ಬಳ್ಳಾರಿ : ಮಂಗಳಮುಖಿ ಜೊತೆ ಆಟೋ ಡ್ರೈವರ್ ಒಬ್ಬ ಲವ್ ಮಾಡುತ್ತಿದ್ದ. ಇದೀಗ ಅನುಮಾನ ರೀತಿಯಲ್ಲಿ ಪ್ರೇಮಿಗಳ ಸಾವಾಗಿದೆ. ಬಳ್ಳಾರಿಯ ಡೈರಿ ಕ್ರಾಸ್ ನಲ್ಲಿರುವ ಮನೆಯಲ್ಲಿ ಇಬ್ಬರು ಶವಗಳು ಪತ್ತೆಯಾಗಿದೆ.
ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದ್ದು ಮಂಗಳಮುಖಿ, ಸುಹಾಸಿನಿ ಮತ್ತು ಶೇಖರ್ ಮತ್ತು ತಿಳಿದು ಬಂದಿದೆ. ಇವರಿಬ್ಬರದು ಆತ್ಮಹತ್ಯೆ ಅಥವಾ ಕೊಲೆಯು ಎನ್ನುವುದು ತನಿಖೆಯ ನಂತರ ತಿಳಿದು ಬರಲಿದೆ ಬಳ್ಳಾರಿಯ ಬಿಮ್ಸ್ ಆಸ್ಪತ್ರೆಗೆ ಇಬ್ಬರ ಮೃತ ದೇಹ ಶಿಫ್ಟ್ ಮಾಡಲಾಗಿದೆ.
ಶೇಖರ್ ಗೆ ಸುಹಾಸಿನಿ ಮಂಗಳಮುಖಿ ಅಂತ ಗೊತ್ತಿದ್ದರೂ ಕೂಡ ಸುಹಾಸಿನಿಯ ಹಿಂದೆ ಬಿದ್ದಿದ್ದ. ಹೊಸಪೇಟೆ ತಾಲೂಕಿನ ಮಲ್ಲಪ್ಪನಗುಡಿ ನಿವಾಸಿ ಆಗಿರುವ ಶೇಖರ್, ಬಳ್ಳಾರಿ ತಾಲೂಕಿನ ಚಾಗನೂರು ನಿವಾಸಿಯಾಗಿರುವ ಸುಹಾಸಿನಿ ಇಬ್ಬರು ಕೂಡ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.








