ಶಿವಮೊಗ್ಗ: ಒಂದು ವಾರದ ಹಿಂದಷ್ಟೇ ಪತಿ ನಿಧನರಾಗಿದ್ದರು. ಆ ಬಳಿಕ ಪತ್ನಿಗೆ ಫೇಸ್ ಬುಕ್ ಮೂಲಕ ಪೊಲೀಸ್ ಪೇದೆ ಮೋಹನ್ ಎಂಬಾತ ಕಿರುಕುಳ ನೀಡುತ್ತಿದ್ದರು. ಅವರ ಕಿರುಕುಳಕ್ಕೆ ಬೇಸತ್ತು ನಿನ್ನೆ ಮಹಿಳೆ ಸ್ವಾತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅವರು ವಾಟ್ಸ್ ಆಪ್ ನಲ್ಲಿ ಡೇತ್ ನೋಟ್ ನಲ್ಲಿ ಪಿಸಿ ಮೋಹನ್ ಕಿರುಕುಳ ಉಲ್ಲೇಖಿಸಿದ್ದರು. ಹೀಗಾಗಿ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಈ ಸಂಬಂಧ ಮೃತ ಸ್ವಾತಿ ತಾಯಿ ನ್ಯೂ ಟೌನ್ ಠಾಣೆಗೆ ತೆರಳಿ ದೂರು ನೀಡಿದ್ದರು. ಈ ದೂರು ಆಧರಿಸಿ ತೀರ್ಥಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಮೋಹನ್ ವಿರುದ್ಧ ಎಫ್ಐಆರ್ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ.
ನಿನ್ನೆ ಶಿವಮೊಗ್ಗದ ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ವಾತಿ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ತಾಯಿಗೆ ವಾಟ್ಸ್ ಆಪ್ ಮೂಲಕ ಡೆತ್ ನೋಟ್ ಕಳುಹಿಸಿದ್ದರು. ಅದರಲ್ಲಿ ಪೊಲೀಸ್ ಆಗಿರುವಂತ ಮೋಹನ್ ನನಗೆ ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡುತ್ತಿದ್ದರು. ಹೀಗಾಗಿ ಅವರ ಅಕೌಂಟ್ ಬ್ಲಾಕ್ ಮಾಡಿದ್ದೆ. ಇದಕ್ಕೆ ಸಿಟ್ಟಾಗಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ಅಪಪ್ರಚಾರಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ಮೋಹನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ನೇಮಕಾತಿ ಹಾಗೂ ವರ್ಗಾವಣೆಗಳಲ್ಲಿ ಭ್ರಷ್ಠಾಚಾರ ತಡೆಯುವುದು ಸರ್ಕಾರದ ಆಶಯ: ಸಿಎಂ ಸಿದ್ಧರಾಮಯ್ಯ
GOOD NEWS: KCET-2026ರ ಪರೀಕ್ಷೆಗೆ ಅರ್ಜಿ ಸಲ್ಲಿಕೆಗೆ ಮತ್ತೊಮ್ಮೆ ದಿನಾಂಕ ವಿಸ್ತರಿಸಿದ ಕೆಇಎ








