ಶಿವಮೊಗ್ಗ: ಫೆಬ್ರವರಿ.3ರಿಂದ 11ರವರೆಗೆ 9 ದಿನಗಳ ಕಾಲ ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬೆ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು. 9 ದಿನಗಳಲ್ಲೇ ಹುಂಡಿಗೆ ಭಕ್ತರ ಕಾಣಿಕೆಯ ಮಹಾಪೂರವೇ ಹರಿದು ಬಂದಿದೆ. ಇಂದಿನ ಹುಂಡಿ ಏಣಿಕೆ ವೇಳೆಯಲ್ಲಿ 77 ಲಕ್ಷದ 40 ಸಾವಿರ ಕಾಣಿಕೆ ಹಣ ಸಂಗ್ರಹವಾಗಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಸಾಗರದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದಿಂದ ಮಾಹಿತಿ ತಿಳಿದು ಬಂದಿದ್ದು, ಇಂದು ಮಾರಿಕಾಂಬ ಜಾತ್ರಾ ಮಹೋತ್ಸವದ ವೇಳೆಯಲ್ಲಿ ಇರಿಸಲಾಗಿದ್ದಂತ ಹುಂಡಿಗಳನ್ನು ತೆರೆದು ನೋಟುಗಳನ್ನು ಏಣಿಕೆ ಮಾಡಲಾಗಿದೆ. ಈ ವೇಳೆ 77 ಲಕ್ಷದ 40 ಸಾವಿರ ಹಣ ಸಂಗ್ರಹವಾಗಿರೋದಾಗಿ ಮೂಲಗಳು ತಿಳಿಸಿವೆ.
ಇನ್ನೂ ಕಾಯಿನ್ ಗಳ ಏಣಿಕೆ ಬಾಕಿ ಉಳಿದಿದೆ. 4 ಲಕ್ಷಕ್ಕೂ ಹೆಚ್ಚು ಕಾಯಿನ್ ಇರೋದಾಗಿ ಹೇಳಲಾಗುತ್ತಿದೆ. ಹೀಗಾಗಿ 2026ರ ಸಾಗರದ ಇತಿಹಾಸ ಪ್ರಸಿದ್ಧ ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ 80 ರಿಂದ 81 ಲಕ್ಷ ಹುಂಡಿ ಹಣ ಸಂಗ್ರಹವಾಗಿರೋದಾಗಿ ಸಮಿತಿಯ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಅಂದಹಾಗೇ ಮೂರು ವರ್ಷಗಳ ಹಿಂದೆ ಸಾಗರದ ಮಾರಿಕಾಂಬೆ ಜಾತ್ರಾ ಮಹೋತ್ಸವದ ವೇಳೆಯಲ್ಲಿ 67 ಲಕ್ಷ ಹುಂಡಿ ಹಣ ಸಂಗ್ರಹವಾಗಿತ್ತು. ಇದು ಈ ಬಾರಿ 80 ರಿಂದ 81 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ 2026ರಲ್ಲಿ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ 13 ಲಕ್ಷಕ್ಕೂ ಹೆಚ್ಚು ಹುಂಡಿ ಹಣ ಹೆಚ್ಚುವರಿಯಾಗಿ ಕಾಣಿಕೆಯಾಗಿ ಬಂದಂತೆ ಆಗಿದೆ ಎಂಬುದಾಗಿ ಸಮಿತಿಯ ಮೂಲಗಳಿಂದ ತಿಳಿದು ಬಂದಿದೆ.
ನಾಳೆ ಕೂಡ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವದಲ್ಲಿ ಸಂಗ್ರಹವಾಗಿರುವಂತ ಹುಂಡಿ ಹಣದ ಕಾಣಿಯ ರೂಪದಲ್ಲಿ ಬಂದಿರುವಂತ ಕಾಯಿನ್ ಹಾಗೂ ಬಂಗಾರ, ಬೆಳ್ಳಿಯ ವಸ್ತುಗಳ ಏಣಿಕೆ ಕಾರ್ಯವು ಮುಂದುವರೆಯಲಿದೆ. ಆ ಬಳಿಕ 2026ರಲ್ಲಿ ಸಾಗರದ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದಲ್ಲಿ ಹುಂಡಿಗೆ ಕಾಣಿಕೆ ರೂಪದಲ್ಲಿ ಸಂಗ್ರಹವಾದಂತ ಹಣದ ಸಂಪೂರ್ಣ ಮೊತ್ತ ಸ್ಪಷ್ಟವಾಗಿ ತಿಳಿಯಲಿದೆ.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು…
BIG NEWS: KSRTC ಬಸ್ಸಿನಲ್ಲಿ 30ಕೆಜಿ ವರೆಗೆ ಲಗೇಜ್ ಫ್ರೀ, ಆನಂತರಕ್ಕೆ ದರ ಅನ್ವಯ; ನಿಗಮದ ಸ್ಪಷ್ಟನೆ
BIG BREAKING: ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು | T20 World Cup








