ಬೆಂಗಳೂರು : ಸ್ಥಳೀಯ ಸಂಸ್ಥೆ ಚುನಾವಣೆಗು ಮುನ್ನ ಮೈತ್ರಿ ನಾಯಕರಲ್ಲಿ ಇದೀಗ ಬಿರುಕು ಮೂಡಿದೆ. ಗೊಂದಲದ ನಡುವೆ ಜೆಡಿಎಸ್ ಪಕ್ಷ ಜೆಡಿಎಸ್ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದು, ಸೀಟು ಹಂಚಿಕೆಯಲ್ಲಿ ಸಮನ್ವಯತೆ ಮೂಡದಿದ್ದರೆ ಪ್ಲಾನ್ ಎ ಮತ್ತು ಪ್ಲಾನ್ ಬಿ ತಕ್ಕಂತೆ 85ರಿಂದ 100 ವಾರ್ಡ್ಗಳಲ್ಲಿ ಎಚ್ ಡಿ ಕುಮಾರಸ್ವಾಮಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ಮಾಡಿಕೊಂಡಿದ್ದಾರೆ.
ಅದಕ್ಕೆ ಪೂರಕವಾಗಿ ಎರಡು ಸಭೆ ಮಾಡಿರುವ ಎಚ್ ಡಿ ಕುಮಾರಸ್ವಾಮಿ ಸೀಟು ಹಂಚಿಕೆ ವೇಳೆ ಕನಿಷ್ಠ 70ರಿಂದ 80 ಸೀಟ್ ಕೇಳಲು ನಿರ್ಧಾರ ಮಾಡಿದ್ದಾರೆ. ಬಿಜೆಪಿ 80 ಸೀಟ್ ಬಿಟ್ಟು ಕೊಟ್ಟರೆ ಮೈತ್ರಿ ಆಗಿ ಚುನಾವಣಾ ಹೋರಾಟ ಮಾಡಲಾಗುತ್ತೆ. 70 ರಿಂದ 80 ಸೀಟ್ ಬಿಟ್ಟು ಕೊಡದಿದ್ದರೆ ಪ್ರತ್ಯೇಕವಾಗಿ ಸ್ಪಂದಿಸಲು ಹೆಚ್ ಡಿ ಕುಮಾರಸ್ವಾಮಿ ಚಿಂತನೆ ನಡೆಸುತ್ತಿದ್ದಾರೆ. ಐದು ಪಾಲಿಕೆಗಳ 369 ವಾರ್ಡ್ಗಳಲ್ಲಿ ಸಿದ್ಧತೆ ನಡೆಸಲು ಎಸ್ ಡಿ ಕುಮಾರಸ್ವಾಮಿ ಕರೆ ನೀಡಿದ್ದಾರೆ ಬೆಂಗಳೂರು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ ಹೀಗಾಗಿ ಮೈತ್ರಿ ನಾಯಕರು ಮುಂದಿನ ನಡೆ ಇದೀಗ ಕುತೂಹಲ ಮೂಡಿಸಿದೆ.








