ಚಿಕ್ಕಬಳ್ಳಾಪುರ : ದೇಶಾದ್ಯಂತ ಮನ್ ರೇಗಾ ಉಳಿಸಿ ಅಭಿಯಾನ ಆರಂಭವಾಗಿದೆ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದಲ್ಲಿ ಈ ಒಂದು ಆಂದೋಲನ ಹಮ್ಮಿಕೊಂಡಿದ್ದು ಸಿದ್ದರಾಮಯ್ಯ ಮಾತನಾಡಿದರು.
ಮನ್ ರೇಗಾ ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಕಾಯಿದೆ ಜಾರಿ ಮಾಡಿದೆ. ಮನರೇಗಾ ಯೋಜನೆಯನ್ನು ರದ್ದು ಮಾಡುವ ಅಗತ್ಯವೇ ಇರಲಿಲ್ಲ. ರಾಜ್ಯಗಳ ಹಿತ ಕಾಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ವಿಬಿ ಜಿ ರಾಮ್ ಜಿ ಸಂಪೂರ್ಣ ರದ್ದುಗೊಳಿಸಬೇಕು ಮನರೇಗಾ ಮರು ಜಾರಿಗೊಳಿಸಬೇಕು ಅನ್ನೋದು ನಮ್ಮ ಬೇಡಿಕೆ ಎಂದು ಮನ್ ರೇಗಾ ಬಚಾವ್ ಆಂದೋಲನದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.








