ಬೆಂಗಳೂರು : ಇತ್ತೀಚಿಗೆ ಕೆನಡಾದಲ್ಲಿ ಗುಂಡಿನ ದಾಳಿಗೆ ತುಮಕೂರು ಮೂಲದ ವ್ಯಕ್ತಿಯೊಬ್ಬ ಬಲಿಯಾಗಿದ್ದ. ಇದೀಗ ಅಮೆರಿಕಾದಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಒಬ್ಬ ನಾಪತ್ತೆಯಾಗಿದ್ದಾನೆ. ಕರ್ನಾಟಕ ಮೂಲದ 22 ವರ್ಷದ ವಿದ್ಯಾರ್ಥಿ ಸಾಕೆತ್ ನಾಪತ್ತೆಯಾಗಿದ್ದಾನೆ.
ಸಾಕೆತ್ ಶ್ರೀನಿವಾಸಯ್ಯ (22) ನಾಪತ್ತೆಯಾದ ವಿದ್ಯಾರ್ಥಿ ಎಂದು ತಿಳಿದು ಬಂದಿದ್ದು, ಈತ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ರಾಸಾಯನಿಕ ಜೈವಿಕ ಅಣು ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಕಾಣೆಯಾಗಿದ್ದಾನೆ. ನಾಪತ್ತೆಯಾಗಿರುವ ಸಾಕೇತ್ ಎಲ್ಲಿ ಹೋದ ಅಂತ ಇದುವರೆಗೂ ಗೊತ್ತಾಗುತ್ತಿಲ್ಲ ಹೀಗಾಗಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ತಮ್ಮ ಮಗನನ್ನು ಹುಡುಕಿ ಕೊಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.








