ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಗ್ರಾಮದಲ್ಲಿ ಇದೀಗ ಶಿಲಾಯುಗ ಕಾಲದ ಮತ್ತೊಂದು ಅಸ್ತಿಪಂಜರ ಪತ್ತೆಯಾಗಿದೆ. ಗ್ರಾಮದ ಗೌಡರ ಮೂಲೆ ಪ್ರದೇಶದಲ್ಲಿ ಮೂರನೇ ಅಸ್ತಿಪಂಜರ ಪತ್ತೆಯಾಗಿದೆ. ಮಡಿಕೆ ಹೊರ ತೆಗೆಯುವ ವೇಳೆ ಮೂರನೇ ಅಸ್ತಿಪಂಜರ ಪತ್ತೆಯಾಗಿದೆ.
ಸಂಶೋಧಕರು ಉತ್ಖನ ಕಾರ್ಯವನ್ನು ಸ್ಥಗಿತಗೊಳಿಸಿದ್ದು, ಫೆಬ್ರವರಿ 12ರ ವರೆಗೆ ಮಾತ್ರ ಉತ್ಖನಕ್ಕೆ ಅನುಮತಿ ನೀಡಲಾಗಿತ್ತು. ಸದ್ಯ ಉತ್ಖನನ ಸ್ಥಳಕ್ಕೆ ಬಳ್ಳಾರಿಯ ಎಸ್ ಪಿ ಸುಮನ್ ಫನೇಕರ್ ಭೇಟಿ ನೀಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕೂಡ ಬಳ್ಳಾರಿಯಲ್ಲಿ ಸಂಶೋಧಕರು ಉತ್ಖನನ ಮಾಡುವಾಗ ಶಿಲಾಯುಗದ ಮಾನವನ ಅಸ್ತಿಪಂಜರಗಳು ಪತ್ತೆಯಾಗಿದ್ದವು.ಇದೀಗ ಮೂರನೇ ಮಾನವನ ಅಸ್ತಿ ಪಂಜರ ಪತ್ತೆಯಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.








