ಬೆಂಗಳೂರು : ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಸಿದ್ಧತೆ, ಸಿಎಂ ಗಾದಿಗಾಗಿ ಡಿಕೆ ಶಿವಕುಮಾರ್ ಸರ್ಕಸ್ ಮಧ್ಯೆ ಕಾಂಗ್ರೆಸ್‌ನಲ್ಲಿ ವಿದೇಶಿ ಪ್ರವಾಸ ರಾಜಕೀಯ ಜೋರಾಗಿ ನಡೆಯುತ್ತಿದೆ. ಸುಮಾರು 10ಕ್ಕೂ ಹೆಚ್ಚು ಎಂಎಲ್‌ಎಗಳು, ಎಂಎಲ್‌ಸಿಗಳು ಇವತ್ತು ರಾತ್ರಿ ವಿಮಾನ ಹತ್ತಲು ಸಿದ್ದರಾಗಿದ್ದಾರೆ.
ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ಗೆ ತೆರಳಲಿದ್ದು ಮಾರ್ಚ್ ಮೊದಲ ವಾರ ವಾಪಸ್ ಬರಲಿದ್ದಾರೆ. ಮೂಲಗಳ ಪ್ರಕಾರ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ನೇತೃತ್ವದಲ್ಲಿ ಈ ಟೂರ್ ಪ್ಲಾನ್ ನಿಗದಿಯಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ವೆಂಕಟೇಶ್ ಈ ಪ್ರವಾಸದಿಂದ ದೂರ ಉಳಿದಿದ್ದಾರೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ದೇವೇಂದ್ರಪ್ಪ, ಪುಟ್ಟರಂಗಶೆಟ್ಟಿ, ನಾಗರಾಜ್ ಹಾಗು ಹಂಪನಗೌಡ ಬಾದರ್ಲಿ, ಎಂಎಲ್ಸಿ ವಸಂತಕುಮಾರ್, ಹೆಚ್‍ಡಿ ತಮ್ಮಯ್ಯ ಆಗಮಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಇರುವ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.ಇದೆ ವೇಳೆ ನಾವು ಸ್ವಂತ ಖರ್ಚಿನಲ್ಲಿ ಪ್ರವಾಸಕ್ಕೆ ಹೋಗುತ್ತಿದ್ದೇವೆ ಎಂದು ಏರ್ಪೋರ್ಟ್ ನಲ್ಲಿ ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿ ಹೇಳಿಕೆ ನೀಡಿದರು.
ಪಶು ಸಂಗೋಪನೆ ಇಲಾಖೆಯ ಪ್ರವಾಸ ಅಂತಿದ್ದಾರೆ ಆದರೆ ಇದು ಪಶುಸಂಗೋಪನೆ ಇಲಾಖೆಯ ಪ್ರವಾಸ ಅಲ್ಲ ಇದು ವೈಯಕ್ತಿಕ ಪ್ರವಾಸ. ನಾವು ಯಾರ ಬಣದ ಶಾಸಕರಲ್ಲ ಡಿಕೆ ಶಿವಕುಮಾರ್ ಅವರು, ನಮ್ಮ ಪಕ್ಷದ ಅಧ್ಯಕ್ಷರು ಪ್ರವಾಸದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೂ ಮಾಹಿತಿ ಇದೆ. ಡಿಕೆ ಶಿವಕುಮಾರ್ ಅವರು ಪ್ರವಾಸ ಆಯೋಜಿಸಿದ್ದಾರೆ ಅಲ್ಲಿಯೂ ಹೋಗುತ್ತೇವೆ. ವಿದೇಶಕ್ಕೆ ಹೋಗಿ ಶಕ್ತಿ ಪ್ರದರ್ಶನ ಮಾಡಬೇಕಾ? ಸಿಎಂ ಬಡಾವಣೆ ವಿಚಾರ ವರಿಷ್ಠರು ನೋಡಿಕೊಳ್ಳುತ್ತಾರೆ. ಪಕ್ಷದ ಶಾಸಕಾಂಗ ಸಭೆಯಲ್ಲಿ ಅದು ನಿರ್ಧಾರವಾಗುತ್ತದೆ ಎಂದು ಸಿರಗುಪ್ಪ ಶಾಸಕ ನಾಗರಾಜ್ ತಿಳಿಸಿದರು.








