ಹುಬ್ಬಳ್ಳಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ. ಇದೀಗ ಕೆಲಸ ಬಿಟ್ಟು ಮುಷ್ಕರಕ್ಕೆ ಹೇಳಿದವರ ಸಂಬಳಕ್ಕೆ ಕತ್ತರಿ ಹಾಕಲಾಗಿದ್ದು, ನೋ ವರ್ಕ್ ನೋವೇಸ್ ನೋಟಿಸ್ ಜಾರಿ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ಎಂಡಿ ಪ್ರಿಯಾಂಕ ಮಾಹಿತಿ ನೀಡಿದ್ದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಂಡಿ ಆಗಿರುವ ಪ್ರಿಯಾಂಕ ವೈದ್ಯಕೀಯ ರಜೆ ಹೊರತುಪಡಿಸಿ ಬೇರೆಯವರಿಗೆ ರಜೆ ನೀಡಿಲ್ಲ ಎಂದು ತಿಳಿಸಿದ್ದು, ನೌಕರರು ಮುಷ್ಕರ ಎರಡು ದಿನಗಳ ಹಿಂದೆ ನೌಕರರಿಗೆ ನೋ ವರ್ಕ್ ನೋ ವೇಜಸ್ ಆದೇಶ ಮಾಡಿದ್ದೇವೆ.
ಎಲ್ಲದಕ್ಕೂ ಮುಷ್ಕರ ಒಂದೇ ದಾರಿ ಇಲ್ಲ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದೇವೆ. ಇವತ್ತು ಯಾವುದೇ ರೀತಿ ತೊಂದರೆ ಇಲ್ಲ ಒಂದು ಗಂಟೆ ವರೆಗೂ ಯಾವ ಬಸ್ ಗಳು ನಿರ್ಗಮನ ಆಗಬೇಕೊ ಅವೆಲ್ಲ ತೆರಳಿವೆ. ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದರು








