Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಊಟದ ಸಮಯದಲ್ಲಿ ನೀರು ಕುಡಿಯುವುದು ಒಳ್ಳೆಯದೇ ಅಥವಾ ಕೆಟ್ಟದ್ದೇ? ಇಲ್ಲಿದೆ ನಿಮ್ಮ ಅನುಮಾನಕ್ಕೆ ಉತ್ತರ…!

19/02/2026 6:51 AM

BIG NEWS : 26 ತಿಂಗಳ ಹಿಂಬಾಕಿಗೆ ಸರ್ಕಾರದ ಭರವಸೆಗೂ ಮಣಿಯದ ಸಾರಿಗೆ ನೌಕರರು : ಇಂದು ಬೆಂಗಳೂರು ಚಲೋ, ಬಸ್ ಸೇವೆಯಲ್ಲಿ ವ್ಯತ್ಯಯ !

19/02/2026 6:45 AM

ಅಫ್ಘಾನಿಸ್ತಾನದಲ್ಲಿ ಅಮಾನವೀಯ ಕಾನೂನು: ರಕ್ತ ಬರದಿದ್ದರೆ ಹೊಡೆಯುವುದು ಹಿಂಸೆಯಲ್ಲವಂತೆ!

19/02/2026 6:44 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : 26 ತಿಂಗಳ ಹಿಂಬಾಕಿಗೆ ಸರ್ಕಾರದ ಭರವಸೆಗೂ ಮಣಿಯದ ಸಾರಿಗೆ ನೌಕರರು : ಇಂದು ಬೆಂಗಳೂರು ಚಲೋ, ಬಸ್ ಸೇವೆಯಲ್ಲಿ ವ್ಯತ್ಯಯ !
KARNATAKA

BIG NEWS : 26 ತಿಂಗಳ ಹಿಂಬಾಕಿಗೆ ಸರ್ಕಾರದ ಭರವಸೆಗೂ ಮಣಿಯದ ಸಾರಿಗೆ ನೌಕರರು : ಇಂದು ಬೆಂಗಳೂರು ಚಲೋ, ಬಸ್ ಸೇವೆಯಲ್ಲಿ ವ್ಯತ್ಯಯ !

By kannadanewsnow5719/02/2026 6:45 AM

ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರಿಗೆ ನೌಕರರ ಹಿಂಬಾಕಿ ವೇತನ, ವೇತನ ಪರಿಷ್ಕರಣೆಯನ್ನು ಮಾಡಿ ಅಧಿಕೃತ ಆದೇಶ ಮಾಡಿದೆ. ಇದರ ನಡುವೆಯೂ ನಾಳೆ ಬೆಂಗಳೂರು ಚಲೋ ಫಿಕ್ಸ್ ಆಗಿದೆ. ಇಂದು ನಿಗದಿಯಂತೆ ಬೆಂಗಳೂರು ಚಲೋ ನಡೆಯಲಿದೆ ಎಂಬುದಾಗಿ ಸಾರಿಗೆ ನೌಕರರ ಮುಖಂಡ ಜಗದೀಶ್ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಸಾರಿಗೆ ನೌಕರರ ಮುಖಂಡ ಜಗದೀಶ್ ಮಾಹಿತಿ ನೀಡಿದ್ದು, ನಮಗೆ ಇನ್ನೂ ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಬಂದಿಲ್ಲ. ಇಂದು 5ರಿಂದ 10 ಸಾವಿರ ನೌಕರರು ಫ್ರೀಡಂ ಪಾರ್ಕ್ ನಲ್ಲಿ ಸೇರಲಿದ್ದಾರೆ. ರಾಜ್ಯ ಸರ್ಕಾರವು 38 ತಿಂಗಳ ಹಿಂಬಾಕಿ ಕೊಡಲೇಬೇಕು ಎಂದು ಆಗ್ರಹಿಸಿದರು.

2024ರಿಂದ ವೇತನ ಪರಿಷ್ಕರಣೆ ಆಗಬೇಕೆನ್ನುವುದು ನಮ್ಮ ಕನಸಾಗಿತ್ತು. ಕಾರ್ಮಿಕ ಮುಖಂಡ ದಿವಂಗತ ಅನಂತ ಸುಬ್ಬರಾವ್ ಅವರ ಕನಸು ಕೂಡ ಇದೇ ಆಗಿತ್ತು. ಸರ್ಕಾರದ ನಿರ್ಧಾರದಿಂದ ಸಿಬ್ಬಂದಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ. ಮುಷ್ಕರದ ಬಗ್ಗೆ ಇಂದು ಸಂಜೆ 4 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.

ರಾಜ್ಯ ಸರ್ಕಾರದಿಂದ ಸಾರಿಗೆ ನೌಕರರ 26 ತಿಂಗಳ ಹಿಂಬಾಕಿ ಬಿಡುಗಡೆ, ವೇತನ ಪರಿಷ್ಕರಣೆ ಮಾಡಿ ಆದೇಶ

ಬೆಂಗಳೂರು: ರಾಜ್ಯ ಸರ್ಕಾರವು ಸಾರಿಗೆ ನೌಕರರ ಒತ್ತಾಯಕ್ಕೆ ಮಣಿದಿದೆ. ರಾಜ್ಯ ಸರ್ಕಾರ 26 ತಿಂಗಳ ಹಿಂಬಾಗಿ ನೀಡಲು ನಿರ್ಧರಿಸಿದೆ. ಅಲ್ಲದೇ ಮಾರ್ಚ್.1, 2025ರಿಂದ ವೇತನ ಹೆಚ್ಚಿಸಲು ನಿರ್ಧರಾವನ್ನು ಕೈಗೊಂಡು ಅಧಿಕೃತ ಆದೇಶ ಹೊರಡಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದ್ದು, ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950ರ ಸೆಕ್ಷನ್ 34(1)ರನ್ವಯ ದಿನಾಂಕ:01.03.2023ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ಕಿಂಕೋ ಅಧಿಕಾರಿಗಳ/ ನೌಕರರು ದಿನಾಂಕ:31.12.2019ರಂದು ಪಡೆಯುತ್ತಿದ್ದ ಮೂಲ ವೇತನವನ್ನು ಶೇಕಡ 15 ರಷ್ಟು ಹೆಚ್ಚಿಸಿ ದಿನಾಂಕ:01.03.2023ರಿಂದ ಜಾರಿಗೆ ಬರುವಂತೆ ವೇತನ ಪರಿಷ್ಕರಿಸಿ ಆದೇಶಿಸಲಾಗಿತ್ತು ಎಂದಿದೆ.

ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಇವರು ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ಅಧಿಕಾರಿಗಳು ಮತ್ತು ನೌಕರರ ಮೂಲವೇತನವನ್ನು ಪರಿಷ್ಕರಿಸಲು ಹಾಗೂ ಉನ್ನತ ವೇತನ ಶ್ರೇಣಿ, ಮಧ್ಯವರ್ತಿ (ಸೆಲೆಕ್ಷನ್ ಗ್ರೇಡ್) ವೇತನ ಶ್ರೇಣಿಗಳು ಸೇರಿದಂತೆ ನಿಗಮದಲ್ಲಿ ಪ್ರಸ್ತುತ ಇರುವ ಎಲ್ಲಾ ವೇತನ ಶ್ರೇಣಿಗಳನ್ನು ಅದಕ್ಕನುಗುಣವಾಗಿ ಪರಿಷ್ಕರಿಸಲು ಹಾಗೂ ಪರಿಷ್ಕೃತ ವೇತನ ಶ್ರೇಣಿಯಲ್ಲಿ ತತ್ಸಂಬಂಧ ಜಾರಿಯಲ್ಲಿರುವ ವಿಧಾನದನ್ವಯ ಮೂಲವೇತನವನ್ನು ಪರಿಷ್ಕರಿಸಿ ನಿಗದಿಪಡಿಸಿ, ದಿನಾಂಕ:01.04.2025 ರಿಂದ ಜಾರಿಗೊಳಿಸಲು ಹಾಗೂ 38 ತಿಂಗಳ ಹಿಂಬಾಕಿ ವೇತನ ಪಾವತಿ ಬೇಡಿಕೆ ಸಂಬಂಧ ಶ್ರೀ ಶ್ರೀನಿವಾಸಮೂರ್ತಿ, ನಿವೃತ್ತ ಭಾ.ಆ.ಸೇ ರವರ ಏಕ ಸದಸ್ಯ ಸಮಿತಿಯ ಶಿಫಾರಸ್ಸಿನಂತೆ ದಿನಾಂಕ:01.01.2022 ರಿಂದ 28.02.2023 ಅವಧಿಗೆ 14 ತಿಂಗಳವರೆಗಿನ ಹಿಂಬಾಕಿ ವೇತನ ನೀಡಲು ಒಪ್ಪಿಗೆ ನೀಡಿ, ತತ್ಸಂಬಂಧ ತಗಲುವ ವೆಚ್ಚ ರೂ.718.93 ಕೋಟಿಗಳ ವಿಶೇಷ ಅನುದಾನವನ್ನು ಬಿಡುಗಡೆ ಮಾಡಲು ಮತ್ತು 38 ತಿಂಗಳ ಹಿಂಬಾಕಿ ಪೈಕಿ ಉಳಿದ 24 ತಿಂಗಳಲ್ಲಿ ದಿನಾಂಕ:01.01.2020 ರಿಂದ 31.12.2020 ರವರೆಗೆ 12 ಮಾಹೆಯ ವೇತನ ಹಿಂಬಾಕಿ ಮೊತ್ತ ರೂ.520.54 ಕೋಟಿಗಳ ವಿಶೇಷ ಅನುದಾವನ್ನು ಬಿಡುಗಡೆ ಮಾಡಲು ಕೋರಿರುತ್ತಾರೆ.

ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರಸ್ತೆ, ಸಾರಿಗೆ ನಿಗಮ ಇವರ ಪ್ರಸ್ತಾವನೆಯನ್ನು, 2020ರಿಂದ 2022ರವರೆಗಿನ ಕೋವಿಡ್-19ರ ಹಿನ್ನೆಲೆ ಹಾಗೂ ಸಾರಿಗೆ ನಿಗಮಗಳ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಹಾಗೂ ಹೊಣೆಗಾರಿಕೆಗಳನ್ನು ಪರಿಗಣಿಸಿ, ವೇತನ ಪರಿಷ್ಕರಣೆ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಬಂಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ಸನ್ಮಾನ್ಯ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ದಿನಾಂಕ:15.04.2025, 04.07.2025, 04.08.2025 ಮತ್ತು 26.11.2025 ರಂದು ಸಭೆ ನಡೆಸಿ ಬೇಡಿಕೆಗಳ ಬಗ್ಗೆ ಚರ್ಚಿಸಿರುತ್ತಾರೆ. ಹಾಗೂ ಮಾನ್ಯ ಸಾರಿಗೆ ಮತ್ತು ಮುಜರಾಯಿ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ:13.12.2025 ರಂದು ಕಾರ್ಮಿಕ ಸಂಘಟನೆಯವರೊಂದಿಗೆ ಸಭೆ ನಡೆಸಿ, ಅವರ ಅಹವಾಲುಗಳನ್ನು ಪಡೆದು ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದ್ದಾರೆ.

ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ:01.01.2021ರಿಂದ 28.02.2023ರವರೆಗೆ ಒಟ್ಟು 26 ತಿಂಗಳ ಹಿಂಬಾಕಿ ಮೊತ್ತ ರೂ.1271.92 ಕೋಟಿಗಳನ್ನು ಪಾವತಿಸಲು ಅನುಮೋದನೆ ನೀಡಿ ಆದೇಶಿಸಿದೆ.

ಮುಂದುವರೆದು, ರಾಜ್ಯದ ನಾಲ್ಕು ರಸ್ತೆ ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳ (ಪೂರ್ವ ಕಿಂಕೋ ನೌಕರರು ಸೇರಿದಂತೆ) ಮೂಲವೇತನವನ್ನು ದಿನಾಂಕ:01.04.2025 ರಿಂದ ಜಾರಿಗೆ ಬರುವಂತೆ ಶೇಕಡಾವಾರು ಎಷ್ಟು ಪುಮಾಣದಲ್ಲಿ ಪರಿಷ್ಕರಿಸುವ ಕುರಿತು ಕಾರ್ಮಿಕ ಸಂಘಟನೆಗಳ ಜೊತೆ ಚರ್ಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಹ ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ:ಆಇ 135 ವೆಚ್ಚ-11/2023, ದಿನಾಂಕ:18.02.2026 ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಿದೆ.

ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು.

 

Bangalore Chalo BIG NEWS: Transport employees who have not given in to the government's promise despite 26 months of backlog: Today disruption in bus service!
Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದಲ್ಲಿ ಮಹಾಯೋಜನೆ ವ್ಯಾಪ್ತಿಯಲ್ಲಿನ ಜಮೀನುಗಳಿಗೆ `ವಿನ್ಯಾಸ ಅನುಮೋದನೆ’ : ಸರ್ಕಾರದಿಂದ ಮಹತ್ವದ ಆದೇಶ

19/02/2026 6:39 AM2 Mins Read

ನಾವು ಸಾಗರದಂತೆ ರಾಜಕೀಯ ಬೆರೆಸಿ ಆನಂದಪುರ ಮಾರಿ ಜಾತ್ರೆ ಮಾಡಲ್ಲ: ಬಿಜೆಪಿ ಮುಖಂಡ ರತ್ನಾಕರ ಹೊನಗೋಡು

19/02/2026 6:37 AM3 Mins Read

ರಾಜ್ಯದಲ್ಲಿ ಬಹುದೊಡ್ಡ ಗೋಲ್ಮಾಲ್: ಈ ಸೊಸೈಟಿಯಲ್ಲಿ ಒಂದೇ ದಿನ 5,000ಕ್ಕೂ ಹೆಚ್ಚು ಷೇರು ಅರ್ಜಿ ಅಂಗೀಕಾರ

19/02/2026 6:35 AM2 Mins Read
Recent News

ಊಟದ ಸಮಯದಲ್ಲಿ ನೀರು ಕುಡಿಯುವುದು ಒಳ್ಳೆಯದೇ ಅಥವಾ ಕೆಟ್ಟದ್ದೇ? ಇಲ್ಲಿದೆ ನಿಮ್ಮ ಅನುಮಾನಕ್ಕೆ ಉತ್ತರ…!

19/02/2026 6:51 AM

BIG NEWS : 26 ತಿಂಗಳ ಹಿಂಬಾಕಿಗೆ ಸರ್ಕಾರದ ಭರವಸೆಗೂ ಮಣಿಯದ ಸಾರಿಗೆ ನೌಕರರು : ಇಂದು ಬೆಂಗಳೂರು ಚಲೋ, ಬಸ್ ಸೇವೆಯಲ್ಲಿ ವ್ಯತ್ಯಯ !

19/02/2026 6:45 AM

ಅಫ್ಘಾನಿಸ್ತಾನದಲ್ಲಿ ಅಮಾನವೀಯ ಕಾನೂನು: ರಕ್ತ ಬರದಿದ್ದರೆ ಹೊಡೆಯುವುದು ಹಿಂಸೆಯಲ್ಲವಂತೆ!

19/02/2026 6:44 AM

BIG NEWS : ರಾಜ್ಯದಲ್ಲಿ ಮಹಾಯೋಜನೆ ವ್ಯಾಪ್ತಿಯಲ್ಲಿನ ಜಮೀನುಗಳಿಗೆ `ವಿನ್ಯಾಸ ಅನುಮೋದನೆ’ : ಸರ್ಕಾರದಿಂದ ಮಹತ್ವದ ಆದೇಶ

19/02/2026 6:39 AM
State News
KARNATAKA

BIG NEWS : 26 ತಿಂಗಳ ಹಿಂಬಾಕಿಗೆ ಸರ್ಕಾರದ ಭರವಸೆಗೂ ಮಣಿಯದ ಸಾರಿಗೆ ನೌಕರರು : ಇಂದು ಬೆಂಗಳೂರು ಚಲೋ, ಬಸ್ ಸೇವೆಯಲ್ಲಿ ವ್ಯತ್ಯಯ !

By kannadanewsnow5719/02/2026 6:45 AM KARNATAKA 3 Mins Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರಿಗೆ ನೌಕರರ ಹಿಂಬಾಕಿ ವೇತನ, ವೇತನ ಪರಿಷ್ಕರಣೆಯನ್ನು ಮಾಡಿ ಅಧಿಕೃತ ಆದೇಶ ಮಾಡಿದೆ. ಇದರ ನಡುವೆಯೂ…

BIG NEWS : ರಾಜ್ಯದಲ್ಲಿ ಮಹಾಯೋಜನೆ ವ್ಯಾಪ್ತಿಯಲ್ಲಿನ ಜಮೀನುಗಳಿಗೆ `ವಿನ್ಯಾಸ ಅನುಮೋದನೆ’ : ಸರ್ಕಾರದಿಂದ ಮಹತ್ವದ ಆದೇಶ

19/02/2026 6:39 AM

ನಾವು ಸಾಗರದಂತೆ ರಾಜಕೀಯ ಬೆರೆಸಿ ಆನಂದಪುರ ಮಾರಿ ಜಾತ್ರೆ ಮಾಡಲ್ಲ: ಬಿಜೆಪಿ ಮುಖಂಡ ರತ್ನಾಕರ ಹೊನಗೋಡು

19/02/2026 6:37 AM

ರಾಜ್ಯದಲ್ಲಿ ಬಹುದೊಡ್ಡ ಗೋಲ್ಮಾಲ್: ಈ ಸೊಸೈಟಿಯಲ್ಲಿ ಒಂದೇ ದಿನ 5,000ಕ್ಕೂ ಹೆಚ್ಚು ಷೇರು ಅರ್ಜಿ ಅಂಗೀಕಾರ

19/02/2026 6:35 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.