Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯ ಸರ್ಕಾರದಿಂದ ‘ಮೂತ್ರಪಿಂಡ ಕಸಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

20/02/2026 2:33 PM

ರಾಜ್ಯ ಸರ್ಕಾರದಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕ್ಲೈಮ್ ರೆವಿನ್ಯೂಗೆ ಮಾನದಂಡ ನಿಗದಿ

20/02/2026 2:23 PM

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

20/02/2026 1:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರದಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕ್ಲೈಮ್ ರೆವಿನ್ಯೂಗೆ ಮಾನದಂಡ ನಿಗದಿ
KARNATAKA

ರಾಜ್ಯ ಸರ್ಕಾರದಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕ್ಲೈಮ್ ರೆವಿನ್ಯೂಗೆ ಮಾನದಂಡ ನಿಗದಿ

By kannadanewsnow0920/02/2026 2:23 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ( AB-Ark) ಯೋಜನೆಯಡಿ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಾಗುವ ಕ್ಲೈಮ್ ರೆವಿನ್ಯೂ ಉಪಯೋಗಕ್ಕೆ ಮಾನದಂಡ ನಿಗದಿ ಪಡಿಸಿ ಆದೇಶಿಸಿದೆ.

ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಆರೋಗ್ಯ ಕರ್ನಾಟಕ ಯೋಜನೆಯನ್ನು ರಾಜ್ಯಾದಾದ್ಯಂತ ಹಂತ ಹಂತವಾಗಿ ಜಾರಿಗೆ ತರಲಾಗಿದೆ. ಮೇಲೆ ಓದಲಾದ ಕ್ರಮ ಸಂಖ್ಯೆ (2) ರಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಈ ಯೋಜನೆಯನ್ನು ವಿಲೀನಗೊಳಿಸಿ ಸಂಯೋಜಿತ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಯೋಜನೆಯನ್ನು ಅನುಷ್ಠಾನಗೊಳಿಸಿ ಸಾರ್ವಜನಿಕರಿಗೆ ವಿಸ್ತ್ರತ ಸೇವೆ ನೀಡುವುದು ಮತ್ತು ಸಾಂಸ್ಥಿಕ ಚಿಕಿತ್ಸಾ ಸೌಲಭ್ಯಗಳನ್ನು ಉತ್ತಮಪಡಿಸುವುದು ಈ ಯೋಜನೆಯ ಪ್ರಮುಖ ಆಶಯಗಳಲ್ಲಿ ಒಂದಾಗಿದೆ. ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನವನ್ನು ಮೂಲ ಧನವಾಗಿಟ್ಟುಕೊಂಡು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ವತಿಯಿಂದ ಈ ಯೋಜನೆಯಲ್ಲಿ ಚಿಕಿತ್ಸೆ ಪಡೆಯುವ ಫಲಾನುಭವಿಗಳ ಪ್ರಕರಣವಾರು ಪ್ಯಾಕೇಜ್ ದರದನ್ವಯ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗೆ ಚಿಕಿತ್ಸಾ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ.

ಈ ಮೊದಲು ಚಿಕಿತ್ಸಾ ಶುಲ್ಕದ ಬಾಬ್ರನ್ನು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಖಾತೆಗೆ ಜಮೆ ಮಾಡಿ, ಆರೋಗ್ಯ ರಕ್ಷಾ ಸಮಿತಿಯ ಮಾರ್ಗಸೂಚಿಯನ್ವಯ ವೆಚ್ಚ ಮಾಡಲು ಅವಕಾಶ ನೀಡಲಾಗಿದ್ದು, ದಿನಾಂಕ:06.08.2022 ರಂದು ನಡೆದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) 31ನೇ ಕಾರ್ಯಕಾರಿ ಸಮಿತಿಯ ನಡವಳಿ ಕಂಡಿಕೆ.31.16ರಲ್ಲಿ ಕೆನರಾ ಬ್ಯಾಂಕ್‌ನ ಚಾಲ್ತಿ ಖಾತೆಗೆ ಸಂದಾಯ ಮಾಡುವಂತೆ ತೀರ್ಮಾನಿಸಲಾಗಿರುತ್ತದೆ.

ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು ಈ ಅನುದಾನವನ್ನು ಬಳಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರಗಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಈ ರೀತಿ ತಿಳಿಸಿದ “It is expected that this frame work shall enable States to make informed decisions and different aspect of fund utilization and as required develop their comprehensive guidelines and issue a Government Order for the same” ಎಂದು ಕಂಡಿಕೆ-5ರಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಕೆನರಾ ಬ್ಯಾಂಕ್‌ನ ಚಾಲ್ತಿ ಖಾತೆಗೆ ಸಂದಾಯವಾದ ಚಿಕಿತ್ಸಾ ಬಾಬನ್ನು ವೈದ್ಯರು ಮತ್ತು ಸಿಬ್ಬಂದಿಗಳಿಗೆ ನಿಗದಿಪಡಿಸಿದ ಪ್ರೋತ್ಸಾಹ ಧನವಾಗಿ ಮೊತ್ತವನ್ನು ವಿತರಣೆ ಮಾಡಲು ಹಾಗೂ ಉಳಿದ ಮೊತ್ತವನ್ನು ಚಿಕಿತ್ಸೆ ಮತ್ತು ರೋಗಿಗಳನ್ನು ಕೇಂದ್ರವನ್ನಾಗಿರಿಸಿ ಆರೋಗ್ಯ ಸಂಸ್ಥೆಗಳ ಸರ್ವೋತೋಮುಖ ಅಭಿವೃದ್ಧಿಗೆ ಅನುದಾನವನ್ನು ಅವಶ್ಯಕತೆಗೆ ಅನುಗುಣವಾಗಿ ಬಳಕೆ ಮಾಡಲು ತಿಳಿಸಲಾಗಿರುತ್ತದೆ.

ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇವರು ಮಾರ್ಪಾಡಿತ Claim revenue ಮಾರ್ಗಸೂಚಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಮರುಪಾವತಿಯಾಗುವ ಚಿಕಿತ್ಸಾ ಮೊತ್ತದ ಬಳಕೆ ಕುರಿತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ನಿಯಮಗಳು-2000ರನ್ವಯ ಬಳಕೆ ಮಾಡಲು ಅನುಮೋದನೆ ಕೋರಿ ಸರ್ಕಾರಕ್ಕೆ ಪುಸ್ತಾವನೆ ಸಲ್ಲಿಸಿದ್ದರು. ತದ ನಂತರ ಸರ್ಕಾರದ ಕಡತದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೆ ಜಮೆಯಾಗುವ Ab-Ark ಮೊತ್ತಗಳನ್ನು NHA ಮಾರ್ಗಸೂಚಿಗಳಿಗೆ ಅನುಗುಣವಾಗಿ ಉಪಯೋಗಿಸುವ ಬಗ್ಗೆ ಪುಸ್ತಾಪಿಸಿ Ab-Ark ಯೋಜನೆಯಡಿ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಾಗುವ ಕ್ರೈಮ್ ರವಿನೂ ಉಪಯೋಗಕ್ಕೆ ಮಾನದಂಡಗಳಿಗೆ ಅನುಮೋದನೆ ಮತ್ತು ಪ್ರಾಯೋಗಿಕ ಅನುಷ್ಠಾನದ ನಂತರ ಇ-ಓಚರ್ ವ್ಯವಸ್ಥೆ ಜಾರಿಗೆ ತರಲು ಅನುಮೋದನೆ ನೀಡುವಂತೆ ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರು ಕೋರಿರುತ್ತಾರೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಾಗುವ ಕ್ರೈಮ್ ರೆವಿನೂ ಉಪಯೋಗಕ್ಕೆ ಈ ಕೆಳಕಂಡಂತೆ ಮಾನದಂಡಗಳಿಗೆ ಅನುಮೋದನೆ ನೀಡಲಾಗಿದ್ದು, ಪ್ರಾಯೋಗಿಕ ಅನುಷ್ಠಾನದ ನಂತರ E-Vocher ವ್ಯವಸ್ಥೆಯನ್ನು ಜಾರಿಗೆ ತರಲು ಸಹ ಅನುಮತಿ ನೀಡಿ ಆದೇಶಿಸಿದೆ.

1.ಸರ್ಕಾರಿ ಆಸ್ಪತ್ರೆಗಳಿಗೆ ಜಮೆಯಾಗುವ Ab-Ark ಮೊತ್ತಗಳನ್ನು NHA ಮಾರ್ಗಸೂಚಿಗಳಿಗೆ ಅನುಗುಣವಾಗಿ ಕೆಳಕಂಡ ಸೂಚಕ ವರ್ಗಗಳ ಅಡಿಯಲ್ಲಿ ಉಪಯೋಗಿಸತಕ್ಕದ್ದು.

1. 2020 ಮತ್ತು ನಂತರದಲ್ಲಿ ಅನುಮೋದನೆ ಪಡೆದ ಮೆಡಿಕಲ್ ಕಾಲೇಜುಗಳನ್ನು “ಹೊಸ ಮೆಡಿಕಲ್ ಕಾಲೇಜುಗಳು (MC)” ಎಂದು ಪರಿಗಣಿಸಲಾಗುತ್ತದೆ.

2. ಶಸ್ತ್ರಚಿಕಿತ್ಸೆ ನಡೆಸುವ ಶಸ್ತ್ರಚಿಕಿತ್ಸಕರಿಗೆ ನೀಡುವ ಪ್ರೋತ್ಸಾಹಧನವನ್ನು ನಿರ್ದಿಷ್ಟ ಕಾರ್ಯಕ್ಷಮತಾ ಗುರಿಗಳೊಂದಿಗೆ ಜೋಡಿಸುವುದು, ನಿಗದಿತ ಕಾರ್ಯಕ್ಷಮತಾ ಗುರಿಗಳನ್ನು ಸಾಧಿಸಿದ ಬಳಿಕ ಮಾತ್ರ ಅವರು ಪ್ರೋತ್ಸಾಹಧನಕ್ಕೆ ಅರ್ಹರಾಗುತ್ತಾರೆ.

3. ಮಾತೃತ್ವ, ಪಿತೃತ್ವ ಹಾಗೂ ವೈದ್ಯಕೀಯ ಗರ್ಭಪಾತ (MTP) ರಜೆಯ ಅವಧಿಯಲ್ಲಿ ಪ್ರೋತ್ಸಾಹಧನ ನೀಡಲಾಗುವುದಿಲ್ಲ.

4. ನಿಗದಿತ ಮಾನದಂಡಗಳ ಅನುಸರಣೆ ಹಾಗೂ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರೋತ್ಸಾಹ ದನವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು, AB-Ark Claim ಖಾತೆಗಳನ್ನು ಮೂಲ-ಉಪ ಖಾತೆ (Parents Child Account) ವ್ಯವಸ್ಥೆಯಡಿ ಮ್ಯಾಪ್ ಮಾಡಲಾಗಿದ್ದು, `K-2 ವ್ಯವಸ್ಥೆಯ ಮೂಲಕ ನಿರ್ವಹಣೆ ನಡೆಸುವುದು. ರಾಜ್ಯವ್ಯಾಪಿ ಜಾರಿಗೆ ಮುನ್ನ ಸದರಿ ಕುಮವನ್ನು ಪ್ರಾಯೋಗಿಕ ಆಧಾರದ ಮೇಲೆ ಅನುಷ್ಠಾನಗೊಳಿಸುವುದು.

5. ಪ್ರಾಯೋಗಿಕವಾಗಿ ಯಶಸ್ವಿಯಾಗಿ ಪರೀಕ್ಷಿಸಿದ ನಂತರ ಇ-ವೋಚರ್ (E-Voucher) ವ್ಯವಸ್ಥೆಯನ್ನು ಜಾರಿಗೆ ತರುವುದು. ಇ-ವೋಚರ್ ವ್ಯವಸ್ಥೆಯ ಮುಖ್ಯ ವೈಶಿಷ್ಟ್ಯಗಳು ಹೀಗಿವೆ:

(i) ಪಾಕೇಜ್‌ನಲ್ಲಿ ಒಳಗೊಂಡಿರುವ ನಿರ್ಣಾಯಕ ಪರೀಕ್ಷೆಗಳು ಮತ್ತು ಔಷಧಿಗಳ ವೆಚ್ಚವನ್ನು ಪ್ರತ್ಯೇಕವಾಗಿ ಗುರುತಿಸಿ, ಆದರ ಅನುಗುಣ ಮೊತ್ತದ 32- ವೋಚರ್‌ಗಳನ್ನು ಫಲಾನುಭವಿಗೆ ನೀಡಲಾಗುತ್ತದೆ.

(ii) ಫಲಾನುಭವಿಗಳು, ಅಗತ್ಯವಾದ ನಿರ್ಣಾಯಕ ಪರೀಕ್ಷೆಗಳು ಮತ್ತು ಔಷಧಿ ಲಭವಿರುವಲ್ಲಿ, ತಮ್ಮ ಚಿಕಿತ್ಸೆಯನ್ನು ಪಡೆಯುತ್ತಿರುವ ಆಸತ್ರೆಯಲ್ಲಿ ಅಥವಾ ಯಾವುದೇ ನೋಂದಾಯಿತ (Empaneled) ಪಾಲುದಾರ ಪುಯೋಗಾಲಯ ಅಥವಾ ಔಷಧಿ ಅಂಗಡಿಯಲ್ಲಿ ಇ-ವೋಚರ್ ಬಳಸಬಹುದು.

ಈ ಆದೇಶವನ್ನು ಆರ್ಥಿಕ ಇಲಾಖೆ ಹಿಂಬರಹ ಸಂಖ್ಯೆ: ಆಇ 690 ವೆಚ್ಚ-5/2025, ದಿನಾಂಕ: 15.12.2024 ಹಾಗೂ ಸಚಿವ ಸಂಪುಟದ ನಿರ್ಣಯ ಸಂಖ್ಯೆ:ಸಿ:73/2026ರಲ್ಲಿನ ಅನುಮೋದನೆಯನುಸಾರ ಹೊರಡಿಸಲಾಗಿದೆ.

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದಿಂದ ‘ಮೂತ್ರಪಿಂಡ ಕಸಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

20/02/2026 2:33 PM1 Min Read

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

20/02/2026 1:50 PM2 Mins Read

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

20/02/2026 1:34 PM1 Min Read
Recent News

ರಾಜ್ಯ ಸರ್ಕಾರದಿಂದ ‘ಮೂತ್ರಪಿಂಡ ಕಸಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

20/02/2026 2:33 PM

ರಾಜ್ಯ ಸರ್ಕಾರದಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕ್ಲೈಮ್ ರೆವಿನ್ಯೂಗೆ ಮಾನದಂಡ ನಿಗದಿ

20/02/2026 2:23 PM

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

20/02/2026 1:50 PM

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

20/02/2026 1:34 PM
State News
KARNATAKA

ರಾಜ್ಯ ಸರ್ಕಾರದಿಂದ ‘ಮೂತ್ರಪಿಂಡ ಕಸಿ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

By kannadanewsnow0920/02/2026 2:33 PM KARNATAKA 1 Min Read

ಬೆಂಗಳೂರು: ರಾಜ್ಯದಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದು, ಕಿಡ್ನಿ ಕಸಿ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅದೇ ಮಂಗಳೂರಿನ ಟಾಟಾ…

ರಾಜ್ಯ ಸರ್ಕಾರದಿಂದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಕ್ಲೈಮ್ ರೆವಿನ್ಯೂಗೆ ಮಾನದಂಡ ನಿಗದಿ

20/02/2026 2:23 PM

ಉದ್ಯೋಗಿಗಳೇ ಗಮನಿಸಿ : `ಸ್ಯಾಲರಿ ಅಕೌಂಟ್’ ಇದ್ರೆ ನಿಮಗೆ ಸಿಗಲಿದೆ ಈ ಆರ್ಥಿಕ ಪ್ರಯೋಜನಗಳು !

20/02/2026 1:50 PM

ALERT : ಮೊಬೈಲ್ ‘ಬ್ಯಾಕ್ ಕವರ್’ ನಲ್ಲಿ ಈ ವಸ್ತುಗಳನ್ನು ಇಡಬೇಡಿ : ಫೋನ್ ಸ್ಪೋಟಗೊಳ್ಳಬಹುದು ಎಚ್ಚರ !

20/02/2026 1:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.