ಬೆಂಗಳೂರು : ಬೆಂಗಳೂರಿಗರಿಗೆ ಕೇಂದ್ರ ಸರ್ಕಾರ ಹೊಸ ಸುದ್ದಿ ನೀಡಿದೆ. ಬೆಂಗಳೂರನ್ನು ಇತರೆ ಮೆಟ್ರೋ ನಗರಗಳ ಪಟ್ಟಿಗೆ ಸೇರಿಸಲಾಗಿದ್ದು, ಇನ್ಮುಂದೆ ಶೇ. 50 ರಷ್ಟು ‘HRA’ ಸಿಗಲಿದೆ ಎಂದು ನವದೆಹಲಿಯಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದರು.
ಬೆಂಗಳೂರನ್ನು ಇತರೆ ಮೆಟ್ರೋ ನಗರಗಳ ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಬೇರೆ ಮಹಾನಗರಗಳ ರೀತಿಯಂತೆ ಶೇಕಡ 50ರಷ್ಟು ಎಚ್ ಆರ್ ಎ ಬಗ್ಗೆ ಬೆಂಗಳೂರಿಗೂ ನೀಡಬೇಕೆಂಬ ಬೇಡಿಕೆ ಈಡೇರಿದೆ ಬೆಂಗಳೂರಿನ ಲಕ್ಷಾಂತರ ವೇತನದಾರರಿಗೆ ಇದು ಸಹಾಯ ಆಗಲಿದೆ. ಬೆಂಗಳೂರಿನಲ್ಲಿ ಎಚ್ ಆರ್ ಎ ಮತ್ತೆ ಶೇಕಡ 40 ರಷ್ಟು ಇತ್ತು ಇನ್ನು ಮುಂದೆ ಶೇ.50 ರಷ್ಟು ಸಿಗಲಿದೆ. ಬೆಂಗಳೂರಿನಲ್ಲಿ ಎಚ್ ಆರ್ ಎ ಬಗ್ಗೆ ಎರಡು ವರ್ಷಗಳ ಹಿಂದೆ ನಾನು ಪ್ರಸ್ತಾಪ ಮಾಡಿದ್ದೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು.








