ಶಿವಮೊಗ್ಗ : ಯುವಜನರು ಕಾನೂನು ಸುವ್ಯವಸ್ಥೆ ಪಾಲನೆ ಬಗ್ಗೆ ಅರಿವು ಹೊಂದಿರಬೇಕು. ಕಾನೂನು ಮೀರಿ ನಡೆದರೆ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಸಾಗರ ಪೊಲೀಸ್ ಉಪಾಧೀಕ್ಷಕ ಡಾ. ಬೆನಕ ಪ್ರಸಾದ್ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಶನಿವಾರ ಸಂಜಯ ವಿದ್ಯಾಕೇಂದ್ರ ಮತ್ತು ಪೊಲೀಸ್ ಇಲಾಖೆಯಿಂದ ಆರಕ್ಷಕ ದಿನ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದಂತ ಅವರು, ವಿದ್ಯಾರ್ಥಿ ದೆಸೆಯಲ್ಲಿ ನಿಮಗೆ ಕಾನೂನು ಪಾಲನೆ ಮಾಡುವ ಜೊತೆಗೆ ಬೇರೆಯವರಿಗೆ ಅರಿವು ಮೂಡಿಸಲು ಹಲವು ಅವಕಾಶಗಳು ಇರುತ್ತದೆ. ಮಾದಕ ವ್ಯಸನದಿಂದ ದೂರ ಇರುವ ಜೊತೆಗೆ ನಿಮ್ಮ ಶಾಲಾಕಾಲೇಜು ಪಕ್ಕದಲ್ಲಿ ಮಾದಕ ವಸ್ತುಗಳ ಸಾಗಾಣಿಕೆ, ಮಾರಾಟ ನಡೆಯುತ್ತಿದ್ದರೆ ನಮ್ಮ ಗಮನಕ್ಕೆ ತನ್ನಿ ಎಂದು ಹೇಳಿದರು.
ವಾಹನ ಚಲಾವಣೆ ಮಾಡುವಾಗ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ನಿಮ್ಮನ್ನು ನಂಬಿ ಕುಟುಂಬ ಇರುತ್ತದೆ. ನಿಮಗೆ ವಾಹನ ಕೊಡಿಸಿರುವುದು ನಿಗಧಿತ ಸಮಯಕ್ಕೆ ಕಾಲೇಜು ತಲುಪಿ ಪಾಠ ಪ್ರವಚನಗಳಲ್ಲಿ ಭಾಗವಹಿಸಲಿ ಎಂದು ಪೋಷಕರು ವಾಹನ ಕೊಡಿಸಿರುತ್ತಾರೆ. ನೀವು ಅದನ್ನು ವ್ಜೀಲಿಂಗ್‌ನಂತೆ ಬಳಸುವುದು, ಅತಿಯಾದ ವೇಗದಿಂದ ಓಡಿಸುವುದು, ಹೆಲ್ಮೆಟ್ ಧರಿಸಿದೆ ಬೈಕ್ ಚಲಾಯಿಸುವುದು ಕಾನೂನು ವಿರುದ್ದವಾಗಿದೆ. ಇದನ್ನು ಅರಿತುಕೊಳ್ಳಬೇಕು ಎಂದರು.
ಈ ವೇಳೆ ಪ್ರಾಚಾರ್ಯ ವಿದ್ಯಾಧರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರ ಠಾಣೆ ವೃತ್ತ ನಿರೀಕ್ಷಕ ಪುಲ್ಲಯ್ಯ ರಾಥೋಡ್, ಗ್ರಾಮಾಂತರ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ ಕುಮಾರ್ ಶೆಟ್ಟಿ ಹಾಜರಿದ್ದರು.
ಶಿವಮೊಗ್ಗದಲ್ಲಿ ಕಿರುಕುಳಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ ಕೇಸ್: ಕಾನ್ಸ್ ಟೇಬಲ್ ಮೋಹನ್ ವಿರುದ್ಧ FIR ದಾಖಲು
ಮಾ.2ರಂದು ಶರಾವತಿ ಮುಳುಗಡೆ ಸಂತ್ರಸ್ತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಸ್ತೆ ತಡೆ ಪ್ರತಿಭಟನೆ: ತೀ.ನಾ ಶ್ರೀನಿವಾಸ್








