ್ಕಳಿಗೆ ವೇದ ಪಾಠವನ್ನು ಹೇಳಿಕೊಡುತ್ತಿದ್ದ ರು ಆದರೆ ಇದ್ದಕ್ಕಿದ್ದಂತೆ ಯಾರು ಬರಲಿಲ್ಲ. ಇಂಥ ಕಠಿಣ ಪರಿಸ್ಥಿತಿಯಲ್ಲೂ ವೆಂಕಟ ನಾಥರು ತಮ್ಮ ನಿತ್ಯ ಕರ್ಮಗಳನ್ನು ಎಂದಿನಂತೆ ಸಂತೋಷದಿಂದ ಮಾಡುತ್ತಿದ್ದರು. ಪತ್ನಿ ಸರಸ್ವತಿಯಂತೂ ಬಡತನದ ವಿರುದ್ಧವಾಗಿ ‘ಚ’ ಕಾರ ಶಬ್ದ ಎತ್ತಲಿಲ್ಲ.
ಒಂದು ರಾತ್ರಿ ಸರಸ್ವತಿಯವರ ಕನಸಿನಲ್ಲಿ ವೆಂಕಟನಾಥರ ಗುರುಗಳಿಗೆ ಗುರುವಾದ ವಿಜಯೇಂದ್ರತೀರ್ಥರು ಕಾಣಿಸಿ, ತಾಯಿ ನಿನ್ನ ಪತಿ ಮಹಾಮಹಿಮರು, ಈ ರೀತಿ ಕಷ್ಟ ಅನುಭವಿಸುವುದು ಜಗತ್ತಿಗೆ ಒಳ್ಳೆಯದಲ್ಲ. ನೀನು ನಿನ್ನ ಪತಿಗೆ ಗುರುಗಳ ಬಳಿಗೆ ಹೋಗೋಣ ಎಂದು ಹೇಳು, ಆಗ ಈ ಕಷ್ಟಗಳಿಗೆಲ್ಲ ಮುಕ್ತಿ ಸಿಗುತ್ತದೆ ಎಂದಂತಾಯಿತು. ರಾತ್ರಿ ಕಳೆದು ಬೆಳಗಾದ ಮೇಲೆ ವೆಂಕಟನಾಥರ ಬಳಿ ಬಂದ ಸರಸ್ವತಿ ವೇದಪಾರಂಗತರಾದ ನೀವು, ಇನ್ನೆಷ್ಟು ದಿನ ಈ ಕಷ್ಟ ಸಹಿಸುವಿರಿ, ಇದಕ್ಕೊಂದು ಪರಿಹಾರ ಹುಡುಕಬಹುದಲ್ಲ ಏಕೆ ಹಾಗೆ ಇರುವಿರಿ ಎಂದಳು. ಆಗ ವೆಂಕಟನಾಥರು ಅವರವರ ಕರ್ಮಫಲ ಅವರವರೇ ಅನುಭವಿಸಬೇಕು. ಅದನ್ನು ಬಾಕಿ ಉಳಿಸಬಾರದು. ಇದು ನಮ್ಮ ಕರ್ಮಫಲ ವಿಧಿ ಇಲ್ಲ ಎಂದರು. ಆಗ ಸರಸ್ವತಿ, ಹಾಗಾದರೆ ನಿಮ್ಮ ಗುರುಗಳ ಬಳಿ ಹೋಗಿ ಪರಿಹಾರ ಕೇಳಿ ಎಂದಳು. ವೆಂಕಟನಾಥ ರಿಗೆ ಆಶ್ಚರ್ಯವಾಯಿತು. ಹಿಂದೆ ದರಿದ್ರ ದೇವತೆ ಹೇಳಿದ ಮಾತು ನೆನಪಾಯಿತು. ಈ ಯೋಚನೆ ನಿನಗೆ ಹೇಗೆ ಬಂದಿತು ಎಂದು ಕೇಳಿದರು. ಏನೊ ಹಾಗೆ ಬಂದಿತು ಅಷ್ಟೇ, ನಿಮ್ಮ ಗುರುಗಳ ದರ್ಶನ ಒಮ್ಮೆ ಮಾಡೋಣ ಎಂದು ಒತ್ತಾಯಿಸಿದಳು.
ಇದೇ ಸಮಯಕ್ಕಾಗಿ ಕಾದವರಂತೆ ವೆಂಕಟನಾಥರು ಗುರುಗಳನ್ನು ಕಾಣಬೇಕೆಂಬ ತವಕ ನನಗೂ ಇದೆ. ಆದರೆ ಮುಂದೆ ಏನಾದರೂ ಕಷ್ಟಗಳು ಎದುರಾದರೆ ನೀನು ಏನೂ ಹೇಳಬಾರದು ಮಾನಸಿಕವಾಗಿ ತಯಾರಿಸಬೇಕು ಎಂದು ಸೂಕ್ಷ್ಮವಾಗಿ ಹೇಳಿದರು. ಅದಕ್ಕೆ ಸರಸ್ವತಿ, ಈಗ ಅನುಭವಿಸುತ್ತಿರುವ ಕಷ್ಟಕ್ಕಿಂತ ಹೆಚ್ಚಿನ ಕಷ್ಟ ಖಂಡಿತಾ ಇರಲಾರದು. ಏನೇ ಆಗಲಿ ಗುರುಗಳ ಬಳಿ ಒಮ್ಮೆ ಹೋಗಿ ಬರೋಣ ಎಂದು ಹೊರಟರು.
ಮಠಕ್ಕೆ ಬಂದು ಗುರುಗಳ ದರ್ಶನ ಮಾತ್ರದಿಂದಲೇ ಅವರ ಕಷ್ಟಗಳೆಲ್ಲ ಕರಗಿ ಹೋಯಿತು. ದರಿದ್ರ ದೇವತೆ ಅವರನ್ನು ಬಿಟ್ಟು ಓಡಿ ಹೋದಳು. ದಿನ ಕಳೆದಂತೆ ಅವರ ಪರಿಸ್ಥಿತಿ ಸುಧಾರಿಸಿತು. ದಿನವೂ ಮಠದಲ್ಲಿ ಪ್ರವಚನ ಮಾಡುತ್ತಿದ್ದರು. ಹಾಗೆ ಗುರುಗಳು ಹೋದ ಕಡೆಗೆಲ್ಲಾ ವೆಂಕಟನಾಥರು ಸಂಚಾರಕ್ಕೆ ಹೋಗುತ್ತಿದ್ದರು.
ಸಂಚಾರದಲ್ಲಿ ಅರಮನೆ ಹಾಗೂ ಸಭೆಗಳಲ್ಲಿ, ಮಠ ಮಾನ್ಯಗಳಲ್ಲಿ ವೇದ ಆಕಾಂಕ್ಷಿ ವಾದಿಗಳ ಜೊತೆ ಸಂವಾದ ಮಾಡುತ್ತಿದ್ದರು. ಸಂವಾದದಲ್ಲಿ ವೆಂಕಟನಾಥರೇ
ಜಯಶಾಲಿಗಳಾಗಿ ಮಠಕ್ಕೆ ಕೀರ್ತಿ ತಂದು ಕೊಟ್ಟರು. ಮಠದ ಗುರುಗಳಿಂದ ರಾಜರಿಂದ ಬಿರುದು ಪಡೆದರು. ಸುರಧೀಂದ್ರ ತೀರ್ಥರ ಇಚ್ಛೆಯಂತೆ ವೆಂಕಟನಾಥ ರಿಗೆ, ಶ್ರೀ ರಾಘವೇಂದ್ರ ಎಂಬ ನಾಮದಿಂದ ಸನ್ಯಾಸ ಆಶ್ರಮ ಕೊಟ್ಟರು.
ಸನ್ಯಾಸ ಸ್ವೀಕರಿಸಿದ ನಂತರ ಅನೇಕ ಪವಾಡಗಳಿಗೆ ಸಾಕ್ಷಿಯಾದರು ಅವುಗಳಲ್ಲಿ ಒಂದು. ಬ್ರಾಹ್ಮಣ ತನ್ನ ಮಗನ ಉಪನಯನಕ್ಕಾಗಿ ಹಣವಿಲ್ಲದೆ ಕಂಗಾಲಾಗಿದ್ದ. ಗುರುಗಳ ಬಳಿ ಆಶೀರ್ವಾದ ಕೇಳಿದನು. ಗುರುಗಳು ಮಂತ್ರಾಕ್ಷತೆ ಕೊಟ್ಟು ಇದನ್ನು ಮನೆಗೆ ತೆಗೆದುಕೊಂಡು ಹೋಗು ಈ ಅಕ್ಷತೆ ಬಂಗಾರವಾಗಿ ಮಾರ್ಪಡುತ್ತದೆ ಎಂದು ಹೇಳಿದರು. ಪ್ರಸಾದವನ್ನು ಸ್ವೀಕರಿಸಿದ ಬ್ರಾಹ್ಮಣ ಅಕ್ಷತೆ ಕಾಳನ್ನು ಮನೆಗೆ ತಂದು ಭಕ್ತಿಯಿಂದ ಗುರುದೇವ ಶುಭ ಕಾರ್ಯವನ್ನು ನೀವೇ ನೆರವೇರಿಸಿ ಕೊಡಬೇಕು ನಿಮ್ಮನ್ನೇ ನಂಬಿದ್ದೇನೆ ಎಂದು ಪ್ರಾರ್ಥಿಸಿ ತಂದ ನಾಲ್ಕಾರು ಕಾಳು ಅಕ್ಷತೆಯನ್ನು ಒಂದು ಶುಭ್ರವಾದ ವಸ್ತ್ರದಲ್ಲಿ ಕಟ್ಟಿ ದೇವರ ಮುಂದೆ ಇಟ್ಟು ಏಳು ದಿನಗಳು ಪೂಜೆ ನಮಸ್ಕಾರ ಮಾಡಿ ಗುರುದೇವ ನಿಮ್ಮನ್ನೇ ನಂಬಿರುವೆ ಅನುಗ್ರಹಿಸಬೇಕು ಎಂದು
ಗುರುಗಳ ಮೇಲಿದ್ದ ಅಚಲವಾದ ವಿಶ್ವಾಸದಿಂದ ದೇವರ ಮುಂದೆ ಇಟ್ಟು ಪೂಜಿಸುತ್ತಿದ್ದ ಅಕ್ಷತೆಯ ಗಂಟನ್ನು ಬಿಚ್ಚಿ ನೋಡಿದನು, ಆ ನಾಲ್ಕಾರು ಅಕ್ಷತೆ ಕಾಳುಗಳು ಕಾಳುಗಳು ಬಂಗಾರ ವಾಗಿತ್ತು. ಬ್ರಾಹ್ಮಣ ಅದನ್ನು ತೆಗೆದುಕೊಂಡು ಹೋಗಿ ಗುರುಗಳಿಗೆ ಒಪ್ಪಿಸಿದನು. ಗುರುಗಳು ಕೈಗೆ ತೆಗೆದುಕೊಂಡು ಆಶೀರ್ವಾದ ಮಾಡಿ ಅವನಿಗೆ ಕೊಟ್ಟು ಬಂಗಾರದ ಅಕ್ಷತೆಯನ್ನು ಉಪಯೋಗಿಸಿಕೊಂಡು ನಿನ್ನ ಮಗನ ಉಪನಯದ ಮಾಡುವೆ ಎಂದು ಆಶೀರ್ವದಿಸಿದರು.
ಅದರಂತೆ ಆ ಬ್ರಾಹ್ಮಣ ಬಂಗಾರದ ಅಕ್ಷತೆಯಲ್ಲಿ ಎರಡು ಕಾಲು ದೇವರ ಮುಂದೆ ಇಟ್ಟು ಉಳಿದ ಬಂಗಾರದ ಅಕ್ಷತೆಯನ್ನು ಮಾರಿ ಬಂದ ಹಣದಿಂದಲೇ ಮಗನ ಉಪನಯನವನ್ನು ಬಂಧು ಬಾಂಧವರ ಸಮ್ಮುಖದಲ್ಲಿ ಚೆನ್ನಾಗಿ ಮಾಡಿದನು.
ಇಷ್ಟೊಂದು ಬಡವನಾದ ಈತ ಹೇಗೆ ಉಪನಯನ ಮಾಡಿದನು ಎಂದಾಗ, ಆತ ಎಲ್ಲರೂ ಗುರುಗಳ ಅನುಗ್ರಹ ಎಂದು ನಡೆದ ಸಂಗತಿಯನ್ನು ತಿಳಿಸಿದನು. ಆಗ ಬಂದವರೆಲ್ಲ ಮಾತಾಡಿಕೊಂಡರು ಗುರು ಕರುಣೆ ಒಂದಿದ್ದರೆ ಎಲ್ಲವೂ ಹೂವಿನ ಸರ ಎತ್ತಿದಂತೆ ನಡೆಯುತ್ತದೆ ಗುರು ಭಕ್ತಿಯಿಂದ ಎಲ್ಲವೂ ಸಾಧ್ಯ ಎಂದು ಮಾತಾಡಿಕೊಂಡರು. ಹೀಗೆ ಅನೇಕ ಭಕ್ತರು ರಾಘವೇಂದ್ರ ಸ್ವಾಮಿ ರನ್ನ ಆರಾಧಿಸಿ ಇಷ್ಟಾರ್ಥಗಳನ್ನು ನೆರವೇರಿಸಿಕೊಂಡಿದ್ದಾರೆ. ಆದ್ದರಿಂದಲೇ ರಾಘವೇಂದ್ರ ಸ್ವಾಮಿಗಳು ಭಕ್ತರ ಪಾಲಿನ “ಕಲ್ಪವೃಕ್ಷ” ಎಂದು ಕರೆಯುತ್ತಾರೆ. “ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ”
ರಾಘವೇಂದ್ರ ಸ್ವಾಮಿಗಳು ಪ್ರಹಲ್ಲಾದನ ಅವತಾರ ಎನ್ನುತ್ತಾರೆ. ಹಿರಣ್ಯಕಶ್ಯಪುವಿ ನ ಮಗ ಪ್ರಹ್ಲಾದ ಬಾಲ್ಯದಿಂದಲೇ ಶ್ರೀಹರಿಯ ನಾಮವನ್ನು ಜಪಿಸುತ್ತಿದ್ದ. ಇವನ ತಂದೆ ಹಿರಣ್ಣ ಕಾಶಿಪು ಎಷ್ಟೇ ಕಿರುಕುಳ ನೀಡಿದರು ಪ್ರಹ್ಲಾದನ ಭಕ್ತಿ ಕುಗ್ಗಲಿಲ್ಲ
ಒಮ್ಮೆ ನಿನ್ನ ಶ್ರೀಹರಿ ಎಲ್ಲಿದ್ದಾನೆ ತೋರಿಸು ಎಂದು ಹಿರಣ್ಯಕಶ್ಯಪು ಕೇಳಿದಾಗ,
ಇದೇ ಕಂಬದಲ್ಲಿದ್ದಾನೆ ಎಂದು ಪ್ರಾರ್ಥಿಸಿದ ಇವನ ಪ್ರಾರ್ಥನೆಗೆ ಒಲಿದ ಶ್ರೀ ಹರಿ ಉಗ್ರ ನರಸಿಂಹನ ಅವತಾರದಲ್ಲಿ ಪ್ರತ್ಯಕ್ಷನಾಗಿ ಹಿರಣ್ಯಕಶಪುವನ್ನು ಸಂಹರಿಸಿದನು. ಆ ದಿನ ಶ್ರೀಹರಿ ಪ್ರಹಲ್ಲಾದನಿಗೆ “ನಿನ್ನ ಭಕ್ತಿ ಯುಗ ಯುಗಾಂತರಗಳಿಗೂ ಲೋಕಕ್ಕೆ ಮಾದರಿಯಾಗಲಿ. ಧರ್ಮ ಸ್ಥಾಪನೆಗಾಗಿ ನೀನು ಮರುಜನ್ಮಗಳನ್ನು ತೆಗೆದುಕೊಳ್ಳುವೆ ಎಂದು ಅನುಗ್ರಹಿಸಿದರು. ಶ್ರೀಹರಿಯ ಅನುಗ್ರಹದಂತೆ ಪ್ರಹ್ಲಾದನು ಎರಡನೇ ಅವತಾರವು ಶ್ರೀ ವ್ಯಾಸರಾಜರಾಗಿ ಜನಿಸಿದರು. ಇವರು ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದು ಧರ್ಮ ಪ್ರಚಾರ ಶಾಸ್ತ್ರದ ಅಭಿವೃದ್ಧಿಯನ್ನು ಮಾಡಿದರು. ಪ್ರಹ್ಲಾದನ ಮೂರನೇ ಅವತಾರವೇ ಶ್ರೀ ರಾಘವೇಂದ್ರ ಗುರುಗಳು. ಶ್ರೀ ರಾಘವೇಂದ್ರ ಗುರುಗಳು ಮಧ್ವಾಚಾರ್ಯರೇ
ಅನುಯಾಯಿಗಳಾಗಿ, ಮಧ್ವಾಚಾರ್ಯರೇ ಸ್ಥಾಪಿಸಿದ “ಮದ್ವಮತದ ದ್ವೈತ ಸಿದ್ದಾಂತ”ವನ್ನು ಪ್ರತಿಪಾದಿಸಿದರು. ಈ ರೀತಿ ವೆಂಕಟನಾಥನು ಸನ್ಯಾಸ ಸ್ವೀಕರಿಸಿ ರಾಘವೇಂದ್ರ ಸ್ವಾಮಿಗಳಾದರು. ಭಕ್ತೋದ್ಧಾರಕರಾಗಿ ಭಕ್ತ ಜನರಿಗಾಗಿ ಅನೇಕ ಪವಾಡಗಳುನನ್ನು ಮಾಡಿದರು. ಇದಕ್ಕೆ ಅನೇಕ ಭಕ್ತರೇ ಸಾಕ್ಷಿಯಾಗಿದ್ದಾರೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ರಾಘವೇಂದ್ರ ಸ್ವಾಮಿಗಳು ಸಜೀವ ಬಾಗಿಯೇ ಬೃಂದಾವನ ಪ್ರವೇಶ ಮಾಡಿದರು ಆಗ ಹೇಳಿದ ಮಾತು ನಾನು ಏಳೂರು ವರ್ಷಗಳ ಕಾಲ ಇಲ್ಲಿ ಜೀವಂತವಾಗಿಯೇ ಇದ್ದು ಭಕ್ತರ ಕಷ್ಟ ನಿವಾರಣೆ ಮಾಡುತ್ತೇರುತ್ತೇವೆ. ಎಂದು ಅಭಯ ಹಸ್ತ ನೀಡಿದ್ದಾರೆ. ಅಂದಿನಿಂದ ಇಂದಿಗೂ ಅನೇಕ ಭಕ್ತರು ತಮಗೂ ಆದಂತ ಇಂತಹ ಅನುಭವಗಳನ್ನು ಹೇಳುತ್ತಾರೆ.
ಶ್ರೀ ಪೂರ್ಣ ಬೋಧ ಗುರುತೀರ್ಥ ಪ್ರಯೋಬ್ಧಿ ಪಾರ
ಕಾಮಾರಿ ಮಾಕ್ಷ ವಿಷಮಾಕ್ಷ ಶಿರ: ಸ್ಪೃಶಂತೀ
ಪೂರ್ವೋತ್ತರಾಮಿತ ತರಂಗ ಚರತ್ಸುಹಂಸಾ ದೇವಾಲಿ
ಸೇವಿತ ಪರಾಂಘ್ರಿಪಯೋಜಲಗ್ನಾ!!








