ಚಿಕ್ಕಮಗಳೂರು: ನಕಲಿ ಮರಣ ಪ್ರಮಾಣಪತ್ರ ನೀಡುವಂತೆ ಕಿರುಕುಳ ನೀಡ್ತಿದ್ದಾರೆ. ಕಡೂರು ಶಾಸಕ ಆನಂದ್ ಪಿಎ ಮಂಜುನಾಥ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ತಾಲ್ಲೂಕು ಕಚೇರಿ ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್ ಆರೋಪ ಮಾಡಿದ್ದಾರೆ. ಆ ಕೆಲಸ ಮಾಡದೇ ಇದ್ದ ಕಾರಣ ಇದೀಗ ಸ್ಥಳ ತೋರಿಸದೇ ತನ್ನನ್ನು ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಕಚೇರಿ ನಿರೀಕ್ಷಕ ಇಕ್ಬಾಲ್ ಈ ಆರೋಪ ಮಾಡಿದ್ದಾರೆ. ಕಡೂರು ಶಾಸಕ ಆನಂದ್ ಶಿಫಾರಸ್ಸಿನ ಮೇರೆಗೆ ನನ್ನನ್ನು ವರ್ಗಾವಣೆ ಮಾಡಲಾಗಿದೆ. ಶಾಸಕರ ಪಿಎ ತುಂಬಾ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ. ಪಿಎ ಮಂಜುನಾಥ್ ಪ್ರತಿ ತಿಂಗಳು ರೂ.25,000 ನೀಡುವಂತೆ ಒತ್ತಾಯಿಸುತ್ತಿದ್ದಾರೆ. ನಾನು ಮುಸ್ಲೀಂ ಸಮುದಾಯದವನು ಎನ್ನುವ ಕಾರಣಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.
ನಕಲಿ ಮರಣ ಪ್ರಮಾಣಪತ್ರ ನೀಡುವಂತೆ ಕಿರುಕುಳ ನೀಡುತ್ತಾರೆ. ಅವರು ಹೇಳಿದಂತೆ ಕೇಳದಿದ್ದಕ್ಕೆ ಸ್ಥಳ ನಿಯೋಜಿಸದೇ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವೆ. ಟ್ರಾನ್ಸ್ ಫರ್ ಟಪಾಲ್ ಪುಸ್ತಕದ ಮೇಲೆ ಉಲ್ಲೇಖಿಸಿದ್ದ ಇಕ್ಬಾಲ್. ನಾನು ಆತ್ಮಹತ್ಯೆ ಮಾಡಿಕೊಳ್ಳುವುದು ಸತ್ಯವೆಂದು ಬರೆದಿದ್ದರು.
ಟ್ರಾನ್ಸ್ ಫರ್ ಆದೇಶದ ಪ್ರತಿ ಮೇಲೆ ಬರೆದು ಬಂದಿದ್ದೇನೆಂದು ಇಕ್ಬಾಲ್ ತಿಳಿಸಿದ್ದಾರೆ. ಶಾಸಕ ಆನಂದ್, ಪಿಎ ಮಂಜುನಾಥ್, ತಹಶೀಲ್ದಾರ್ ಪೂರ್ಣಿಮಾ, ಡಿಎಸ್ಓ ಶಿವಕುಮಾರ್ ಸೇರಿದಂತೆ ಐವರಿಂದ ನನಗೆ ಕಿರುಕುಳ ನೀಡುತ್ತಿದ್ದಾರೆ. ಈ ಐವರ ಕಿರುಕುಳ ಸಹಿಸಲಾಗದೇ ನಾನು ಆತ್ಮಹತ್ಯೆ ಮಾಡಿಕೊಳ್ಳುವೆ. ನನ್ನ ಕುಟುಂಬಕ್ಕೆ ನ್ಯಾಯಬೇಕೆಂದು ಟಪಾಲ್ ಬುಕ್ ಮೇಲೆ ಬರಹ.
ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬರೆದು ನಾಪತ್ತೆಯಾಗಿದ್ದ ಇಕ್ಬಾಲ್. ಅನುಚಿತ ವರ್ತನೆ ಆರೋಪದಡಿ ಇಕ್ಬಾಲ್ ವರ್ಗಾವಣೆಗೆ ಶಿಫಾರಸ್ಸು ಮಾಡಲಾಗಿತ್ತು. ಸ್ಥಳೀಯರಿಂದ ದೂರು ಬಂದಿದೆ ಎಂದು ಶಿಫಾರಸ್ಸನ್ನು ಕಡೂರು ಶಾಸಕ ಆನಂದ್ ಮಾಡಿದ್ದರು. ನಿರೀಕ್ಷಕ ಇಕ್ಬಾಲ್ ಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿತ್ತು.
ಸರ್ಕಾರಿ ಶಾಲೆಗಳಲ್ಲಿ ಓದಿದವರ ಸಾಧನೆ ದೊಡ್ಡದು: ಮದ್ದೂರು ಶಾಸಕ ಕೆ.ಎಂ.ಉದಯ್
SHOCKING: ಪರೀಕ್ಷೆಗೆ ಹೆದರಿ SSLC ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ








