ಶಿವಮೊಗ್ಗ: ಜಿಲ್ಲೆಯ ಸಾಗರದಲ್ಲಿ ಹಗಲು ಹೊತ್ತಿನಲ್ಲೇ ಕಳ್ಳತನಕ್ಕೆ ಇಳಿದಂತ ಕಳ್ಳನೊಬ್ಬನನ್ನು ಗ್ರಾಮಸ್ಥರು ರೆಡ್ ಹ್ಯಾಂಡ್ ಹಿಡಿದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಕಳ್ಳನನ್ನು ಊರ ತುಂಬೆಲ್ಲ ಮೆರವಣಿಗೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಕಾನಲೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಂಕೇರಿ ಗ್ರಾಮದಲ್ಲಿ ಹಾಡಹಗಲೇ ಕಳ್ಳನೊಬ್ಬ, ಕಬ್ಬಳ್ಳಿ ಹುಚ್ಚಪ್ಪ ಎಂಬುವರ ಮನೆಯ ಕಿಟಕಿ ಮುರಿದು ಒಳಗೆ ಹೋಗಿದ್ದಾನೆ.
ಮನೆಯ ಒಳಗಡೆ ಶಬ್ದವಾಗುತ್ತಿದ್ದಂತ ಗಮನಿಸಿದಂತ ಗ್ರಾಮಸ್ಥರು, ಅನುಮಾನಗೊಂಡು ನೋಡಿದಾಗ ಕಳ್ಳನೊಬ್ಬ ನುಗ್ಗಿ, ಕಳ್ಳತನ ಮಾಡುತ್ತಿರೋದು ಕಂಡು ಬಂದಿದೆ. ಕೂಡಲೇ ಅಲರ್ಟ್ ಆದಂತ ಹೊಂಕೇರಿ ಗ್ರಾಮಸ್ಥರು, ಬಾಗಿಲಿ ತೆಗೆದು ಒಳಹೋಗಿ ಕಳ್ಳನನ್ನು ರೆಡ್ ಹ್ಯಾಂಡ್ ಆಗಿಯೇ ಹಿಡಿದಿದ್ದಾರೆ.
ಅಂದಹಾಗೇ ಹೊಂಕೇರಿಯ ಕಬ್ಬಳ್ಳಿ ಹುಚ್ಚಪ್ಪ ಅವರ ಮನೆಗೆ ನುಗ್ಗಿದಂತ ಕಳ್ಳ, ಬೀರು ಮುರಿದಿದ್ದನು. ಅಲ್ಲದೇ ಅದರಲ್ಲಿ ಕಬ್ಬಳ್ಳಿ ಹುಚ್ಚಪ್ಪ ಅವರು ಬೆಲ್ಲ ಮಾರಿ ಇರಿಸಿದ್ದಂತ 50,000 ಹಣ, ಚಿನ್ನಾಭರಣ ದೋಚಿದ್ದನು ಎನ್ನಲಾಗಿದೆ. ಬಾಗಿಲು ಮೂಲಕ ಗ್ರಾಮಸ್ಥರು ಒಳಗೆ ನುಗ್ಗಿ ಹಿಡಿದಾಗ ಇದೆಲ್ಲವೂ ಸಿಕ್ಕಿದೆ.
ಕಳ್ಳನನ್ನು ವಿಚಾರಿಸಿದಾಗ ಒಮ್ಮೊಮ್ಮೆ ಒಂದೊಂದು ಊರಿನ ಹೆಸರನ್ನು ಹೇಳಿದ್ದಾನೆ. ಚೆನ್ನಾಗಿ ಥಳಿಸಿದಂತ ಗ್ರಾಮಸ್ಥರು, ಊರಿನ ತುಂಬೆಲ್ಲ ಕಳ್ಳನನ್ನು ಟೆಂಪೋದಲ್ಲಿ ಮೆರವಣಿಗೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಆಗಮಿಸಿದಾಗ, ಕಳ್ಳನನ್ನು ಅವರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸುತ್ತಿರುವಂತ ಸಾಗರ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ ನಾಯಕ್, ಆ ಬಳಿಕ ಕಾನೂನು ಕ್ರಮವಹಿಸುತ್ತಿರುವುದಾಗಿ ತಿಳಿದು ಬಂದಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ರಾಜ್ಯ ಸರ್ಕಾರದಿಂದ ಪೊಲೀಸ್ ಸಿಬ್ಬಂದಿಗೆ ಗುಡ್ ನ್ಯೂಸ್: ಪಿಸಿಯಿಂದ, ASI ದರ್ಜೆಯ ಸಿಬ್ಬಂದಿಗೆ ವಿಶೇಷ ರಜೆ
BREAKING : ಅಬಕಾರಿ ಬಳಿಕ ‘RTO’ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ತಪಾಸಣೆ ಮಾಡದೇ ವಾಹನಗಳಿಗೆ ‘FC’ ವಿತರಣೆ!








