Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಏಪ್ರಿಲ್’ನಲ್ಲಿ ಕರ್ನಾಟಕ ಸೇರಿ 22 ರಾಜ್ಯಗಳಲ್ಲಿ ‘SIR’ ಆರಂಭ ; ‘ಚುನಾವಣಾ ಆಯೋಗ’ ಘೋಷಣೆ!

19/02/2026 7:31 PM

ಫೆ.22ರಂದು ಸಾಗರದಲ್ಲಿ ‘ಹವ್ಯಕ ಶಿಕ್ಷಕ’ರ ಜಿಲ್ಲಾ ಮಟ್ಟದ ಸಮಾವೇಶ: ಮಹಾಸಭಾದ ನಿರ್ದೇಶಕ ಹು.ಭಾ.ಅಶೋಕ್

19/02/2026 7:24 PM

BREAKING: ‘ನಂದಿನಿ ಉತ್ಪನ್ನ’ಗಳ ಬಗ್ಗೆ ಅಪಪ್ರಚಾರ: ‘FIR’ ದಾಖಲು

19/02/2026 7:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಫೆ.22ರಂದು ಸಾಗರದಲ್ಲಿ ‘ಹವ್ಯಕ ಶಿಕ್ಷಕ’ರ ಜಿಲ್ಲಾ ಮಟ್ಟದ ಸಮಾವೇಶ: ಮಹಾಸಭಾದ ನಿರ್ದೇಶಕ ಹು.ಭಾ.ಅಶೋಕ್
KARNATAKA

ಫೆ.22ರಂದು ಸಾಗರದಲ್ಲಿ ‘ಹವ್ಯಕ ಶಿಕ್ಷಕ’ರ ಜಿಲ್ಲಾ ಮಟ್ಟದ ಸಮಾವೇಶ: ಮಹಾಸಭಾದ ನಿರ್ದೇಶಕ ಹು.ಭಾ.ಅಶೋಕ್

By kannadanewsnow0919/02/2026 7:24 PM

ಶಿವಮೊಗ್ಗ: ಫೆಬ್ರವರಿ.22ರಂದು ಅಖಿಲ ಹವ್ಯಕ ಮಹಾಸಭಾ ವತಿಯಿಂದ ಬೆಳಿಗ್ಗೆ 6.30 ರಿಂದ ರಾತ್ರಿ 9.30ರವರೆಗೆ ರಾಘವೇಶ್ವರ ಸಭಾಭವನದಲ್ಲಿ ಶಿವಮೊಗ್ಗ ಜಿಲ್ಲಾ ಹವ್ಯಕ ಶಿಕ್ಷಕ ಸಮಾವೇಶ ಜ್ಞಾನಮ್ ನಡೆಯಲಿದೆ ಎಂಬುದಾಗಿ ಮಹಾಸಭಾದ ನಿರ್ದೇಶಕರ ಹು.ಭಾ ಅಶೋಕ್ ಮಾಹಿತಿ ನೀಡಿದ್ದಾರೆ.

ಇಂದು ಶಿವಮೊಗ್ಗದ ಸಾಗರ ನಗರದಲ್ಲಿರುವಂತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರ, ಸಮಾವೇಶದಲ್ಲಿ ಅಂಗನವಾಡಿಯಿoದ ವಿಶ್ವವಿದ್ಯಾಲಯ ಹಂತದವರೆಗೆ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.

ಕಳೆದ 81 ವರ್ಷಗಳಿಂದ ಹವ್ಯಕ ಮಹಾಸಭಾ ಕೆಲಸ ಮಾಡಿಕೊಂಡು ಬರುತ್ತಿದೆ. ಪ್ರಸ್ತುತ ಡಾ. ಗಿರಿಧರ ಕಜೆ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಿದೆ. ಮಹಿಳಾ ಸಮಾವೇಶ, ವಕೀಲರು, ಇಂಜಿನಿಯರ್, ವೈದ್ಯರು, ಶಿಕ್ಷಕರ ಸಮಾವೇಶ ಅಯೋಜಿಸುವ ಮೂಲಕ ಸಂಘಟನೆಯನ್ನು ಇನ್ನಷ್ಟು ಸಮಾಜದ ಕಡೆ ತೆಗೆದುಕೊಂಡು ಹೋಗುವ ಪ್ರಯತ್ನ ನಡೆಸಲಾಗುತ್ತಿದೆ. ಹವ್ಯಕ ಸಮಾಜದವರು ಶಿಕ್ಷಣಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಜ್ಞಾನಮ್ ಘೋಷವಾಕ್ಯದದ ಮೂಲಕ ಶಿಕ್ಷಕರಿಂದ ವಿದ್ಯಾರ್ಥಿಗಳಿಗಾಗಿ ಭವಿಷ್ಯಕ್ಕೋಸರ ವಿಷಯಾಧಾರಿತ ಸಮಾವೇಶ ನಡೆಯುತ್ತಿದೆ ಎಂದರು.

ಸಮಾವೇಶದ ಸಂಚಾಲಕ ಎಂ.ಎo.ತಿಮ್ಮಪ್ಪ ಮಂಕಾಳೆ ಅವರು ಮಾತನಾಡಿ, ಫೆಬ್ರವರಿ.22ರಂದು ಬೆಳಿಗ್ಗೆ 7 ರಿಂದ 9ರವರೆಗೆ ಗಣಪತಿ ಹವನ, ಗಣಪತಿ ಅಥರ್ವಶೀರ್ಷ ಪಾರಾಯಣ ನಡೆಯಲಿದ್ದು, ಬೆಳಿಗ್ಗೆ 9.45ಕ್ಕೆ ಸಮಾವೇಶವನ್ನು ಸಾಹಿತಿ ಭುವನೇಶ್ವರಿ ಹೆಗಡೆ ಉದ್ಘಾಟಿಸಲಿದ್ದಾರೆ. ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸಲಿದ್ದು, ಹೊಸದಿಗಂತ ಪತ್ರಿಕೆ ಪ್ರಧಾನ ಸಂಪಾದಕ ವಿನಾಯಕ ಭಟ್ ಮೂರೂರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಬೆಳಿಗ್ಗೆ 11 ರಿಂದ ಪ್ರಚಲಿತ ಶಿಕ್ಷಣ ವ್ಯವಸ್ಥೆ ಮತ್ತು ಹವ್ಯಕ ಶಿಕ್ಷಕರು ವಿಷಯ ಕುರಿತ ಶಿಕ್ಷಣ ಮಂಥನದ ಅಧ್ಯಕ್ಷತೆಯನ್ನು ಕೆ.ಜಿ.ಮಂಜುನಾಥ್ ವಹಿಸಲಿದ್ದು, ದೇವೇಂದ್ರ ಬೆಳೆಯೂರು ಸಮನ್ವಯ ಮಾಡಲಿದ್ದಾರೆ. ಡಾ. ಸುಮಿತ್ರಾ ಭಟ್, ಸೃಜನ್ ಗಣೇಶ್ ಹೆಗಡೆ ವಿಚಾರಗೋಷ್ಟಿಯಲ್ಲಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.

ಬೆಳಿಗ್ಗೆ 11.55ರಿಂದ ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ವಿಷಯ ಕುರಿತು ಅಕ್ಷಯ ಗೋಖಲೆ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 12.45ಕ್ಕೆ ಪಟ್ಟಾಭಿರಾಮ ಸುಳ್ಯ ಅವರಿಂದ ಮಿಮಿತ್ರಿ ಕಾರ್ಯಕ್ರಮ ಇರುತ್ತದೆ. ಮಧ್ಯಾಹ್ನ 2.15ರಿಂದ ಶಿಕ್ಷಣ ಕ್ಷೇತ್ರದಲ್ಲಿನ ಅವಕಾಶಗಳು ವಿಷಯ ಕುರಿತ ಗೋಷ್ಟಿ ಅದ್ಯಕ್ಷತೆಯನ್ನು ಅ.ಪು.ನಾರಾಯಣಪ್ಪ ವಹಿಸಲಿದ್ದು, ವಿದುಷಿ ವಸುಧಾ ಶರ್ಮ ಸಮನ್ವಯ ಮಾಡಲಿದ್ದಾರೆ. ಡಾ. ಲಕ್ಷ್ಮೀಶ್ ಎ.ಎಸ್ ಮತ್ತು ಮಹಾಬಲೇಶ್ವರ ಹೆಗಡೆ ವಿಷಯ ಮಂಡನೆ ಮಾಡಲಿದ್ದಾರೆ ಎಂದರು.

ಮಧ್ಯಾಹ್ನ 3.10ರಿಂದ ವಿಶೇಷ ಪುರಸ್ಕಾರ ಪಡೆದ ಶಿಕ್ಷಕರಿಗೆ ಸನ್ಮಾನ, ನಂತರ ಸಾಂಸ್ಕೃತಿಕ ಸೌರಭ, ಸಂಜೆ 4.45ರಿಂದ ಸಾಧಕ ಶಿಕ್ಷಕರಿಗೆ ಸನ್ಮಾನ ಮತ್ತು ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಡಾ. ಗಿರಿಧರ ಕಜೆ ಅಧ್ಯಕ್ಷತೆ ವಹಿಸಲಿದ್ದರೆ. ಡಾ. ಜಿ.ಎಲ್.ಹೆಗಡೆ, ವಿದ್ಯಾಧರ ಎಚ್.ಎಸ್. ಉಪಸ್ಥಿತರಿರುವರು. ಸಂಜೆ 6.30ರಿಂದ ಗಿಲಿಗಿಲಿ ಮ್ಯಾಜಿಕ್ ಜ್ಯೂನಿಯರ್ ಶಂಕರ್ ನಡೆಸಿ ಕೊಡಲಿದ್ದಾರೆ ನಂತರ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ಇರುತ್ತದೆ ಎಂದು ಹೇಳಿದರು.

ಈ ಸುದ್ದಿಗೋಷ್ಠಿಯಲ್ಲಿ ಡಾ.ಶ್ರೀಪಾದ ಹೆಗಡೆ, ರತ್ನಾಕರ ಎಸ್.ಟಿ., ರಮೇಶ್ ಎಚ್.ಎಸ್., ರಾಜಾರಾಂ ಕೆ.ಎಸ್., ವಿನಾಯಕ ಹೆಗಡೆ, ರಘುನಂದನ್ ಪಟೇಲ್, ವಿನಾಯಕ ಹೆಗಡೆ ಹಾಜರಿದ್ದರು.

BREAKING : ಏಪ್ರಿಲ್’ನಲ್ಲಿ ದೇಶಾದ್ಯಂತ ‘SIR’ ಜಾರಿ ; ‘ಚುನಾವಣಾ ಆಯೋಗ’ ಘೋಷಣೆ!

BREAKING: ‘ನಂದಿನಿ ಉತ್ಪನ್ನ’ಗಳ ಬಗ್ಗೆ ಅಪಪ್ರಚಾರ: ‘FIR’ ದಾಖಲು

BIG NEWS: ರಾಜ್ಯದಲ್ಲಿ ಮತ್ತೊಂದು ‘ಬ್ಯಾಂಕ್ ವಂಚನೆ ಜಾಲ’ ಬೆಳಕಿಗೆ: ಗ್ರಾಹಕರ ‘ಅಸಲಿ ಚಿನ್ನ’ವೇ ಮಾಯ!

BREAKING : ಮೇ 5ರಿಂದ ಸುಪ್ರೀಂ ಕೋರ್ಟ್’ನಲ್ಲಿ ‘CAA’ ಪ್ರಶ್ನಿಸಿ ಸಲ್ಲಿಸಲಾದ 243 ಅರ್ಜಿಗಳ ವಿಚಾರಣೆ ಆರಂಭ!

Share. Facebook Twitter LinkedIn WhatsApp Email

Related Posts

BREAKING: ‘ನಂದಿನಿ ಉತ್ಪನ್ನ’ಗಳ ಬಗ್ಗೆ ಅಪಪ್ರಚಾರ: ‘FIR’ ದಾಖಲು

19/02/2026 7:21 PM1 Min Read

ಈ ಬಾರಿಯ ‘ಬಜೆಟ್’ನಲ್ಲಿ ಇವುಗಳನ್ನು ಈಡೇರಿಸುವ ಘೋಷಣೆ ಮಾಡುವಂತೆ ಸಿಎಂ, ಡಿಸಿಎಂಗೆ MLC ದಿನೇಶ್ ಗೂಳಿಗೌಡ ಮನವಿ

19/02/2026 6:28 PM2 Mins Read

BIG NEWS: ರಾಜ್ಯದಲ್ಲಿ ಮತ್ತೊಂದು ‘ಬ್ಯಾಂಕ್ ವಂಚನೆ ಜಾಲ’ ಬೆಳಕಿಗೆ: ಗ್ರಾಹಕರ ‘ಅಸಲಿ ಚಿನ್ನ’ವೇ ಮಾಯ!

19/02/2026 6:12 PM1 Min Read
Recent News

BREAKING : ಏಪ್ರಿಲ್’ನಲ್ಲಿ ಕರ್ನಾಟಕ ಸೇರಿ 22 ರಾಜ್ಯಗಳಲ್ಲಿ ‘SIR’ ಆರಂಭ ; ‘ಚುನಾವಣಾ ಆಯೋಗ’ ಘೋಷಣೆ!

19/02/2026 7:31 PM

ಫೆ.22ರಂದು ಸಾಗರದಲ್ಲಿ ‘ಹವ್ಯಕ ಶಿಕ್ಷಕ’ರ ಜಿಲ್ಲಾ ಮಟ್ಟದ ಸಮಾವೇಶ: ಮಹಾಸಭಾದ ನಿರ್ದೇಶಕ ಹು.ಭಾ.ಅಶೋಕ್

19/02/2026 7:24 PM

BREAKING: ‘ನಂದಿನಿ ಉತ್ಪನ್ನ’ಗಳ ಬಗ್ಗೆ ಅಪಪ್ರಚಾರ: ‘FIR’ ದಾಖಲು

19/02/2026 7:21 PM

BREAKING : ಏಪ್ರಿಲ್’ನಲ್ಲಿ ದೇಶಾದ್ಯಂತ ‘SIR’ ಜಾರಿ ; ‘ಚುನಾವಣಾ ಆಯೋಗ’ ಘೋಷಣೆ!

19/02/2026 7:12 PM
State News
KARNATAKA

ಫೆ.22ರಂದು ಸಾಗರದಲ್ಲಿ ‘ಹವ್ಯಕ ಶಿಕ್ಷಕ’ರ ಜಿಲ್ಲಾ ಮಟ್ಟದ ಸಮಾವೇಶ: ಮಹಾಸಭಾದ ನಿರ್ದೇಶಕ ಹು.ಭಾ.ಅಶೋಕ್

By kannadanewsnow0919/02/2026 7:24 PM KARNATAKA 2 Mins Read

ಶಿವಮೊಗ್ಗ: ಫೆಬ್ರವರಿ.22ರಂದು ಅಖಿಲ ಹವ್ಯಕ ಮಹಾಸಭಾ ವತಿಯಿಂದ ಬೆಳಿಗ್ಗೆ 6.30 ರಿಂದ ರಾತ್ರಿ 9.30ರವರೆಗೆ ರಾಘವೇಶ್ವರ ಸಭಾಭವನದಲ್ಲಿ ಶಿವಮೊಗ್ಗ ಜಿಲ್ಲಾ…

BREAKING: ‘ನಂದಿನಿ ಉತ್ಪನ್ನ’ಗಳ ಬಗ್ಗೆ ಅಪಪ್ರಚಾರ: ‘FIR’ ದಾಖಲು

19/02/2026 7:21 PM

ಈ ಬಾರಿಯ ‘ಬಜೆಟ್’ನಲ್ಲಿ ಇವುಗಳನ್ನು ಈಡೇರಿಸುವ ಘೋಷಣೆ ಮಾಡುವಂತೆ ಸಿಎಂ, ಡಿಸಿಎಂಗೆ MLC ದಿನೇಶ್ ಗೂಳಿಗೌಡ ಮನವಿ

19/02/2026 6:28 PM

BIG NEWS: ರಾಜ್ಯದಲ್ಲಿ ಮತ್ತೊಂದು ‘ಬ್ಯಾಂಕ್ ವಂಚನೆ ಜಾಲ’ ಬೆಳಕಿಗೆ: ಗ್ರಾಹಕರ ‘ಅಸಲಿ ಚಿನ್ನ’ವೇ ಮಾಯ!

19/02/2026 6:12 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.