ಶಿವಮೊಗ್ಗ : ಕಾನ್ಸ್ ಟೇಬಲ್ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಸಿದ್ಧಾಪುರ ಗ್ರಾಮದಲ್ಲಿ ತೀರ್ಥಹಳ್ಳಿ ಠಾಣೆಯ ಕಾನ್ಸ್ ಟೇಬಲ್ ಮೋಹನ್ ಕಿರುಕುಳಕ್ಕೆ ಬೇಸತ್ತು ಮಹಿಳೆ ಸೂಸೈಡ್ ಮಾಡಿಕೊಂಡಿದ್ದಾರೆ. ಸಿದ್ಧಾಪುರ ಗ್ರಾಮದ ತಮ್ಮ ಮನೆಯಲ್ಲಿ ನೇಣುಬಿಗಿದುಕೊಂಡು ಸ್ವಾತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತೀರ್ಥಹಳ್ಳಿ ಠಾಣೆ ಕಾನ್ಸ್ ಟೇಬಲ್ ಮೋಹನ್ ವಿರುದ್ಧ ಕಿರುಕುಳದ ಆರೋಪ ಮಾಡಲಾಗಿದೆ. 1 ವಾರದ ಹಿಂದೆ ಸ್ವಾತಿ ಪತಿ ಜಗದೀಶ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಮೃತ ಜಗದೀಶ್ ಶಿವಮೊಗ್ಗ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಫೇಸ್ ಬುಕ್ ನಲ್ಲಿ ಸ್ವಾತಿಗೆ ತೀರ್ಥಹಳ್ಳಿ ಠಾಣೆಯ ಕಾನ್ಸ್ ಸ್ಟೇಬಲ್ ಮೋಹನ್ ಮೆಸೇಜ್ ಮಾಡುತ್ತಿದ್ದರಂತೆ. ಈ ಕಾರಣಕ್ಕಾಗಿಯೇ ಕಾನ್ಸ್ ಟೇಬಲ್ ಮೋಹನ್ ಅಕೌಂಟ್ ಅನ್ನು ಸ್ವಾತಿ ಬ್ಲಾಕ್ ಮಾಡಿದ್ದರಂತೆ. ಇದರಿಂದ ಕೋಪಗೊಂಡು ಮೋಹನ್ ಬೇರೆ ಅಕೌಂಟ್ ನಿಂದ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ರಂತೆ.
ಇದಷ್ಟೇ ಅಲ್ಲದೇ ಸ್ವಾತಿ ಬಗ್ಗೆ ಅಪಪ್ರಚಾರ ಕೂಡ ಆರೋಪಿ ಮೋಹನ್ ಮಾಡುತ್ತಿದ್ದರಂತೆ. ಮೋಹನ್ ಕಾಟ ತಾಳಲಾರದೇ ನೇಣು ಬಿಗಿದುಕೊಂಡು ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ವಾತಿ ಸಾವಿಗೆ ಮುನ್ನಾ ವಾಟ್ಸ್ ಆಪ್ ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದಾರಂತೆ. ಈ ಸಂಬಂಧ ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮ ತಂದೆ ಜೀವಕ್ಕೆ ತೊಂದರೆ ಆದ್ರೇ ಸರ್ಕಾರವೇ ನೇರಹೊಣೆ: ಸ್ನೇಹಮಯಿ ಕೃಷ್ಣ ಪುತ್ರ








