| ಹುದ್ದೆಯ ಹೆಸರು |
ವಿದ್ಯಾರ್ಹತೆ |
| ಅಗ್ನಿವೀರ್ (ಜನರಲ್ ಡ್ಯೂಟಿ – GD) |
10ನೇ ತರಗತಿಯಲ್ಲಿ ಕನಿಷ್ಠ 45% ಅಂಕಗಳೊಂದಿಗೆ ಉತ್ತೀರ್ಣ. |
| ಅಗ್ನಿವೀರ್ (ತಾಂತ್ರಿಕ – Technical) |
ಪಿಸಿಎಂ ವಿಷಯಗಳೊಂದಿಗೆ ಪಿಯುಸಿ (50% ಅಂಕ) ಅಥವಾ ತಾಂತ್ರಿಕ ಡಿಪ್ಲೊಮಾ. |
| ಅಗ್ನಿವೀರ್ (ಕ್ಲರ್ಕ್/ ಸ್ಟೋರ್ ಕೀಪರ್) |
ಪಿಯುಸಿಯಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಉತ್ತೀರ್ಣ. |
| ಅಗ್ನಿವೀರ್ (ಟ್ರೇಡ್ಸ್ಮನ್) |
8ನೇ ಅಥವಾ 10ನೇ ತರಗತಿ ಉತ್ತೀರ್ಣ. |
ಅರ್ಹತಾ ಮಾನದಂಡಗಳು
ವಯೋಮಿತಿ: 17.5 ವರ್ಷದಿಂದ 22 ವರ್ಷಗಳ ಒಳಗಿರಬೇಕು (ಜನನ: 1 ಜುಲೈ 2005 ರಿಂದ 1 ಜುಲೈ 2009ರ ನಡುವೆ).
ದೈಹಿಕ ಅಳತೆ: ಎತ್ತರ 162 ಸೆಂ.ಮೀ ನಿಂದ 170 ಸೆಂ.ಮೀ ಇರಬೇಕು.
ಗುಂಟೂರು, ಸಿಕಂದರಾಬಾದ್ ಮತ್ತು ವಿಶಾಖಪಟ್ಟಣಂ ಕೇಂದ್ರ ಕಚೇರಿಗಳ ವ್ಯಾಪ್ತಿಯಲ್ಲಿ ಈ ನೇಮಕಾತಿ ನಡೆಯಲಿದ್ದು, ಅರ್ಹ ಅವಿವಾಹಿತ ಪುರುಷ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷೆ
ಆಯ್ಕೆಯು ಪ್ರಮುಖವಾಗಿ ಎರಡು ಹಂತಗಳಲ್ಲಿ ನಡೆಯಲಿದೆ:
ಆನ್ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE): ಇದು ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ವಿಶೇಷವೆಂದರೆ, ಅಭ್ಯರ್ಥಿಗಳು ಕನ್ನಡ ಸೇರಿದಂತೆ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದೆ.
ನೇಮಕಾತಿ ರ್ಯಾಲಿ: ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ದೈಹಿಕ ಸಾಮರ್ಥ್ಯ ಪರೀಕ್ಷೆ (PFT) ಮತ್ತು ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.
ವೇತನ ಮತ್ತು ಸೌಲಭ್ಯಗಳು
ಆಯ್ಕೆಯಾದ ಅಗ್ನಿವೀರ್ಗಳಿಗೆ ಮಾಸಿಕ ₹30,000 ದಿಂದ ₹40,000 ವರೆಗೆ ವೇತನ ದೊರೆಯಲಿದೆ. ಇದರೊಂದಿಗೆ ರೇಷನ್, ಡ್ರೆಸ್, ಪ್ರಯಾಣ ಭತ್ಯೆ ಹಾಗೂ ₹48 ಲಕ್ಷದ ಜೀವ ವಿಮಾ ಸೌಲಭ್ಯ ಲಭ್ಯವಿರುತ್ತದೆ. ಇವರು ಒಟ್ಟು 4 ವರ್ಷಗಳ ಕಾಲ ಸೇವೆ ಸಲ್ಲಿಸಬೇಕಾಗುತ್ತದೆ.
ಅಭ್ಯರ್ಥಿಗಳಿಗೆ ಸೂಚನೆ:
ಅಗ್ನಿವೀರ್ ಜೊತೆಗೆ RRB ALP ಅಧಿಸೂಚನೆಯು ಫೆಬ್ರವರಿ ಅಂತ್ಯದೊಳಗೆ ನಿರೀಕ್ಷಿಸಲಾಗಿದೆ. ಎರಡೂ ಪರೀಕ್ಷೆಗಳಿಗೆ ಸಾಮಾನ್ಯ ವಿಜ್ಞಾನ, ಗಣಿತ ಮತ್ತು ರೀಸನಿಂಗ್ ವಿಷಯಗಳು ಮುಖ್ಯವಾಗಿರುವುದರಿಂದ ಅಭ್ಯರ್ಥಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸುವುದು ಸೂಕ್ತ. ಅಗ್ನಿವೀರ್ ಆಕಾಂಕ್ಷಿಗಳು ಓಟ ಮತ್ತು ದೈಹಿಕ ಕಸರತ್ತಿನ ಕಡೆಗೆ ಹೆಚ್ಚಿನ ಗಮನ ಹರಿಸಿ.