ಬೆಂಗಳೂರು: ಕಮಲಾಕರ ಭಟ್ ಗ್ಯಾಂಗ್ ನಿಂದ ವಸಂತ್ ನಾಯ್ಕ್ ಹತ್ಯೆ ಪ್ರಕರಣದಲ್ಲಿ ಕಮಲಾಕರ್ ಭಟ್ ಗೆ ಭಿಗ್ ಶಾಕ್ ನೀಡಲಾಗಿದೆ. ಫೆಬ್ರವರಿ.21ರವರೆಗೆ ಕಮಲಾಕರ್ ಭಟ್, ಸುಚಿತ್ರಾಗೆ ಫೆಬ್ರವರಿ.21ರವರೆಗೆ ಜೈಲೇ ಗತಿಯಾಗಿದೆ.
ಇಂದು ಈ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಜೆಎಂಎಫ್ ಸಿ ಕೋರ್ಟ್ ವಿಚಾರಣೆ ನಡೆಸಿ, ಫೆಬ್ರವರಿ.21ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದೆ.
ನ್ಯಾಯಾಂಗ ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ, ಇಂದು ಪೊಲೀಸರು ವೀಡಿಯೋ ಕಾನ್ಫೆರೆನ್ಸ್ ಮೂಲಕ ಐವರು ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು. ವೀಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆಗೆ ಐವರು ಆರೋಪಿಗಳು ಹಾಜರಾಗಿದ್ದರು.
ಎ1 ಸುಚಿತ್ರಾ ನಾಯ್ಕ್, ಎ2 ಲೋಕನಾಥ್, ಎ3 ಕಮಲಾಕರ ಭಟ್, ಎ4 ಆಕಾಶ್, ಎ5 ವಿನಯ್ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ. 8 ಆರೋಪಿಗಳ ಪೈಕಿ ಮೂವರು ಪೊಲೀಸರ ವಶದಲ್ಲಿದ್ದರು. ಫೆಬ್ರವರಿ.13ರಂದು ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದರು.
BREAKING: ಬಿಜೆಪಿ ಕಾರ್ಯಕರ್ತನಿಗೆ ನೀಡಿದ್ದ ರಾಜ್ಯ ಸಚಿವ ಸ್ಥಾನ ಹಿಂಪಡೆದ ಸರ್ಕಾರ
SHOCKING: ಪರೀಕ್ಷೆಗೆ ಹೆದರಿ SSLC ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ








