Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆರೋಗ್ಯಕರ ಲೈಂಗಿಕ ಜೀವನಕ್ಕೆ ಮಾತ್ರೆಗಳ ಅಗತ್ಯವಿಲ್ಲ: ಇಲ್ಲಿದೆ ನೈಸರ್ಗಿಕ ದಾರಿಗಳ ಬಗ್ಗೆ ಕಂಪ್ಲೀಟ್ ಗೈಡ್

23/02/2026 9:43 PM

‘ಮನರೇಗಾ’ ಹೆಸರು ಬದಲಿಸಿದ್ದು ‘ಮೋದಿ ಸರ್ಕಾರ’ದಿಂದ ಮನೆ ಹಾಳು ನಿರ್ಧಾರ: ಸಚಿವ ಬೈರತಿ ಸುರೇಶ್ ಆಕ್ರೋಶ

23/02/2026 9:38 PM

ಬೆಂಗಳೂರಲ್ಲಿ 688 ಕೋಟಿ ರೂಪಾಯಿ ಬಾಕಿ ಆಸ್ತಿ ತೆರಿಗೆ ವಸೂಲಾತಿ ಮಾಡಿದ GBA

23/02/2026 9:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಮನರೇಗಾ’ ಹೆಸರು ಬದಲಿಸಿದ್ದು ‘ಮೋದಿ ಸರ್ಕಾರ’ದಿಂದ ಮನೆ ಹಾಳು ನಿರ್ಧಾರ: ಸಚಿವ ಬೈರತಿ ಸುರೇಶ್ ಆಕ್ರೋಶ
KARNATAKA

‘ಮನರೇಗಾ’ ಹೆಸರು ಬದಲಿಸಿದ್ದು ‘ಮೋದಿ ಸರ್ಕಾರ’ದಿಂದ ಮನೆ ಹಾಳು ನಿರ್ಧಾರ: ಸಚಿವ ಬೈರತಿ ಸುರೇಶ್ ಆಕ್ರೋಶ

By kannadanewsnow0923/02/2026 9:38 PM

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ಬದಲಾಯಿಸಿ ವಿಬಿಜಿ ರಾಮ್ ಜಿ ಎಂದು ನಾಮಕರಣ ಮಾಡುವ ಮೂಲಕ ಜನಪರ, ಬಡವರ ಪರವಾಗಿದ್ದ ಕಾರ್ಯಕ್ರಮವನ್ನು ಬುಡಮೇಲು ಮಾಡುತ್ತಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗಿದ್ದ ನರೇಗಾ ಬಚಾವ್ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 20 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಬಡವರು, ಕಾರ್ಮಿಕರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಹೆಸರಿನಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿತ್ತು. ಅಂದಿನಿಂದ ಇಂದಿನವರೆಗೆ ಕೋಟ್ಯಂತರ ಬಡಜನರು ಇದರ ಸದುಪಯೋಗ ಮಾಡಿಕೊಂಡು ಆರ್ಥಿಕ ಸ್ವಾವಲಂಬಿಗಳಾಗಿದ್ದರು. ಆದರೆ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮನರೇಗಾ ಹೆಸರನ್ನು ಬದಲಿಸಿ ವಿಬಿಜಿ ರಾಮ್ ಜಿ ಹೆಸರಿನಲ್ಲಿ ಯೋಜನೆಯನ್ನು ಜಾರಿಗೆ ತರಲು ಹೊರಟಿದೆ ಎಂದು ಕಿಡಿಕಾರಿದರು.

ರೈತರು, ಮಹಿಳೆಯರ ಜೀವನಾಧಾರಾವಾಗಿದ್ದ ಉದ್ಯೋಗದ ಹಕ್ಕನ್ನು ನೀಡಿದ್ದ ಮನರೇಗಾ ಹೆಸರನ್ನೇ ಬದಲಾಯಿಸುವ ಮೂಲಕ ಸ್ಥಳೀಯವಾಗಿ ಕೇಳಿ ಪಡೆಯುವ ಉದ್ಯೋಗದ ಹಕ್ಕನ್ನು ಕಿತ್ತುಕೊಂಡಿದ್ದಾರೆ. ಜನರ ಜೊತೆ, ರಾಜ್ಯ ಸರ್ಕಾರಗಳ ಜೊತೆ ಚರ್ಚೆ ಮಾಡದೇ ಸರ್ವಾಧಿಕಾರಿ ಧೋರಣೆ ಅನುಸರಿಸಿ ಬಡಜನರ ಆಶಯಗಳನ್ನು ಧ್ವಂಸ ಮಾಡಿದೆ ಮೋದಿ ಸರ್ಕಾರ. ಸಂಸತ್ತಿನಲ್ಲಿ ಇಂತಹ ಮಹತ್ತರ ಯೋಜನೆ ಬಗ್ಗೆ ಕೇವಲ 8 ಗಂಟೆ ಚರ್ಚೆ ಮಾಡಿ ಕಲಾಪವನ್ನು ಮುಂದೂಡುವಂತೆ ಮಾಡಿ ಅನುಮೋದನೆ ಪಡೆಯುವ ಮೂಲಕ ಮನೆ ಹಾಳು ನಿರ್ಧಾರವನ್ನು ಕೈಗೊಂಡಿದೆ ಎಂದು ಬೈರತಿ ಸುರೇಶ್ ತೀವ್ರ ವಾಗ್ದಾಳಿ ನಡೆಸಿದರು.

2025-26 ರಲ್ಲಿ ರಾಜ್ಯದಲ್ಲಿ 71.8 ಲಕ್ಷ ಸಕ್ರಿಯ ಕಾರ್ಮಿಕರಿದ್ದರು. 36.75 ಲಕ್ಷ ಮಹಿಳೆಯರಿಗೆ ಇದರಿಂದ ಅನುಕೂಲ ಪಡೆಯುತ್ತಿದ್ದರು. ಇಂತಹ ಯೋಜನೆಯನ್ನು ಬದಲಾಯಿಸುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರ ಅವರೆಲ್ಲರ ಹಕ್ಕನ್ನು ಕಸಿದುಕೊಳ್ಳುವ ಲಜ್ಜೆಗೆಟ್ಟ ನಿರ್ಧಾರ ಕೈಗೊಂಡಿದೆ. ಸಣ್ಣ ರೈತರು, ಕೂಲಿ ಕಾರ್ಮಿಕರು ತಾವಿರುವ ಜಾಗದಲ್ಲಿಯೇ ಉದ್ಯೋಗ ಪಡೆದು ಆರ್ಥಿಕ ಸ್ವಾವಲಂಬಿಗಳಾಗುತ್ತಿದ್ದರು. ಆದರೆ, ಮೋದಿ ಸರ್ಕಾರ ಕಾರ್ಪೊರೇಟ್ ಮತ್ತು ಕೃಷಿ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ವಿಬಿಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದೆ ಎಂದು ತರಾಟೆಗೆ ತೆಗೆದುಕೊಂಡರು.

ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜಾರಿಗೆ ತಂದಿರುವ ಅನೇಕ ಜನಪರ ಯೋಜನೆಗಳನ್ನು ಟೀಕಿಸುತ್ತಾ ಜನವಿರೋಧಿ ನೀತಿಯನ್ನು ಅನುಸರಿಸುವ ಮೂಲಕ ಬಿಜೆಪಿ ಜನರಿಗೆ ಮೋಸ ಮಾಡಿದೆ. ದಿನಕ್ಕೊಂದು ಸುಳ್ಳು ಹೇಳುತ್ತಲೇ ಬಿಜೆಪಿ ಚುನಾವಣೆಗಳನ್ನು ನಡೆಸುತ್ತಿದೆ. ಆ ಸುಳ್ಳುಗಳಿಗೆ ಇಂದಲ್ಲಾ ನಾಳೆ ಅಂತ್ಯ ಸಿಗಲಿದೆ. ಆಗ ಈ ಮೋದಿ ಸರ್ಕಾರವೂ ಅಂತ್ಯ ಕಾಣುತ್ತದೆ ಎಂದರು.

ಕೂಡಲೇ, ಜನವಿರೋಧಿ, ಕಾರ್ಮಿಕ ವಿರೋಧಿ ವಿಬಿಜಿ ರಾಮ್ ಜಿಯನ್ನು ಕೈಬಿಟ್ಟು ಮನರೇಗಾ ಕಾಯ್ದೆಯನ್ನು ಮರುಜಾರಿಗೆ ತರಬೇಕು, ಕಾರ್ಮಿಕರಿಗೆ ಕನಿಷ್ಠ 400 ರೂಪಾಯಿ ಕೂಲಿ ನಿಗದಿಪಡಿಸಬೇಕೆಂದು ಅವರು ಒತ್ತಾಯಿಸಿದರು.

ಬೆಂಗಳೂರಲ್ಲಿ 688 ಕೋಟಿ ರೂಪಾಯಿ ಬಾಕಿ ಆಸ್ತಿ ತೆರಿಗೆ ವಸೂಲಾತಿ ಮಾಡಿದ GBA

ಛೇ..! ಇವನೆಂಥ ಮಾವ! ಮಗಳನ್ನು ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಬೆಂಕಿ ಹಚ್ಚಿದ ಪಾಪಿ ತಂದೆ!

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ 688 ಕೋಟಿ ರೂಪಾಯಿ ಬಾಕಿ ಆಸ್ತಿ ತೆರಿಗೆ ವಸೂಲಾತಿ ಮಾಡಿದ GBA

23/02/2026 9:32 PM2 Mins Read

ಛೇ..! ಇವನೆಂಥ ಮಾವ! ಮಗಳನ್ನು ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಬೆಂಕಿ ಹಚ್ಚಿದ ಪಾಪಿ ತಂದೆ!

23/02/2026 9:29 PM1 Min Read

ಅಸ್ಪೃಶ್ಯತೆ ನಿರ್ಮೂಲನೆಗೆ ಎಲ್ಲರೂ ದೃಢ ಸಂಕಲ್ಪ ಮಾಡಿ: SC, ST ಮೇಲ್ವಿಚಾರಕಿ ಮತ್ತು ಬಲವರ್ಧನೆ ಸಮಿತಿ ಸಂಚಾಲಕಿ ಪಿ.ಯಶೋಧ

23/02/2026 9:25 PM2 Mins Read
Recent News

ಆರೋಗ್ಯಕರ ಲೈಂಗಿಕ ಜೀವನಕ್ಕೆ ಮಾತ್ರೆಗಳ ಅಗತ್ಯವಿಲ್ಲ: ಇಲ್ಲಿದೆ ನೈಸರ್ಗಿಕ ದಾರಿಗಳ ಬಗ್ಗೆ ಕಂಪ್ಲೀಟ್ ಗೈಡ್

23/02/2026 9:43 PM

‘ಮನರೇಗಾ’ ಹೆಸರು ಬದಲಿಸಿದ್ದು ‘ಮೋದಿ ಸರ್ಕಾರ’ದಿಂದ ಮನೆ ಹಾಳು ನಿರ್ಧಾರ: ಸಚಿವ ಬೈರತಿ ಸುರೇಶ್ ಆಕ್ರೋಶ

23/02/2026 9:38 PM

ಬೆಂಗಳೂರಲ್ಲಿ 688 ಕೋಟಿ ರೂಪಾಯಿ ಬಾಕಿ ಆಸ್ತಿ ತೆರಿಗೆ ವಸೂಲಾತಿ ಮಾಡಿದ GBA

23/02/2026 9:32 PM

ಛೇ..! ಇವನೆಂಥ ಮಾವ! ಮಗಳನ್ನು ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಬೆಂಕಿ ಹಚ್ಚಿದ ಪಾಪಿ ತಂದೆ!

23/02/2026 9:29 PM
State News
KARNATAKA

‘ಮನರೇಗಾ’ ಹೆಸರು ಬದಲಿಸಿದ್ದು ‘ಮೋದಿ ಸರ್ಕಾರ’ದಿಂದ ಮನೆ ಹಾಳು ನಿರ್ಧಾರ: ಸಚಿವ ಬೈರತಿ ಸುರೇಶ್ ಆಕ್ರೋಶ

By kannadanewsnow0923/02/2026 9:38 PM KARNATAKA 2 Mins Read

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಯೋಜನೆಯನ್ನು ಬದಲಾಯಿಸಿ ವಿಬಿಜಿ ರಾಮ್ ಜಿ ಎಂದು ನಾಮಕರಣ…

ಬೆಂಗಳೂರಲ್ಲಿ 688 ಕೋಟಿ ರೂಪಾಯಿ ಬಾಕಿ ಆಸ್ತಿ ತೆರಿಗೆ ವಸೂಲಾತಿ ಮಾಡಿದ GBA

23/02/2026 9:32 PM

ಛೇ..! ಇವನೆಂಥ ಮಾವ! ಮಗಳನ್ನು ಪ್ರೀತಿಸಿ ಮದುವೆಯಾದ ಹುಡುಗನ ಮನೆಗೆ ಬೆಂಕಿ ಹಚ್ಚಿದ ಪಾಪಿ ತಂದೆ!

23/02/2026 9:29 PM

ಅಸ್ಪೃಶ್ಯತೆ ನಿರ್ಮೂಲನೆಗೆ ಎಲ್ಲರೂ ದೃಢ ಸಂಕಲ್ಪ ಮಾಡಿ: SC, ST ಮೇಲ್ವಿಚಾರಕಿ ಮತ್ತು ಬಲವರ್ಧನೆ ಸಮಿತಿ ಸಂಚಾಲಕಿ ಪಿ.ಯಶೋಧ

23/02/2026 9:25 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.