ಬೆಂಗಳೂರು : HRMS-2 ಗೆ ಸಂಬಂಧಿಸಿದ ಸಮಸ್ಯೆಗಳನ್ನು Helpdesk ಹಾಗೂ ಇಲಾಖಾ ನೋಡಲ್ ಅಧಿಕಾರಿಗಳ ಮೂಲಕ ಪರಿಹರಿಸುವ ಬಗ್ಗೆ ರಾಜ್ಯ ಸರ್ಕಾರ ಮಹತ್ವದ ಅದೇಶ ಹೊರಡಿಸಿದೆ.
ಏನಿದೆ ಆದೇಶದಲ್ಲಿ?
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, On board ಮಾಡುವ ಪೂರ್ವದಲ್ಲಿ ತಮ್ಮ ಇಲಾಖಾ ಹಂತದಲ್ಲಿ ಏರ್ಪಡಿಸಿದ್ದ D.D.O ಗಳಿಗೆ ದಿನಾಂಕ: 28.08.2025 ರಂದು HRMS-2 ತಂತ್ರಾಂಶದ ಬಳಕೆಯ ಬಗ್ಗೆ ತರಭೇತಿ ನೀಡಲಾಗಿರುತ್ತದೆ. ಜೊತೆಗೆ HRMS-2 ತಂತ್ರಾಂಶದ ಬಳಕೆಗೆ ಸಂಬಂಧಿಸಿದ Video ಗಳು, Manual ಗಳು ಹಾಗೂ YouTube Link ಗಳನ್ನು ಸಹ ಒದಗಿಸಲಾಗಿರುತ್ತದೆ.
HRMS-2 ತಂತ್ರಾಂಶದಲ್ಲಿ ಕಂಡು ಬರುವ ಸಮಸ್ಯೆಯನ್ನು ಸರಿಪಡಿಸಲು O&M Team ನವರು ಆದ್ಯತಯ ಮೇಲೆ, ನೇರವಾಗಿ ಸಮಸ್ಯೆಗಳ ಮಾಹಿತಿ ಪಡೆದು ಸರಿಪಡಿಸಿ ಪ್ರಗತಿಯನ್ನು ಸಾಧಿಸಲಾಗಿರುತ್ತದೆ. HRMS-2 ತಂತ್ರಾಂಶದಲ್ಲಿ Helpdesk Module ನಲ್ಲಿ Ticket Raise ಮಾಡಿ ಸರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ ಹಾಗು ಎಲ್ಲಾ ಇಲಾಖೆಗಳು /ಡಿ ಡಿ ಒ ಗಳು ಇದನ್ನು ಬಳಸಿ ತಮ್ಮ ಸಮಸ್ಯೆ ಸರಿಪಡಿಸಿಕೊಳ್ಳಬೇಕಾಗಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ Ticket Raise ಮಾಡದೇ, ವೇತನ ಹಾಗೂ ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಇಲಾಖಾ ಸಿಬ್ಬಂದಿಗಳು HRMS ಕಚೇರಿಗೆ ನೇರವಾಗಿ ಧಾವಿಸಿ O&M Team ಹಾಗೂ P.M.U ರವರಿಗೆ ಬಲವಂತವಾಗಿ, L1 Team ನ ಕೊಠಡಿಗೆ ಪ್ರವೇಶಿಸಿರುತ್ತಾರೆ. ಇದರಿಂದ HRMS ಸಿಬ್ಬಂದಿಗಳು ಭಯ ಭೀತರಾಗಿರುತ್ತಾರೆ ಹಾಗೂ ಇದರಿಂದ ದೈನಂದಿನ ಕೆಲಸಕ್ಕೆ ಅಡಚಣೆ ಉಂಟಾಗಿರುತ್ತದೆ.
ಪ್ರಸ್ತುತ 106 ಕ್ಕೂ ಹೆಚ್ಚು ಇಲಾಖೆಗಳು On board ಆಗಿರುವುದರಿಂದ ಎಲ್ಲಾ ಇಲಾಖೆಗಳಿಗು ನೀಡಲಾಗಿರುವ ವ್ಯವಸ್ಥೆಯನ್ನು ಉಪಯೋಗಿಸಿಕೊಳ್ಳಲು ಕೋರಿದೆ. ಆಯಾ ಇಲಾಖೆಗಳು ತಮ್ಮ ಇಲಾಖಾ ಹಂತದಲ್ಲಿರುವ HRMS ನೋಡಲ್ ಅಧಿಕಾರಿಗಳು ಸಮಸ್ಯೆಗಳನ್ನು ತಮ್ಮ ಹಂತದಲ್ಲ ಸರಿಪಡಿಸುವಲ್ಲಿ ಅನುಭವ ಉಳ್ಳವರಾಗಿರುತ್ತಾರೆ. ಆದ್ದರಿಂದ, ಎಲ್ಲಾ ಇಲಾಖೆಗಳಿಗೂ ಸಮಾನವಾಗಿ ಕಲ್ಪಿಸಲಾದ Helpdesk /Ticket ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಲಾಗಿದೆ.









