ಬೆಂಗಳೂರು : ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಕಛೇರಿಗಳು ಹಾಗೂ ಆಸ್ಪತ್ರೆಗಳಲ್ಲಿ ಆಯೋಜಿಸಲಾಗುವ ಸಭೆ-ಸಮಾರಂಭಗಳಲ್ಲಿ ನಂದಿನಿ ಉತ್ಪನ್ನಗಳ ಬಳಕೆ ಬಗ್ಗೆ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರದ ಅಧೀನದಲ್ಲಿರುವ ಸಚಿವಾಲಯಗಳು, ಇಲಾಖೆಗಳು ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗುವ ಸಭೆಗಳು, ಸಮಾರಂಭಗಳು, ತರಬೇತಿ, ಕಾರ್ಯಾಗಾರಗಳು, ಅಧಿಕೃತ ಕಾರ್ಯಕ್ರಮಗಳು ಹಾಗೂ ಇತರ ಸರ್ಕಾರಿ ಕಾರ್ಯಗಳಲ್ಲಿ ಉಪಹಾರ, ಪಾನೀಯ ಹಾಗೂ ಹಾಲು ಆಧಾರಿತ ಆಹಾರ ವಸ್ತುಗಳಾಗಿ ಕರ್ನಾಟಕ ಹಾಲು ಮಹಾಮಂಡಳಿ (KMF) ಯ “ನಂದಿನಿ” ಬ್ರಾಂಡ್ ಉತ್ಪನ್ನಗಳನ್ನು ಬಳಸುವುದು ಕಡ್ಡಾಯವಾಗಿರುತ್ತದೆ ಎಂದು ಉಲ್ಲೇಖಿತ ಪತ್ರದಲ್ಲಿ ಸೂಚಿಸಲಾಗಿರುತ್ತದೆ.
ಅದರಂತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಕಛೇರಿಗಳು ಹಾಗೂ ಆಸ್ಪತ್ರೆಗಳಲ್ಲಿ ಆಯೋಜಿಸಲಾಗುವ ಸಭೆ-ಸಮಾರಂಭಗಳಲ್ಲಿ ತರಬೇತಿ, ಕಾರ್ಯಾಗಾರಗಳಲ್ಲಿ, ಅಧಿಕೃತ ಕಾರ್ಯಕ್ರಮಗಳು ಹಾಗೂ ಇತರ ಸರ್ಕಾರಿ ಕಾರ್ಯಗಳಲ್ಲಿ ಉಪಹಾರ, ಪಾನೀಯ ಹಾಗೂ ಹಾಲು ಆಧಾರಿತ ಆಹಾರ ವಸ್ತುಗಳಾಗಿ ಕರ್ನಾಟಕ ಹಾಲು ಮಹಾಮಂಡಳಿ (KMF) ಯ “ನಂದಿನಿ” ಬ್ರಾಂಡ್‌ನ ಉತ್ಪನ್ನಗಳನ್ನು ಕಡ್ಡಾಯವಾಗಿ ಬಳಸಲು ಅಗತ್ಯಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಲಾಗಿದೆ.









