ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು ಕ್ರಾಸ್ ಎಕ್ಸಾಮಿನ್ ವೇಳೆ ಪೊಲೀಸರಿಂದಲೇ ಎಡವಟ್ಟು ಆಗಿದೆ ಎಂದು ಆರೋಪಿಗಳ ಪರ ವಕೀಲರು ಈ ಒಂದು ಗಂಭೀರವಾದ ಆರೋಪ ಮಾಡಿದ್ದಾರೆ.
ಹೌದು ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಿಂದ ಕೋರ್ಟ್‌ಗೆ ದಿನಕ್ಕೊಂದು ಅರ್ಜಿ ಸಲ್ಲಿಕೆಯಾಗುತ್ತಿದೆ. ನಿನ್ನೆ ಕೋರ್ಟ್‌ಗೆ ಮೂವರು ಆರೋಪಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನಮ್ಮ ಮೊಬೈಲ್ ವಶಕ್ಕೆ ಪಡೆಯುವಾಗ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆದುಕೊಂಡಿಲ್ಲ. ಬೇರೊಂದು ಜಾಗದಲ್ಲಿ ವಶಕ್ಕೆ ಪಡೆದು ಅದನ್ನ ಕಾಮಾಕ್ಷಿಪಾಳ್ಯ ಎಂದಿದ್ದಾರೆ ಎಂದು ಆರೋಪಿಸಿದ್ದಾರೆ.
ದೋಷಾರೋಪ ಪಟ್ಟಿ ಸಲ್ಲಿಕೆಯಾದಾಗ ಫೋಟೋದಲ್ಲಿ ವೈಟ್ ಕಲರ್ ಟೈಲ್ಸ್ ಇದೆ. ಪೊಲೀಸ್ ಠಾಣೆಯಲ್ಲಿ ಹಳೆಯ ಮಾದರಿ ಮೊಜಾಕ್ ಇದೆ. ಹೀಗಾಗಿ, ಪ್ರಕರಣದ ದಾರಿ ತಪ್ಪಿಸಿದ್ದಾರೆ. ಆದ್ದರಿಂದ ಖುದ್ದಾಗಿ ನ್ಯಾಯಾಧೀಶರೇ ಜೈಲಿಗೆ ಭೇಟಿ ಕೊಡಬೇಕು. ಅಲ್ಲದೇ, ಸ್ಟೇಷನ್ ಸಿಸಿಟಿವಿಯನ್ನು ವಶಕ್ಕೆ ಪಡೆಯಬೇಕು. ಬದಲಾವಣೆ ಮಾಡದಂತೆ ಎಚ್ಚರಿಕೆ ವಹಿಸಬೇಕು ಅಂತ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿಯನ್ನು ಸ್ವೀಕಾರ ಮಾಡಿರುವ ನ್ಯಾಯಾಲಯ ವಿಚಾರಣೆ ನಿಗದಿ ಮಾಡಿದೆ.








