ಬೆಂಗಳೂರು : ನಟ ನಟಿ ಸೇರಿದಂತೆ ನಿರ್ದೇಶಕರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕನಕಪುರದ ಶ್ರೀನಿವಾಸ್ ವಿರುದ್ಧ ಬೆಂಗಳೂರಿನ ಫಿಲಂ ಚೇಂಬರ್ ಗೆ ನಟ ನಿರ್ದೇಶಕ ಜೋಗಿ ಪ್ರೇಮ್ ದೂರು ಕೊಟ್ಟಿದ್ದಾರೆ.
ನಿರ್ಮಾಪಕ ಕನಕಪುರ ಶ್ರೀನಿವಾಸ್ ಹೇಳಿಕೆಗೆ ಜೋಗಿ ಪ್ರೇಮ್ ತೀವ್ರವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಎ ಪಿ ಅರ್ಜುನ್ ಅವರು ಕೂಡ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ. ಕಾಟನ್ ಪೇಟೆ ಚಿತ್ರದ ಆಡಿಯೋ ಲಾಂಚ್ ಸಂದರ್ಭದಲ್ಲಿ ನಿರ್ದೇಶಕ ನಟ ನಟಿಯರ ಮೇಲೆ ನಿರ್ಮಾಪಕ ಕನಕಪುರ ಶ್ರೀನಿವಾಸ ಬಹಿರಂಗ ವೇದಿಕೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದರು.
ಪುನೀತ್ ರಾಜಕುಮಾರ್ ಜೋಗಿ ಪ್ರೇಮ್ ಎಪಿ ಅರ್ಜುನ್ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕರ ವಿರುದ್ಧ ಮಾತನಾಡಿದರು ಈ ನೆಲೆಯಲ್ಲಿ ಜೋಗಿ ಪ್ರೇಮ್ ಜಯಮಾಲಾ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ. ಕನಕಪುರ ಶ್ರೀನಿವಾಸ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೆಖಿಸಿದ್ದಾರೆ.








