ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಲಘು ಭೂಕಂಪನ ಉಂಟಾಗಿದೆ. ಇದರಿಂದಾಗಿ ಜನರು ಮನೆಯಿಂದ ಹೊರ ಓಡಿ ಬಂದು ಕೆಲ ಕಾಲ ಬಯಲಿನಲ್ಲಿ ಕಾಲ ಕಳೆಯುವಂತಾದ ಘಟನೆ ವರದಿಯಾಗಿದೆ.
ವಿಜಯಪುರ ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಲಘು ಭೂಕಂಪನದ ಅನುಭವ ಉಂಟಾಗಿದೆ. ಮನೆಯಲ್ಲಿದ್ದಂತ ಪಾತ್ರೆಗಳು ಕೆಳಗೆ ಬಿದ್ದು ಸದ್ದು ಮಾಡಿದ್ದಾವೆ. ಕಿಟಕಿ-ಬಾಗಿಲು ಗಳು ಕೂಡ ಅಲುಗಾಡಿದ್ದಾಗಿ ಸ್ಥಳೀಯರು ಹೇಳಿದ್ದಾರೆ.
ಏಕಾಏಕಿ ಭೂಮಿ ಕಂಪಿಸಿದಂತ ಅನುಭವ ಉಂಟಾಗಿದ್ದರಿಂದ ವಿಜಯಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ. ಕೆಲ ಕ್ಷಣ ಬಯಲಿನಲ್ಲಿ ಆತಂಕ, ಭಯದಿಂದ ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಭೂಕಂಪ ಎಷ್ಟು ಪ್ರಮಾಣದಲ್ಲಿ ಆಗಿದೆ ಎನ್ನುವ ಬಗ್ಗೆ ಕೆ ಎಸ್ ಎನ್ ಡಿ ಎಂ ಸಿ ಮಾಹಿತಿ ನೀಡಿದಾಗಲೇ ಖಚಿತವಾಗಬೇಕಿದೆ.
ಕೆಂಗಲ್ ಹನುಮಂತಯ್ಯ ರಾಜ್ಯ ಕಂಡ ಪ್ರಾಮಾಣಿಕ, ಧೀಮಂತ ರಾಜಕಾರಣಿ: ಮುಖ್ಯಮಂತ್ರಿ ಸಿದ್ದರಾಮಯ್ಯ








