ಬೆಂಗಳೂರು : ಇಂದು ದೆಹಲಿಗೆ ಡಿಸಿಎಂ ಡಿಕೆ ಶಿವಕುಮಾರ್ ತೆರಳಿದ್ದು, ಈ ವಿಚಾರವಾಗಿ ನನಗೆ ಯಾವುದೇ ಕರೆ ಬಂದಿಲ್ಲ ಅಕಸ್ಮಾತ್ ಬಂದ್ರೆ ನಾನು ದೆಹಲಿಗೆ ಹೋಗ್ತೇನೆ ಎಂದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಕದ್ದು ಮುಚ್ಚಿ ಮಾತನಾಡಿಲ್ಲ, ಹೈಕಮಾಂಡ್ ಮುಂದೆ ಮಾತಾಡಿದ್ದೇವೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಹೈಕಮಾಂಡ್ ಏನು ಹೇಳುತ್ತದೆ ಅದರಂತೆ ನಡೆದುಕೊಳ್ಳುತ್ತೇನೆ. ಅವರು ಏನು ಹೇಳುತ್ತಾರೋ ಅವರನ್ನೇ ಕೇಳಿ ಎಂದರು.
ದೆಹಲಿಗೆ ಹೋಗುತ್ತೀರಾ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಕರೆಯದಿದ್ರೆ ನಾನು ಯಾಕೆ ಹೋಗಲಿ. ಬಜೆಟ್ ಸಭೆ ಇದ್ದಾವೆ. ಹೈಕಮಾಂಡ್ ಕರೆದರೆ ಹೋಗುತ್ತೇನೆ. ಬಜೆಟ್ ಪೂರ್ವ ಸಿದ್ಧತೆಗೆ ಡಿ.ಕೆ. ಶಿವಕುಮಾರ್ ಗೈರು, ಅನುಮತಿ ಪಡೆದಿದ್ದಾರಾ ಎಂಬ ಪ್ರಶ್ನೆಗೆ, ಹೌದು ಲೆಟರ್ ಬರೆದಿದ್ದಾರೆ. ಅಸ್ಸೋಂ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಗೆ ಹೋಗುತ್ತೇನೆ ಅಂತ ಬರೆದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಸಭೆ ನಡೆಯುತ್ತದೆ ಎಂದರು.








