ರಾಯಚೂರು : ರಾಯಚೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕೆಕೆಆರ್‌ಟಿಸಿ ಬಸ್ ಡಿಕ್ಕಿಯಾಗಿ ಆಟೋದಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕರಿಗುಡ್ಡ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ.
ಮೃತರನ್ನ ಮಲ್ಲಪ್ಪ (60) ಸ್ಥಳದಲ್ಲಿ ಸಾವನಪ್ಪಿದ್ದರೆ, ಇನ್ನು ರಿಮ್ಸ್ ನಲ್ಲಿ ದಾಖಲಾಗಿದ್ದ ಮೋನಮ್ಮ (35) ಎನ್ನುವವರು ಚಿಕಿತ್ಸೆ ಫಲಕರಿಯಾಗದೆ ಸಾವನಪ್ಪಿದ್ದಾರೆ. ಓವರ್ ಟೇಕ್ ಮಾಡಲು ಹೋಗಿ ಎದುರಿಗೆ ಬರುತ್ತಿದ್ದ ಆಟೋಗೆ ಬಸ್ ಡಿಕ್ಕಿ ಹೊಡೆದಿದೆ.
ಆ ರಭಸಕ್ಕೆ ಆಟೋ ಪಲ್ಟಿಯಾಗಿ ಬಿದ್ದಿದೆ. ಆಟೋದಲ್ಲಿದ್ದ 12 ಜನರಿಗೆ ಗಂಭೀರ ಗಾಯಗಳಾಗಿದ್ದು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋಗೆ ಡಿಕ್ಕಿ ಹೊಡೆಸಿ ಬಸ್ ಚಾಲಕ ಮುಂದೆ ತೆರಳುತ್ತಿದ್ದ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







