ಬೆಂಗಳೂರು : ಬೆಂಗಳೂರು ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬೆಳೆಯುವ ತರಕಾರಿಗಳಲ್ಲಿ ಅಪಾಯಕಾರಿ ಭಾರಿ ಲೋಹವಾಗಿರುವ ಸೀಸದ ಅಂಶ ಮತ್ತು ಕ್ರಿಮಿನಾಶಕಗಳ ಆವಶೇಷಗಳು ಕಂಡು ಬಂದಿದ್ದು, ಇವುಗಳನ್ನು ಸೇವಿಸಿದರೆ ಕಿಡ್ನಿ ಹಾಗೂ ಮಿದುಳು ಕಾಯಿಲೆ ಬರಲಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ನಗರದ ಅನೇಕ ತರಕಾರಿಗಳಲ್ಲಿ ಅಪಾಯಕಾರಿ ಅಂಶಗಳಿರುವ ಬಗ್ಗೆ ದೂರುಗಳು ಬಂದಿದ್ದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಸ್ವಯಂ ಪ್ರೇರಿತ ಪ್ರಕರಣ ಪ್ರಕರಣ ದಾಖಲಿಸಿಕೊಂಡಿತ್ತು. ದಾ ಎನ್ ಜಿಟಿ ನಿರ್ದೇಶನದಂತೆ ತರಕಾರಿಗಳ ಪರೀಕ್ಷೆ ನಡೆಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಐವರು ಸದಸ್ಯರ ಸಮಿತಿಯನ್ನು ರಚಿಸಿತ್ತು.
ಈ ಸಮಿತಿಯ ಸದಸ್ಯರು ಬೆಂಗಳೂರು ನಗರ, ನೆಲಮಂಗಲ, ಚಿಕ್ಕಬಳ್ಳಾಪುರದ ವಿವಿಧ ಎಪಿಎಂಸಿಗಳು, ಹಾಪ್ ಕಾಮ್ಸ್‌ಗಳು, ತರಕಾರಿ ಬೆಳೆಯುವ ಪ್ರದೇಶಗಳಿಂದ 72 ಮಾದರಿಯ ತರಕಾರಿಗಳನ್ನು ಪರೀಕ್ಷೆಯ ಭಾಗವಾಗಿ ಹೊಲಗಳಲ್ಲಿನ ಮಣ್ಣು ಮತ್ತು ಬೆಳೆಗಳಿಗೆ ಬಳಸುವ ಸಂಸ್ಕರಿಸಿದ ನೀರು, ಅಂತರ್ಜಲ ಕೂಡ ಸಂಗ್ರಹಿಸಿ ಎಫ್‌ಎಸ್‌ಎಸ್‌ಎಐ ಅನುಮೋದಿತ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ತರಕಾರಿಗಳನ್ನು ಸಂಗ್ರಹಿಸಿದರು.
ಈ ವೇಳೆ ಬದನೆಕಾಯಿ, ಸೋರೆಕಾಯಿ ಸೇರಿದಂತೆ ಅನೇಕ ತರಕಾರಿಗಳಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಿಗದಿಪಡಿಸಿದ ಮಾನದಂಡಗಳನ್ನು ಮೀರಿ ಹಾನಿಕಾರಕ ಭಾರ ಲೋಹಗಳು ಪತ್ತೆಯಾಗಿವೆ. 72 ಮಾದರಿಗಳ ಪೈಕಿ 53 ಮಾದರಿಗಳನ್ನು ರಾಜಾಜಿ ನಗರ, ನೆಲಮಂಗಲ, ಕೋಲಾರ ಮಾರುಕಟ್ಟೆಗಳಿಂದ ಉಳಿದ ಮಾದರಿಯನ್ನು ನೆಲಮಂಗಲ, ಕೋಲಾರ ಮತ್ತು ಚಿಕ್ಕಬಳ್ಳಾಪುರದ ಹೊಲಗಳಿಂದ ಸಂಗ್ರಹಿಸಲಾಗಿತ್ತು. 72 ಮಾದರಿಗಳಲ್ಲಿ 19ರಲ್ಲಿ ನಿಗದಿಗಿಂತ ಹೆಚ್ಚು ಸೀಸದ ಅಂಶ ಕಂಡು ಬಂದಿದೆ.
ಸಾವಯವ ತರಕಾರಿ ಎಂದು ಮಾರಾಟ ಮಾಡಲಾಗುತ್ತಿದ್ದ 1 ಕೆ.ಜಿ ಬದನೆಕಾಯಿಯಲ್ಲಿ 1.953 ಎಂ.ಜಿ ಸೀಸ ಕಂಡು ಬಂದಿದೆ. ಇದು ಎಫ್‌ಎಸ್‌ಎಸ್‌ಎಐ ನಿಗದಿಪಡಿಸಿದ್ದಕ್ಕಿಂತ20ಪಟ್ಟು ಅಧಿಕ.ತೊಂಡೆಕಾಯಿಯಲ್ಲಿ 18 ಪಟ್ಟು, ಬೀನ್ಸ್‌ನಲ್ಲಿ 9 ಪಟ್ಟು ಸೀಸ ಕಂಡು ಬಂದಿದೆ. ಹಸಿರೆಲೆಗಳು ಹಾಗೂ ಕ್ಯಾಬೇಜ್‌ನಲ್ಲಿ ನಿಗದಿಪಡಿಸಿದ್ದಕ್ಕಿಂತ 5 ಪಟ್ಟು ಹೆಚ್ಚು ಸೀಸ, ಸೌತೆಕಾಯಿ, ದಪ್ಪ ಮೆಣಸಿನಕಾಯಿ, ಹಾಗಲಕಾಯಿ, ಬೀಟ್ ರೂಟ್, ಬಜ್ಜಿ ಮೆಣಸಿನಕಾ ಯಿಯಲ್ಲೂ ಕೂಡಎಫ್‌ಎಸ್‌ಎಸ್‌ಎಐನಿಗದಿಪಡಿಸಿದ್ದಕ್ಕಿಂತ ಹೆಚ್ಚು ಸೀಸದ ಅಂಶ ಕಂಡು ಬಂದಿದೆ.
ತರಕಾರಿಗಳಲ್ಲಿ ಸೀಸದ ಅಂಶ ಹೇಗೆ ಸೇರುತ್ತದೆ ಮತ್ತು ಅದನ್ನು ಕಡಿಮೆ ಮಾಡುವುದು ಹೇಗೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ:
1. ಸೀಸದ ಅಂಶ ಸೇರಲು ಪ್ರಮುಖ ಕಾರಣಗಳು
-
ಕಲುಷಿತ ನೀರು: ಕೈಗಾರಿಕಾ ತ್ಯಾಜ್ಯ ಅಥವಾ ಒಳಚರಂಡಿ ನೀರನ್ನು ಕೃಷಿಗೆ ಬಳಸುವುದರಿಂದ ಸೀಸದ ಅಂಶ ಮಣ್ಣು ಮತ್ತು ಗಿಡಗಳಿಗೆ ಸೇರುತ್ತದೆ.
-
ಮಣ್ಣಿನ ಮಾಲಿನ್ಯ: ರಸ್ತೆ ಬದಿಯಲ್ಲಿ ಅಥವಾ ಕೈಗಾರಿಕೆಗಳ ಹತ್ತಿರವಿರುವ ಮಣ್ಣಿನಲ್ಲಿ ಸೀಸದ ಪ್ರಮಾಣ ಹೆಚ್ಚಿರುತ್ತದೆ.
-
ರಸಗೊಬ್ಬರ ಮತ್ತು ಕೀಟನಾಶಕ: ಕೆಲವು ಗುಣಮಟ್ಟವಿಲ್ಲದ ರಾಸಾಯನಿಕ ಗೊಬ್ಬರಗಳಲ್ಲಿ ಸೀಸದಂತಹ ಭಾರ ಲೋಹಗಳು ಇರುತ್ತವೆ.
-
ವಾಹನಗಳ ಹೊಗೆ: ರಸ್ತೆ ಬದಿಯ ತೋಟಗಳಲ್ಲಿ ಬೆಳೆಯುವ ತರಕಾರಿಗಳ ಮೇಲೆ ವಾಹನಗಳಿಂದ ಹೊರಬರುವ ಸೀಸದ ಕಣಗಳು ಕುಳಿತುಕೊಳ್ಳುತ್ತವೆ.
2. ಯಾವ ತರಕಾರಿಗಳಲ್ಲಿ ಅಪಾಯ ಹೆಚ್ಚು?
ಸಂಶೋಧನೆಗಳ ಪ್ರಕಾರ, ಕೆಲವು ನಿರ್ದಿಷ್ಟ ತರಕಾರಿಗಳು ಮಣ್ಣಿನಿಂದ ಸೀಸವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚು ಹೊಂದಿರುತ್ತವೆ:
-
ಎಲೆ ತರಕಾರಿಗಳು: ಪಾಲಕ್, ದಂಟು ಮತ್ತು ಕೊತ್ತಂಬರಿ ಸೊಪ್ಪು.
-
ಗಡ್ಡೆ ತರಕಾರಿಗಳು: ಕ್ಯಾರೆಟ್, ಮೂಲಂಗಿ ಮತ್ತು ಬೀಟ್ರೂಟ್ (ಇವು ನೇರವಾಗಿ ಮಣ್ಣಿನ ಸಂಪರ್ಕದಲ್ಲಿರುವುದರಿಂದ).
3. ಸೀಸದ ಅಂಶದಿಂದಾಗುವ ಆರೋಗ್ಯ ಸಮಸ್ಯೆಗಳು
ಸೀಸವು ದೇಹ ಸೇರುವುದರಿಂದ ದೀರ್ಘಕಾಲದ ಸಮಸ್ಯೆಗಳು ಉಂಟಾಗಬಹುದು:
-
ಮಕ್ಕಳಲ್ಲಿ ಬುದ್ಧಿಶಕ್ತಿ ಕುಂಠಿತವಾಗುವುದು.
-
ಕಿಡ್ನಿ (ಮೂತ್ರಪಿಂಡ) ಸಮಸ್ಯೆಗಳು.
-
ರಕ್ತಹೀನತೆ (Anemia).
-
ನರಮಂಡಲದ ಮೇಲೆ ದುಷ್ಪರಿಣಾಮ.
4. ಮುನ್ನೆಚ್ಚರಿಕಾ ಕ್ರಮಗಳು (ಗ್ರಾಹಕರಿಗೆ)
ತರಕಾರಿಗಳನ್ನು ಬಳಸುವ ಮೊದಲು ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದರಿಂದ ಅಪಾಯವನ್ನು ತಗ್ಗಿಸಬಹುದು:
-
ಉಪ್ಪಿನ ನೀರಿನಲ್ಲಿ ತೊಳೆಯಿರಿ: ತರಕಾರಿಗಳನ್ನು ತಂದ ಕೂಡಲೇ ಕನಿಷ್ಠ 15-20 ನಿಮಿಷಗಳ ಕಾಲ ಉಪ್ಪು ಬೆರೆಸಿದ ನೀರಿನಲ್ಲಿ ಅಥವಾ ವಿನೆಗರ್ ಬೆರೆಸಿದ ನೀರಿನಲ್ಲಿ ನೆನೆಸಿಟ್ಟು ನಂತರ ಶುದ್ಧ ನೀರಿನಲ್ಲಿ ತೊಳೆಯಿರಿ.
-
ಸಿಪ್ಪೆ ತೆಗೆಯಿರಿ: ಕ್ಯಾರೆಟ್, ಮೂಲಂಗಿ ಅಂತಹ ತರಕಾರಿಗಳ ಸಿಪ್ಪೆಯನ್ನು ತೆಗೆದು ಬಳಸುವುದು ಉತ್ತಮ.
-
ಸೊಪ್ಪಿನ ಶುದ್ಧತೆ: ಸೊಪ್ಪುಗಳನ್ನು ಕನಿಷ್ಠ 3-4 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು.
-
ಸ್ಥಳೀಯವಾಗಿ ಬೆಳೆದ ತರಕಾರಿ: ಸಾಧ್ಯವಾದಷ್ಟು ನಂಬಿಕಸ್ತ ರೈತರಿಂದ ಅಥವಾ ಸಾವಯವ (Organic) ಮಾರುಕಟ್ಟೆಯಿಂದ ತರಕಾರಿ ಖರೀದಿಸಿ.








