ಬೆಂಗಳೂರು: ಭಾರತ ದೇಶವು ಗಾಂಧೀಜಿಯವರ ಆದಿಯಾಗಿ ಲಕ್ಷಾಂತರ ದೇಶಭಕ್ತರ ತ್ಯಾಗ ಬಲಿದಾನಗಳಿಂದ ಸ್ವಾತಂತ್ರ್ಯವನ್ನು ಪಡೆದರೂ ಸಹ ಇಂದಿಗೂ ಭ್ರಷ್ಟ ರಾಜಕಾರಣಿಗಳಿಂದ ಅತಂತ್ರರಾಗಿಯೇ ಉಳಿದಿದ್ದೇವೆ ಎಂಬುದಾಗಿ ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯ ಪಟ್ಟಿದ್ದಾರೆ.
ಇಂಂದು ಅವರು ಪಕ್ಷವು ಏರ್ಪಡಿಸಿದ್ದ ” ಜಿಬಿಎ ಚುನಾವಣೆಯಲ್ಲಿ ವಕೀಲರುಗಳ ಪಾತ್ರ ” ಸಂವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಾಮಾಣಿಕ ರಾಜಕಾರಣದಲ್ಲಿ ವಕೀಲರುಗಳು ಹೆಚ್ಚೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಭ್ರಷ್ಟಮುಕ್ತ , ಪಾರದರ್ಶಕ , ವಂಶ ಪಾರಂಪರ್ಯ ರಾಜಕಾರಣವನ್ನು ಹೊಡೆದೋಡಿಸಲು ಸಾಧ್ಯ ಎಂದರು.
ದೇಶದಲ್ಲಿ ಪರ್ಯಾಯ ರಾಜಕಾರಣ ವ್ಯವಸ್ಥೆಯನ್ನು ತರಲೇಬೇಕೆಂಬ ಮಹಾದಾಶೆಯಿಂದ ಅರವಿಂದ್ ಕೇಜ್ರಿವಾಲ್ ರವರ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷವು ಸ್ಥಾಪನೆಯಾಗಿದೆ. ಬೆಂಗಳೂರಿನಲ್ಲಿ ಮುಂಬರುವ ಎಲ್ಲಾ ನಗರ ಪಾಲಿಕೆಗಳ ಚುನಾವಣೆಗಳಲ್ಲಿ ವಕೀಲರುಗಳು ಹೆಚ್ಚೆಚ್ಚು ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗಳಾಗಿ, ಬೆಂಬಲಿಗರಾಗಿ, ಪೋಷಕರಾಗಿ ಕೈಜೋಡಿಸಬೇಕು . ಕಳೆದ ಹಲವು ದಶಕಗಳಿಂದ ಸಂಪೂರ್ಣ ಭ್ರಷ್ಟಾಚಾರದಿಂದ ಮುಳುಗಿ ಹೋಗಿರುವ ಬೆಂಗಳೂರಿನ ಮಹಾನಗರ ಪಾಲಿಕೆಯು ನಾಗರಿಕರಿಗೆ ಬದುಕಲು ಸಾಧ್ಯವೇ ಆಗದಂತಹ ಪರಿಸ್ಥಿತಿಗೆ ತಳ್ಳಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಸಂಪೂರ್ಣ ವೈಫಲ್ಯಗೊಂಡು ಬೆಂಗಳೂರಿಗರು ಪ್ರಾಣವನ್ನೇ ಒತ್ತೆ ಇಟ್ಟು ಬದುಕುವಂತಹ ಪರಿಸ್ಥಿತಿಗೆ ತಲುಪಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ವಕೀಲರುಗಳೆಲ್ಲರೂ ಪ್ರಾಮಾಣಿಕ ಪಕ್ಷಗಳಲ್ಲಿ ಗುರುತಿಸಿಕೊಂಡು ಭ್ರಷ್ಟ ವ್ಯವಸ್ಥೆಯನ್ನು ಸರಿ ಮಾಡಬೇಕೆಂದು ” ಮನವಿ ಮಾಡಿದರು.
ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಹಾಗೂ ವಕೀಲ ಲಕ್ಷ್ಮಿಕಾಂತರಾವ್ ಮಾತನಾಡಿ ” ಬೆಂಗಳೂರಿನ ವಕೀಲ ವರ್ಗ ಸದಾಕಾಲ ಭ್ರಷ್ಟರುಗಳೊಂದಿಗೆ ಕೋರ್ಟುಗಳಲ್ಲಿ ಸೆಣಸುತ್ತಾ ಬಂದಿದ್ದಾರೆ. ಇದೀಗ ಚುನಾವಣೆ ಕಣದಲ್ಲಿ ಆಮ್ ಆದ್ಮಿ ಪಕ್ಷದೊಂದಿಗೆ ಕೈಜೋಡಿಸುವ ಮೂಲಕ ಅಧಿಕಾರದ ಚುಕ್ಕಾಣಿಯನ್ನು ಹಿಡಿದು ಜನಸೇವೆಗೆ ಮುಂದಾಗಬೇಕೆಂದು ” ಕರೆ ನೀಡಿದರು.
ಸಂವಾದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಸೀತಾರಾಮ್ ಗುಂಡಪ್ಪ, ಹಿರಿಯ ಮುಖಂಡರುಗಳು ಹಾಗು ವಕೀಲರುಗಳಾದ ನಂಜಪ್ಪ ಕಾಳೇಗೌಡ, ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಕುಮಾರ್, ಮಹದೇವಸ್ವಾಮಿ , ಬಸವರಾಜ ಮುದಿಗೌಡರ್, ರವಿಕುಮಾರ್, ಉಷಾ ಮೋಹನ್, ಜ್ಯೋತಿಶ್ ಸೇರಿದಂತೆ ಅನೇಕ ಮುಖಂಡರುಗಳು ಕಾರ್ಯಕರ್ತರಗಳು ಭಾಗವಹಿಸಿದ್ದರು.
ರೈತರ ಕೃಷಿ ಚಟುವಟಿಕೆಗಳಿಗಾಗಿ ಪ್ರತಿದಿನ 7 ಗಂಟೆ ವಿದ್ಯುತ್ ಪೂರೈಸಿ: ಸಚಿವ ಸಂತೋಷ್ ಲಾಡ್ ಖಡಕ್ ಸೂಚನೆ
ಬೆಂಗಳೂರಲ್ಲಿ ಓರ್ವ ಡ್ರಗ್ ಪೆಡ್ಲರ್ ಅರೆಸ್ಟ್, 3.8 ಲಕ್ಷ ಮೌಲ್ಯದ 35 ಗ್ರಾಂ ಮಾದಕ ವಸ್ತು ವಶಕ್ಕೆ








