ಬೆಂಗಳೂರು : ಶೀಘ್ರದಲ್ಲಿಯೇ ಬಜೆಟ್ ಮಂಡನೆ ದಿನಾಂಕ ಘೋಷಣೆ ಮಾಡುತ್ತೇನೆ. ಅಲ್ಲದೇ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ವಿಚಾರವಾಗಿ ನಾನು ಮತ್ತೆ ಡಿಕೆ ಶಿವಕುಮಾರ್ ಸಹ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು ಪಟ್ಟದ ಆಟಕ್ಕೆ ಸಿಎಂ ಸಿದ್ದರಾಮಯ್ಯ ರಾಂಗ್ ಆದರು. ನಾನಾಗಲಿ ಡಿಕೆ ಶಿವಕುಮಾರ್ ಅಗಲಿ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ಶೀಘ್ರದಲ್ಲಿಯೇ ಬಜೆಟ್ ಮಂಡನೆ ದಿನಾಂಕ ಹೇಳುತ್ತೇನೆ. ಹಬ್ಬ ಮುಗಿಯಲಿ ಹಬ್ಬ ಮುಗಿದ ಮೇಲೆ ಹೇಳುತ್ತೇನೆ ಎಂದು ತಿಳಿಸಿದರು.
ಪಟ್ಟದ ವಿಚಾರವಾಗಿ ಪದೇ ಪದೇ ಅದೇ ಪ್ರಶ್ನೆ ಕೇಳಬೇಡಿ. ಬೇರೆ ಏನು ಕೇಳೋಕೆ ಇಲ್ವಾ? ಯಾರೂ ಹೇಳಿದ್ದರೋ ಅವರಿಗೆ ಕೇಳಿ ಡಿಕೆ ಸುರೇಶ್ ಏನ್ ಹೇಳುತ್ತಾರೋ ಅವರನ್ನೇ ಕೇಳಿ ಎಂದು ಸಿಡಿಮಿಡಿಗೊಂಡರು. ಇನ್ನು ಶಾಸಕರು ವಿದೇಶ ಪ್ರವಾಸ ಕೈಗೊಳ್ಳುತ್ತಿರುವ ವಿಚಾರವಾಗಿ, ಅವರ ಸ್ವಂತ ದುಡ್ಡಲ್ಲಿ ಹೋದರೆ ಬೇಡ ಅನ್ನೋಕಾಗುತ್ತ ಎಂದು ತಿಳಿಸಿದರು.








