ನವದೆಹಲಿ: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಎಪ್‌ಸ್ಟೀನ್ ಫೈಲ್ಸ್’ (Epstein Files) ವಿಷಯದ ಬಗ್ಗೆ ಗೂಗಲ್‌ನಲ್ಲಿ ಹುಡುಕಾಟ ನಡೆಸುವ ಮುನ್ನ ಎಚ್ಚರವಿರಲಿ. ಜನರ ಕುತೂಹಲವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಅಪರಾಧಿಗಳು, ಈ ಹೆಸರಿನಲ್ಲಿ ದೊಡ್ಡ ಮಟ್ಟದ ಡೇಟಾ ಕಳ್ಳತನದ ಜಾಲವನ್ನು ಹೆಣೆದಿದ್ದಾರೆ ಎಂದು ಸರ್ಕಾರಿ ಏಜೆನ್ಸಿಗಳು ಮತ್ತು ಸೈಬರ್ ತಜ್ಞರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಹೇಗೆ ವಂಚನೆ ಗೊತ್ತಾ?
ಸೈಬರ್ ತಜ್ಞರ ಪ್ರಕಾರ, ಬಳಕೆದಾರರು ಈ ವಿಷಯದ ಬಗ್ಗೆ ಮಾಹಿತಿ ಪಡೆಯಲು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಅನೇಕ ನಕಲಿ ವೆಬ್‌ಸೈಟ್‌ಗಳ ಲಿಂಕ್‌ಗಳು ಕಾಣಿಸಿಕೊಳ್ಳುತ್ತವೆ. ಇವು ನೋಡಲು ಅಧಿಕೃತ ಮತ್ತು ನಂಬಿಕಸ್ತ ವೆಬ್‌ಸೈಟ್‌ಗಳಂತೆಯೇ ಇರುತ್ತವೆ. ಈ ಲಿಂಕ್ ಕ್ಲಿಕ್ ಮಾಡಿದ ತಕ್ಷಣ, “ರಹಸ್ಯ ಕಡತಗಳನ್ನು ನೋಡಲು ನಿಮ್ಮ Gmail ಐಡಿ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ” ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ.
ಅಪಾಯಗಳೇನು?
ಬಳಕೆದಾರರು ಕುತೂಹಲಕ್ಕೆ ಬಿದ್ದು ತಮ್ಮ ಜಿಮೇಲ್ ವಿವರಗಳನ್ನು ನಮೂದಿಸಿದ ಕೂಡಲೇ ಹ್ಯಾಕರ್ಸ್‌ಗಳ ಆಟ ಶುರುವಾಗುತ್ತದೆ:
-
ಮಾಹಿತಿ ಸೋರಿಕೆ: ನಿಮ್ಮ ಇಮೇಲ್, ಕಾಂಟ್ಯಾಕ್ಟ್ ಲಿಸ್ಟ್ ಮತ್ತು ಖಾಸಗಿ ದಾಖಲೆಗಳು ಹ್ಯಾಕರ್ಸ್‌ಗಳ ಪಾಲಾಗುತ್ತವೆ.
-
ಬ್ಯಾಂಕಿಂಗ್ ವಂಚನೆ: ನಿಮ್ಮ ಜಿಮೇಲ್‌ಗೆ ಲಿಂಕ್ ಆಗಿರುವ ಬ್ಯಾಂಕ್ ವಿವರಗಳು ಮತ್ತು ಹಣಕಾಸಿನ ಮಾಹಿತಿಯನ್ನು ಕದಿಯುವ ಸಾಧ್ಯತೆ ಇರುತ್ತದೆ.
-
ಬ್ಲ್ಯಾಕ್‌ಮೇಲ್ ತಂತ್ರ: ನಿಮ್ಮ ಖಾಸಗಿ ಮಾಹಿತಿಯನ್ನು ಬಳಸಿಕೊಂಡು ಹ್ಯಾಕರ್ಸ್‌ಗಳು ನಂತರ ನಿಮ್ಮನ್ನೇ ಬ್ಲ್ಯಾಕ್‌ಮೇಲ್ ಮಾಡುವ ಅಥವಾ ಹಣಕ್ಕಾಗಿ ಬೇಡಿಕೆ ಇಡುವ ಅಪಾಯವಿದೆ.
ತಜ್ಞರ ಸಲಹೆಗಳಿವು:
-
ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ: ಯಾವುದೇ ಟ್ರೆಂಡಿಂಗ್ ವಿಷಯಗಳ ಬಗ್ಗೆ ಮಾಹಿತಿ ಪಡೆಯಲು ಅಧಿಕೃತ ಸುದ್ದಿ ಸಂಸ್ಥೆಗಳನ್ನೇ ಅವಲಂಬಿಸಿ.
-
URL ಪರೀಕ್ಷಿಸಿ: ಯಾವುದೇ ವೆಬ್‌ಸೈಟ್‌ಗೆ ಭೇಟಿ ನೀಡುವ ಮುನ್ನ ಅದರ ವಿಳಾಸ (URL) ಸರಿಯಾಗಿದೆಯೇ ಎಂದು ಗಮನಿಸಿ.
-
ಲಾಗಿನ್ ಎಚ್ಚರಿಕೆ: ಯಾವುದೇ ಅಪರಿಚಿತ ಸೈಟ್‌ಗಳಲ್ಲಿ ನಿಮ್ಮ ಇಮೇಲ್ ಅಥವಾ ಸೋಶಿಯಲ್ ಮೀಡಿಯಾ ಲಾಗಿನ್ ವಿವರಗಳನ್ನು ನೀಡಬೇಡಿ.
-
ಟೂ-ಫ್ಯಾಕ್ಟರ್ ಅಥೆಂಟಿಕೇಶನ್: ನಿಮ್ಮ ಎಲ್ಲಾ ಖಾತೆಗಳಿಗೆ Two-Factor Authentication (2FA) ಸಕ್ರಿಯಗೊಳಿಸಿ. ಇದರಿಂದ ಪಾಸ್‌ವರ್ಡ್ ಸೋರಿಕೆಯಾದರೂ ನಿಮ್ಮ ಖಾತೆ ಸುರಕ್ಷಿತವಾಗಿರುತ್ತದೆ.
ಪದೇ ಪದೇ ಸುಸ್ತು ಎನಿಸುತ್ತಿದೆಯೇ? ಹಿಮೋಗ್ಲೋಬಿನ್ ಹೆಚ್ಚಿಸಲು ಇಲ್ಲಿವೆ 6 ಸುಲಭ ಆಹಾರ ಕ್ರಮಗಳು! Low haemoglobin








