ಶಿವಮೊಗ್ಗ: ಕಿರಿಯ ವಯಸ್ಸಿನಲ್ಲಿಯೇ ನ್ಯಾಯಾಧೀಶರಾಗಿ ಆಯ್ಕೆಯಾದಂತ ತಮ್ಮ ವಿಧಾನಸಭಾ ಕ್ಷೇತ್ರದ ಸಂಯುಕ್ತಾ ಎಸ್ ಮುಪ್ಪಾನೆ ಹಾಗೂ ರಕ್ಷಿತಾ ಅವರಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅಭಿನಂದಿಸಿದ್ದಾರೆ.
ಇಂದು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ನನ್ನ ಕ್ಷೇತ್ರದ ಸಾಗರ ತಾಲ್ಲೂಕಿನ ಅರಲಗೋಡು ಗ್ರಾಮ ಪಂಚಾಯ್ತಿಯ ಜೇಗಳ ಗ್ರಾಮದ ಸಂಯುಕ್ತಾ ಹಾಗೂ ಹೊಸನಗರ ತಾಲ್ಲೂಕಿನ ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಳೇಶ್ವರದ ರಕ್ಷಿತಾ.ಕೆ.ಎಸ್ ಅವರು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಅವರ ಸಾಧನೆ ಇತರರಿಗೂ ಮಾದರಿಯಾದಂತದ್ದು ಎಂದಿದ್ದಾರೆ.
ನ್ಯಾಯಾಧೀಶರಾಗಬೇಕು ಎಂಬುದು ಅನೇಕರ ಆಸೆಯಾಗಿದೆ. ಆ ಆಸೆಯನ್ನು ಜೇಗಳ ಗ್ರಾಮದ ಸಂಯುಕ್ತಾ.ಎಸ್ ಮುಪ್ಪಾನೆ, ಹೊಸನಗರದ ಕಾಳೇಶ್ವರದ ರಕ್ಷಿತಾ ಕೆ.ಎಸ್ ಈಡೇರಿಸಿದ್ದಾರೆ. ಆ ಮೂಲಕ ಕುಟುಂಬಸ್ಥರಿಗೂ ಗೌರವ ಹೆಚ್ಚಿಸಿದ್ದಾರೆ. ಅವರ ಮುಂದಿನ ನ್ಯಾಯಾಧೀಶರ ವೃತ್ತಿ ಬದುಕು ಉತ್ತಮವಾಗಿರಲಿ ಎಂಬುದಾಗಿ ಹಾರೈಸಿ, ಅಭಿನಂದಿಸಿದ್ದಾರೆ.
ಸರ್ಕಾರದಿಂದ ಸಾರಿಗೆ ನೌಕರರ ಹಿಂಬಾಕಿ, ವೇತನ ಪರಿಷ್ಕರಣೆ ಆದೇಶದ ನಡುವೆಯೂ ನಾಳೆ ‘ಬೆಂಗಳೂರು ಚಲೋ’ ಫಿಕ್ಸ್
ಮದುವೆ ಮಂಟಪದವರು ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಬೇಕೆಂಬ ನಿಯಮಗಳಿಲ್ಲ : ಹೈಕೋರ್ಟ್








