ಬೆಂಗಳೂರು: ಅಕ್ರಮ ಸಕ್ರಮ ತಹಶೀಲ್ದಾರ್ ಅವರಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಯಾವ ವರ್ಷದಿಂದ ಯಾವ ವರ್ಷದವರೆಗೆ ಅರ್ಜಿ ಸಲ್ಲಿಸಬೇಕು ಮತ್ತು ತಹಶೀಲ್ದಾರ್ ಅವರು ಅಕ್ರಮ ಸಕ್ರಮದ ಆದೇಶ ಪ್ರತಿ ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯಕ್ಕು ಕಾಯ್ದೆಯಲ್ಲಿ ಹೇಗೆ ಕೇಳಬೇಕು.
ಮಾಹಿತಿ ಹಕ್ಕು ಕಾಯ್ದೆ 2005ರ ಸೆಕ್ಷನ್ 6(1) ಅಡಿಯಲ್ಲಿ ಕೆಳಕಂಡ ಮಾಹಿತಿಯನ್ನು ಪ್ರಮಾಣೀಕೃತ ನಕಲು ರೂಪದಲ್ಲಿ ನೀಡಬೇಕಾದೇ:
1. ತಹಶೀಲ್ದಾರ್ ಕಚೇರಿಯಲ್ಲಿ ಅಕ್ರಮ–ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ, ನಿಗದಿತ ಫಾರ್ಮ್ ಹಾಗೂ ಅಗತ್ಯ ದಾಖಲೆಗಳ ಪಟ್ಟಿ.
2. ಕಳೆದ 5 ವರ್ಷಗಳಲ್ಲಿ (____ ರಿಂದ ____ ವರೆಗೆ) ಅಕ್ರಮ–ಸಕ್ರಮ ಅರ್ಜಿಗಳನ್ನು ಸ್ವೀಕರಿಸಲು ಅನುಮತಿ ನೀಡಿದ ಎಲ್ಲಾ ಸರ್ಕಾರಿ ಆದೇಶಗಳು/ಅಧಿಸೂಚನೆಗಳ ಪ್ರಮಾಣೀಕೃತ ಪ್ರತಿಗಳು.
3. ಈ 5 ವರ್ಷಗಳ ಅವಧಿಯಲ್ಲಿ ತಹಶೀಲ್ದಾರ್ ನೀಡಿದ ಅಕ್ರಮ–ಸಕ್ರಮ ಆದೇಶದ ಪ್ರಮಾಣೀಕೃತ ಪ್ರತಿ ಪಡೆಯುವ ವಿಧಾನ, ಶುಲ್ಕ ಹಾಗೂ ಕಾಲಮಿತಿ.
4. ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಸುತ್ತೋಲೆಗಳು/ಆದೇಶಗಳ ಪಟ್ಟಿ ಹಾಗೂ ಪ್ರತಿಗಳು.
ಈ ಮೂಲಕ ಅಕ್ರಮ ಸಕ್ರಮ ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿ, ನಿಮ್ಮ ನಿವೇಶನ, ಜಮೀನು ಸಕ್ರ್ರಮಗೊಳಿಸಿಕೊಳ್ಳಿ.








