ನೀವು ಹೊಸ ಮನೆ ಖರೀದಿಸಿದ್ದರೂ ಅಥವಾ ಆನುವಂಶಿಕವಾಗಿ ಆಸ್ತಿಯನ್ನು ಪಡೆದಿದ್ದರೂ, ಹಿಂದಿನ ಮಾಲೀಕರ ಹೆಸರು ಹೆಚ್ಚಾಗಿ ವಿದ್ಯುತ್ ಬಿಲ್ನಲ್ಲಿ ಉಳಿಯುತ್ತದೆ. ಇದನ್ನು ಬದಲಾಯಿಸುವುದು ಒಂದು ಕಾಲದಲ್ಲಿ ಕಷ್ಟಕರವಾದ ಕೆಲಸವಾಗಿತ್ತು, ಆದರೆ ತಂತ್ರಜ್ಞಾನವು ಈಗ ಅದನ್ನು ಮತ್ತಷ್ಟು ಸರಳಗೊಳಿಸಿದೆ.
ನೀವು ಈಗ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಿಂದ ನಿಮ್ಮ ಹೆಸರಿಗೆ ನಿಮ್ಮ ವಿದ್ಯುತ್ ಸಂಪರ್ಕವನ್ನು ಯಾವುದೇ ತೊಂದರೆಯಿಲ್ಲದೆ ವರ್ಗಾಯಿಸಬಹುದು.
ಡಿಜಿಟಲ್ ಯುಗದಲ್ಲಿ ಹೆಸರು ಬದಲಾವಣೆಗಳು ಸುಲಭ
ದೇಶದ ಬಹುತೇಕ ಎಲ್ಲಾ ವಿದ್ಯುತ್ ಮಂಡಳಿಗಳು ಈಗ ತಮ್ಮ ಸೇವೆಗಳನ್ನು ಆನ್ಲೈನ್ಗೆ ಸೇರಿಸಿಕೊಂಡಿವೆ. ದೊಡ್ಡ ಪ್ರಯೋಜನವೆಂದರೆ ನೀವು ದೀರ್ಘ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಅಥವಾ ಮಧ್ಯವರ್ತಿಗಳೊಂದಿಗೆ ವ್ಯವಹರಿಸುವ ಅಗತ್ಯವಿಲ್ಲ. ಕೆಲವು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿದ್ರೆ ವಿದ್ಯುತ್ ಬಿಲ್ ನಲ್ಲಿ ಹೆಸರು ಬದಲಾಗಲಿದೆ.
ಕರೆಂಟ್ ಬಿಲ್ ಹೆಸರು ಬದಲಾವಣೆಗೆ ಬೇಕಾಗುವ ದಾಖಲೆಗಳು
ಅರ್ಜಿ ನಮೂನೆ(ಕೆಇಬಿ ಕಚೇರಿಯಲ್ಲಿ ಪಡೆಯಬೇಕು).
ಗ್ರಾಹಕರ ಆಧಾರ ಜೆರಾಕ್ಸ್.
ಪೋಟೋ-1.
ಅರ್ಜಿದಾರನ ಮೊಬೈಲ್ ಸಂಖ್ಯೆ.
ವಿದ್ಯುತ್ ಗುತ್ತಿಗೆದಾರರಿಂದ CR ಅಗ್ರಿಮೇಂಟ್.
ವಿದ್ಯುತ್ ಬಿಲ್ಲಿನ ಬಾಕಿ ಮೊತ್ತವನ್ನು ಪಾವತಿಸಿರಬೇಕು
ಬಾಂಡ್ (INDEMNITY BOND)
ಖರೀದಿಸಿದ ಮನೆಯಾಗಿದ್ದರೆ ರಿಜಿಸ್ಟರ್ ಪ್ರತಿ.
ವಂಶವೃಕ್ಷ (ತಂದೆ/ತಾತಾನಿಂದ ವರ್ಗಾವಣೆಗಾಗಿ).
ಮರಣ ಪ್ರಮಾಣ ಪತ್ರ.
ಅಗತ್ಯ ದಾಖಲಾತಿ ಸಮೇತ ನಿಮ್ಮ ಭಾಗದ ವಿದ್ಯುತ್ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ನಮೂನೆ ಪಡೆದು ವಿವರ ಭರ್ತಿ ಮಾಡಿ ಶುಲ್ಕ ಪಾವತಿ ಮಾಡಿ ಅರ್ಜಿ ಸಲ್ಲಿಸಿದ ನಂತರ ನೀವು ಸಲ್ಲಿಸಿದ ದಾಖಲೆಗಳು ಮತ್ತು ಅರ್ಜಿಯನ್ನು ಪರಿಶೀಲಿಸಿ ಅಗತ್ಯವಿದಲ್ಲಿ ಸ್ಥಳ ಭೇಟಿ ಮಾಡಿ ಪರಿಶೀಲಿಸಿ ನಿಮ್ಮ ಹೆಸರಿಗೆ ವಿದ್ಯುತ್ ಬಿಲ್ ಬರುವ ಹಾಗೆ ಕ್ರಮ ಕೈಗೊಳ್ಳುತ್ತಾರೆ.








