ಬೀದರ್: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ ಎನ್ನುವಂತೆ ಆಕಸ್ಮಿಕವಾಗಿ ಕಾರಂಜಾ ಡ್ಯಾಂನ ಕಾಲುವೆಗೆ ಬಿದ್ದು ತಂದೆ-ಮಗ ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿಯಲ್ಲಿ ಈ ಘಟನೆ ನಡೆದಿದೆ. ಹಳ್ಳಿಖೇಡ್(ಬಿ) ಗ್ರಾಮದ ವಿಶ್ವನಾಥ(50) ಹಾಗೂ ಅಮರೇಶ(23) ಕಾಲು ಜಾರಿ ಬಿದ್ದು ಡ್ಯಾಂನಲ್ಲಿ ಸಾವನ್ನಪ್ಪಿದ್ದಾರೆ.
ಬೀದರ್ ನಲ್ಲಿ ಸೀಮೆಂಟ್ ಖಾಲಿ ಮಾಡಿ ವಾಪಾಸ್ ಊರಿಗೆ ಹೋಗುತ್ತಿದ್ದರು. ಈ ವೇಳೆ ಕಾಲುವೆಗೆ ಇಳಿದು ಕೈಕಾಲು ತೊಡೆದುಕೊಳ್ಳುತ್ತಿದ್ದ ಪುತ್ರ ಅಮರೇಶ್ ಕಾಲು ಜಾರಿ ಕಾರಂಜಾ ಡ್ಯಾಂನ ಕಾಲುವೆಗೆ ಬಿದ್ದಿದ್ದರು. ಪುತ್ರನನ್ನು ರಕ್ಷಿಸೋದಕ್ಕೆ ಹೋಗಿ ತಂದೆ ವಿಶ್ವನಾಥ್ ಕೂಡ ಸಾವನ್ನಪ್ಪಿದ್ದಾರೆ.
ತಂದೆ-ಮಗನ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಕಾರಂಜಾ ಡ್ಯಾಂ ಕಾಲುವೆಯಿಂದ ಹೊರತೆಗೆದಿದ್ದಾರೆ. ಈ ಸಂಬಂಧ ಬೀದರ್ ನ ಧನ್ನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.26ಕ್ಕೆ ನಟಿ ರಶ್ಮಿಕಾ ಮಂದಣ್ಣ-ನಟ ವಿಜಯ್ ದೇವರಕೊಂಡ ಮದುವೆ? ಆಮಂತ್ರಣ ಪತ್ರಿಕೆ ವೈರಲ್ | Rashmika Mandanna








