ಶಿವಮೊಗ್ಗ: ಸಾಗರ ತಾಲ್ಲೂಕಿನ ಆನಂದಪುರದ ಶ್ರೀ ಕಡ್ಲೆಹಂಕ್ಲು ಮಾರಿಕಾಂಬ ಜಾತ್ರಾ ಮಹೋತ್ಸವವನ್ನು ಮಾರ್ಚ್.10ರಿಂದ 16ರವರೆಗೆ ನಡೆಸಲಾಗುತ್ತಿದೆ. ಜಾತ್ರಾ ಸಮಿತಿಯಲ್ಲಿ ಅನುಭವಿಗಳಿದ್ದು, ಉತ್ತಮವಾಗಿ ನಡೆಸುತ್ತಾರೆ. ಆನಂದಪುರ ಮಾರಿ ಜಾತ್ರೆಯಲ್ಲಿ ಯಾವುದೇ ಕಾರಣಕ್ಕೂ ಸಾಗರದ ಮಾರಿ ಜಾತ್ರೆಯಲ್ಲಿ ರಾಜಕೀಯ ಬೆರೆಸಿದಂತೆ ಮಾಡೋದಕ್ಕೆ ಬಿಡೋದಿಲ್ಲ. ನಾವು ರಾಜಕೀಯ ಬೆರೆಸಿ ಆನಂದಪುರ ಮಾರಿ ಜಾತ್ರೆ ಮಾಡೋದು ಇಲ್ಲ ಎಂಬುದಾಗಿ ಬಿಜೆಪಿ ಮುಖಂಡ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ರತ್ನಾಕರ ಹೊನಗೋಡು ತಿಳಿಸಿದರು.
ಇಂದು ಶಿವಮೊಗ್ಗದ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಪ್ರತಿ ಮೂರು ವರ್ಷ ಆನಂದಪುರ ಮಾರಿಕಾಂಬ ಜಾತ್ರೆಯನ್ನು ಮಾಡಲಾಗುತ್ತಿದೆ. ಪ್ರತಿ ಬಾರಿಯೂ ನೀಟಾಗಿ ಜಾತ್ರೆ ಮಾಡಿಕೊಂಡು ಬಂದಿದ್ದಾರೆ. ಆನಂದಪುರದ ಅಕ್ಕ ಪಕ್ಕದ ಹಳ್ಳಿಯ ಜನರು ಸಮಿತಿಯಲ್ಲಿ ಇದ್ದಾರೆ. ಈಗಾಗಲೇ ಎರಡು ಮೂರು ಬಾರಿ ಸಭೆ ನಡೆಸಿ ಚರ್ಚಿಸಲಾಗಿದೆ. ಆನಂದಪುರದ ಮಾರಿಜಾತ್ರೆಗೆ ಗ್ರಾಮ ಪಂಚಾಯ್ತಿಗಳಿಂದಲೂ ಸೂಕ್ತ ಬೆಂಬಲ ನೀಡಿದ್ದಾರೆ ಎಂದರು.
ಆನಂದಪುರದ ಪಂಚಾಯ್ತಿಯಿಂದ ಒಳ್ಳೆಯ ನಿರ್ಧಾರ ಕೈಗೊಳ್ಳಲಾಗಿದೆ. ಸಾಗರದ ಮಾರಿಕಾಂಬ ಜಾತ್ರೆಯಲ್ಲಿ ಫ್ಲೆಕ್ಸ್ ಗಳ ಹಾವಳಿ ಹೆಚ್ಚಾಗಿತ್ತು. ಇದು ಜಾತ್ರೆಯೋ ಫ್ಲೆಕ್ಸ್ ಗಳ ಆರ್ಭಟವೋ ಎನ್ನುವ ಮನೋಭಾವ ಉಂಟಾಗಿತ್ತು. ನನ್ನದೂ ಕೆಲವರು ಹಾಕಿದ್ದರು ಎಂದರು.
ಫ್ಲೆಕ್ಸ್ ಹಾಕಿ ಹೊಸದಾಗಿ ಪರಿಚಯ ಆಗುವ ಅಗತ್ಯವಿಲ್ಲ. ಈ ಹಿನ್ನಲೆಯಲ್ಲಿಯೇ ಆನಂದಪುರ ಪಂಚಾಯ್ತಿಯಲ್ಲಿ ಆಟೋ ನಿಲ್ದಾಣದಿಂದ ಮಾರಿಗುಡಿಗೆ ಹೋಗುವ ರಸ್ತೆಯಲ್ಲಿ ಯಾವುದೇ ಫ್ಲೆಕ್ಸ್ ಹಾಕದಂತ ನಿರ್ಣಯವನ್ನು ಮಾಡಲಾಗಿದೆ. ಅವರನ್ನು ನಾನು ಅಭಿನಂದಿಸುತ್ತೇನೆ. ಏಕೆಂದ್ರೇ ಫ್ಲೆಕ್ಸ್ ಹಾವಳಿ ಇರಬಾರದು. ಜಾತ್ರೆಯನ್ನು ಸುವ್ಯವಸ್ಥಿತವಾಗಿ ಮಾಡಿಕೊಂಡು ಹೋಗಬೇಕು ಎಂದರು.
ಸಾಗರದ ಮಾರಿ ಜಾತ್ರೆಯನ್ನು ಶಾಸಕರು ಹಾಗೂ ಅವರ ಬೆಂಬಲಿಗರು ಎಲ್ಲೋ ಒಂದು ಕಡೆ ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ರಾಜಕೀಯವಾಗಿ ಬಳಸಿಕೊಳ್ಳೋದಕ್ಕಾಗಿ ನಾನಾ ರೀತಿಯ ತಂತ್ರ ಮಾಡಿದ್ದಾರೆ ಎಂಬುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಆ ನಿಟ್ಟಿನಲ್ಲಿ ಆನಂದಪುರದ ಜಾತ್ರೆಯಲ್ಲಿ ಆಗದಂತೆ ಒಳ್ಳೆಯ ನಿರ್ಧಾರವನ್ನು ಸಮಿತಿಯವರು ಕೈಗೊಂಡಿದ್ದಾರೆ ಎಂದರು.
ನಾನು ಸುಮಾರು 25 ವರ್ಷಗಳಿಂದ ಸಾಗರದ ಜಾತ್ರೆಯನ್ನು ನೋಡಿದ್ದೇನೆ. ಕಾಗೋಡು ತಿಮ್ಮಪ್ಪ, ಹಾಲಪ್ಪ ಮಂತ್ರಿಗಳಾಗಿದ್ದಾಗಿಂದ ನೋಡಿದ್ದೇನೆ. ಅವರೆಲ್ಲರೂ ನೀಟಾಗಿ ಜಾತ್ರೆಯನ್ನು ಮಾಡಿಕೊಂಡು ಬಂದಿದ್ದಾರೆ. ಆದರೇ ಮೊನ್ನೆ ಅಧಿಕಾರಿಗಳನ್ನು ಇಟ್ಟುಕೊಂಡು ಬಳೆ ಹಂಚೋದು, ಕುಂಕುಮ ಹಂಚಿಸಿದ್ದು ಇತಿಹಾಸದಲ್ಲಿ ಇದೇ ಮೊದಲು. ಅದಕ್ಕೇ ಅಂತ ಸಮಿತಿ, ಸೇವೆ ಮಾಡೋರು ಇದ್ದಾರೆ. ಅವರು ಈ ಹಿಂದಿನಿಂದಲೂ ನೀಟಾಗಿ ಮಾಡಿಕೊಂಡು ಬಂದಿದ್ದಾರೆ. ಆದರೇ ಶಾಸಕರು ರಾಜಕೀಯ ಬೆರೆಸಿ ಹೀಗೆ ಮಾಡಿದ್ದು ಸಣ್ಣ ಹಂತದ ಅಧಿಕಾರಿಗಳಿಗೆ ಗಲಿಬಿಲಿ ಉಂಟು ಮಾಡಿತ್ತು. ಇಡೀ ಮೂರು ದಿನ ಜಾತ್ರೆಯನ್ನೇ ಗೊಂದಲ ಮಾಡಿದ್ರು. ಇದೇ ಕಾರಣಕ್ಕೇ ನಮ್ಮ ನಿಕಟಪೂರ್ವ ಅಧ್ಯಕ್ಷರಾದಂತ ಟಿ.ಡಿ ಮೇಘರಾಜ್ ಪ್ರತಿಭಟನೆಯನ್ನು ಮಾಡಿದರು. ಆ ಬಳಿಕ ಸರಿ ಹೋಯ್ತು ಎಂದರು.
ಅಧಿಕಾರಿಗಳು ಜಾತ್ರೆಯಲ್ಲಿ ಭಕ್ತಾಧಿಗಳಿಗೆ ಅನಾನುಕೂಲವಾಗದಂತೆ ವ್ಯವಸ್ಥೆ ಮಾಡಬೇಕು. ಜನಪ್ರತಿನಿಧಿಗಳು ಹೇಳಿದಂತೆ ಕುಣಿಯುವಂತ ಕೆಲಸ ಮಾಡಬಾರದು. ಆ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವಂತ ಕೆಲಸ ಮಾಡಲಿ ಎಂದು ಹೇಳಿದರು.
ಇನ್ನೂ ಮುಂದಿನ ದಿನಗಳಲ್ಲಿ ಶಾಸಕರು ಶಾಸಕ ಸ್ಥಾನದಂತೆ ಜವಾಬ್ದಾರಿಯಿಂದ, ಅಧಿಕಾರಿಗಳು ಅವರ ಅಧಿಕಾರ ವ್ಯಾಪ್ತಿಯಂತೆ ನಡೆದುಕೊಳ್ಳಬೇಕು. ಶಾಸಕರು ಜಾತ್ರೆಯನ್ನು ಮುಂದೆ ನಿಂತು ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಅವರ ಬೆಂಬಲಿಗರು ಹೇಳಬಹುದು. ಆದರೇ ಶಾಸಕರಾಗಿ ಅಧಿಕಾರಿಗಳಿಗೆ ಯಾವುದೇ ಅವ್ಯವಸ್ಥೆ ಆಗದಂತೆ ಸೂಚಿಸಬೇಕಿತ್ತು ಎಂದರು.
ಎಲ್ಲೋ ಒಂದು ಕಡೆ ತಾಲ್ಲೂಕಿನ ಶಾಸಕರು ಎಲ್ಲದಕ್ಕೂ ಅಧ್ಯಕ್ಷರಾಗಿದ್ದಾರೆ. ಅವರೇ ಮುಂದಿನ ದಿನಗಳಲ್ಲಿ ಮಾರಿಗುಡಿಗೂ ಅಧ್ಯಕ್ಷರಾದರೂ ಅಚ್ಚರಿಯಿಲ್ಲ. ನಾಗೇಂದ್ರಣ್ಣ ತೆಗೆದು ಶಾಸಕರು ಅಧ್ಯಕ್ಷರಾದರೂ ಅಚ್ಚರಿಯೇನು ಪಡಬೇಕಿಲ್ಲ ಎಂದು ಹೇಳಿದರು.
ರಾಜಕಾರಣಿಗಳಾಗಿ ಜಾತ್ರೆಯ ವೇಳೆಯಲ್ಲಿ ಸಲಹೆಯನ್ನು ಕೊಡಬೇಕೇ ವಿನಹ, ಅದನ್ನು ರಾಜಕೀಯವಾಗಿ ಬಳಸಿಕೊಳ್ಳೋದು ತಪ್ಪು ಎನ್ನುವುದು ನನ್ನ ಭಾವನೆಯಾಗಿದೆ ಎಂದರು.
ಮಾರ್ಚ್.10ರಿಂದ 16ರವರೆಗೆ ಆನಂದಪುರದ ಕಡ್ಲೆಹಂಕ್ಲು ಮಾರಿಕಾಂಬ ಜಾತ್ರಾ ಮಹೋತ್ಸವ ನಡೆಯಲಿದೆ. ಆನಂದಪುರದಲ್ಲಿ ಅನುಭವಿ ಸಮಿತಿಯವರಿದ್ದಾರೆ. ಅವರು ನೀಟಾಗಿ ಮಾಡಿಕೊಂಡು ಹೋಗುತ್ತಾರೆ. ಇಲ್ಲಿ ಸಾಗರದಲ್ಲಿ ಆದಂತೆ ಆಗಲ್ಲ. ರಾಜಕೀಯವಾಗಿ ಬಳಸಿಕೊಳ್ಳೋದಕ್ಕೂ ಬಿಡೋದಿಲ್ಲ ಎಂದರು.
ಮೊನ್ನೆ ಸಾಗರದ ಮಾರಿ ಜಾತ್ರೆಯಲ್ಲಿ ಅಧಿಕಾರಿಗಳು ನಿಂತು ಪ್ರಸಾದ ಹಂಚಿರೋದನ್ನು ನೋಡಿದ್ರೇ ಮುಂದಿನ ದಿನಗಳಲ್ಲಿ ಮಾರಿಗುಡಿಯನ್ನು ಶಾಸಕರು, ಅಧಿಕಾರಿಗಳು ಸೇರಿಕೊಂಡು ಮುಜರಾಯಿಗೆ ಸೇರಿಸೋದಕ್ಕೆ ಹೊರಟಿದ್ದಾರೋ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿ ಆಗುತ್ತಿದೆ. ಆದರೇ ಅದು ಆಗಬಾರದು. ಮೊನ್ನೆ ಶಾಸಕರು ನಡೆದುಕೊಂಡಿರೋ ರೀತಿಯನ್ನು ನೋಡಿದ್ರೇ ಸಾಗರದ ಮಾರಿಗುಡಿಯನ್ನು ಮುಜರಾಯಿಗೆ ಸೇರಿಸಿದರೂ ಸೇರಿಸಬಹುದು ಎನ್ನುವ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ ಎಂಬುದಾಗಿ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ, ಬಿಜೆಪಿ ಮುಖಂಡ ರತ್ನಾಕರ ಹೊನಗೋಡು ತಿಳಿಸಿದರು.
ಮದುವೆ ಮಂಟಪದವರು ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಬೇಕೆಂಬ ನಿಯಮಗಳಿಲ್ಲ : ಹೈಕೋರ್ಟ್
ಎಲ್ಲಾ ತಾಲ್ಲೂಕುಗಳಿಗೂ ಅಕ್ಕಪಡೆ ವಿಸ್ತರಣೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್








